Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಾಜಿ ಸಿದ್ದರಾಮಯ್ಯ ನೇತೃತ್ವದ ಆರ್ಮಿ ಛಿದ್ರವಾಗಿಲ್ಲ, ಅವರ ಜೊತೆ ಆಪ್ತ ಆರ್ಮಿ ಇದೆ; ಸಚಿವ ಸತೀಶ್ ಜಾರಕಿಹೊಳಿ


ಮೈಸೂರು: ಮಾಜಿ ಸಿದ್ದರಾಮಯ್ಯ ನೇತೃತ್ವದ ಆರ್ಮಿ ಛಿದ್ರವಾಗಿಲ್ಲ, ಸಿದ್ದರಾಮಯ್ಯ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ಸಂಬAಧ ಉತ್ತಮವಾಗಿದೆ. ಸಿದ್ದರಾಮಯ್ಯ ಅರ್ಮಿ ಛಿದ್ರವಾಗಿಲ್ಲ. ಈಗಲೂ ಅವರೇ ನಮ್ಮ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ದೂರದ ಬೆಟ್ಟ ನುಣ್ಣಗೆ ಅಂತಾರೆ, ಹಾಗೆ ನಿಮಗೆ ನಾವು ಚೆನ್ನಾಗಿಲ್ಲ ಅನಿಸುತ್ತೆ. ಸಿದ್ದರಾಮಯ್ಯ ನಾನು ಚೆನ್ನಾಗಿಯೇ ಇದ್ದೇವೆ.
ನಾವು ಹಿಂದೆಯೂ ಪದೇ ಪದೇ ಭೇಟಿಯಾಗುತ್ತಿರಲಿಲ್ಲ, ಜೊತೆಯಲ್ಲಿ ಓಡಾಡುತ್ತಿರಲಿಲ್ಲ. ಅಗತ್ಯವಿದ್ದಾಗ ಸೇರುತ್ತಿದ್ದೆವು. ಈಗಲೂ ಅಷ್ಟೆ. ನನ್ನ ಮೇಲೆ ಇಡಿ ದಾಳಿಯಾದ ನಂತರ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ನನ್ನನ್ನು ಭೇಟಿಯಾಗಿದ್ದರು. ಒಂದು ಮನೆಯಲ್ಲಿ ಒಬ್ಬರು ಭೇಟಿಯಾಗಿ ಧೈರ್ಯ ಹೇಳಿದರೆ ಸಾಕು, ಕುಟುಂಬದ ಎಲ್ಲರೂ ಬರಬೇಕೆಂದು ಬಯಸಬಾರದು’ ಎಂದರು. ಸಿದ್ದರಾಮಯ್ಯ ಆಪ್ತರು ಜೊತೆಯಲ್ಲೇ ಇದ್ದಾರೆ. ಸಿದ್ದರಾಮಯ್ಯ ಜೊತೆ ಆಪ್ತ ಆರ್ಮಿ ಇದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದದ್ದು ಅಹಿಂದ ಸಮಾವೇಶವಲ್ಲ. ಅದು ಹಿಂದುಳಿದ ವರ್ಗದವರ ಕಾರ್ಯಕ್ರಮ. ಆಯೋಜಕರು ನನ್ನನ್ನು ಕರೆದಿಲ್ಲವಾದ್ದರಿಂದ ಹೋಗಿರಲಿಲ್ಲ. ಏಕೆ ಕರೆಯಲಲಿಲ್ಲವೆಂದು ಕೇಳಲಾಗುತ್ತಾ? ಅಹಿಂದ ಸಂಘಟನೆ ಭದ್ರವಾಗಿದೆ’ ಎಂದು ಹೇಳಿದರು.
ಅವಕಾಶ ಸಿಕ್ಕರೆ 2028ಕ್ಕೆ ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹಿಂದೆ ಹೇಳಿದ್ದೆ. ಆದರೆ, ಸಿಎಂ ಡಿ.ಕೆ.ಶಿವಕುಮಾರ್ ಅವರೇ ಮುಂದೆಯೂ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಸಂತೋಷ. ಅವರೇ ಅಗಲಿ, ಮುಂಬರುವ ಚುನಾವಣೆಯಲ್ಲೂ ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ. ಅವರ ಪ್ರಯತ್ನ, ಫಲದಿಂದ ಸರ್ಕಾರ ಬಂದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬಾರದೇಕೆ? ಎಂದರು.
ನನಗೆ ಇನ್ನೂ ವಯಸ್ಸಿದೆ. ಈಗಲೇ ಸಿಎಂ ಆಗಬೇಕೆಂಬ ಆತುರವೇನಿಲ್ಲ. ನಾವಿನ್ನೂ ಕಾಯುತ್ತೇವೆ’ ಎಂದು ಹೇಳಿದರು.
ಇಡಿಯಿಂದ ನೋಟೀಸ್ ಬಂದಿಲ್ಲ, ಬಂದರೆ ಉತ್ತರಿಸುವೆ;
ಇಡಿ ಅಧಿಕಾರಿಗಳಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಕೊಟ್ಟರೆ ಹೋಗಿ ಉತ್ತರ ಕೊಡುತ್ತೇನೆ. ಆದರೆ, ಇಡಿ ರೈಡ್ ಯಾಕೆ ಆಯಿತು ಅಂತ ತಿಳಿದುಕೊಳ್ಳಲು ಸಮಯಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಯಲ್ಲಿ ನಾನು ಯಾವುದೇ ಕಮಿಷನ್ ತೆಗೆದುಕೊಂಡಿಲ್ಲ. ಕಮಿಷನ್ ತೆಗೆದುಕೊಂಡಿದ್ದಾರೆ, ಬಿಟ್ಟಿದ್ದಾರೆ ಎನ್ನುವುದಕ್ಕೆ ದಾಖಲೆ ಬೇಕು. ನನ್ನ ಮೇಲೆ ಯಾಕೆ ರೈಡ್ ಆಯ್ತು ಅಂತ ತಿಳಿದುಕೊಳ್ಳುವುದಕ್ಕೆ ಟೈಮ್ ಬೇಕು. ಕಳೆದ 12 ವರ್ಷದಲ್ಲಿ ಬಿಜೆಪಿಯ ಯಾವೊಬ್ಬ ನಾಯಕನ ಮೇಲೆಯೂ ಇಡಿ ರೈಡ್ ಅಗಿಲ್ಲ. ಬಿಜೆಪಿಯವರ ಮೇಲೆ ದೂರು ಕೊಟ್ಟರು ರೈಡ್ ಮಾಡುವುದಿಲ್ಲ ಎಂದರು.
ಹೊಸ ಯೋಜನೆಗಳಿಗೆ ಸರ್ಕಾರದ ಬಳಿ ಹಣವಿಲ್ಲ ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾವುದೇ ಸರ್ಕಾರ ಇದ್ದರೂ ಆರ್ಥಿಕ ಇಲಾಖೆ ಅದೇ ರೀತಿ ಪತ್ರ ಬರೆಯುತ್ತದೆ. ಅದರರ್ಥ ಸರ್ಕಾರದ ಬಳಿ ಹಣವಿಲ್ಲ ಅಂತಲ್ಲ. ಬಜೆಟ್ ಬಿಟ್ಟು ಬೇರೆ ಘೋಷಣೆ ಮಾಡುವಾಗ ಇತಿಮಿತಿಯಲ್ಲಿ ಮಾಡಬೇಕು. ಇದನ್ನೇ ಆರ್ಥಿಕ ಇಲಾಖೆ ಹೇಳಿರುವುದು. ಹೊಸ ಯೋಜನೆ ಮಾಡುವುದಕ್ಕೆ ಆಗುವುದಿಲ್ಲ. ಈಗ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಕ್ಕೆ ಮಾತ್ರ ಹಣವಿದೆ. ಹೊಸ ಯೋಜನೆಗಳಿಗೆ ಮುಂದಿನ ಬಜೆಟ್‌ನಲ್ಲಿ ಹಣ ಇಡಬೇಕು ಅಷ್ಟೇ ಎಂದು ತಿಳಿಸಿದರು.
ನೀಲಿ ಶಾಲಿನ ಬಗ್ಗೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದೇಶಕ್ಕೆ ನೀಲಿ ಶಾಲಿನ ಅವಶ್ಯಕತೆಯಿದೆ. ಇದರ ಬಗ್ಗೆ ನಮ್ಮ ಸ್ವಾಮೀಜಿ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಹೆಚ್ಚೇನೂ ಹೇಳಲ್ಲ ಎಂದು ಹೆಸರು ಹೇಳದೇ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.