Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅ.೬ರಂದು ‘ನವದುರ್ಗ ವೈಭವ’ ಸಾಂಸ್ಕೃತಿಕ ಸ್ಪರ್ಧೆ


ಮೈಸೂರು: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದವರ ಜಂಟಿ ಆಶ್ರಯದಲ್ಲಿ ಅ.೬ರಂದು ಮೈಸೂರಿನ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ‘ನವದುರ್ಗ ವೈಭವ’ ಎಂಬ ವಿಶೇಷ ಸಾಂಸ್ಕöÈತಿಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷರಾದ ಶೋಭಾ ಜೆ.ರಮೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕöÈತಿ, ಪೌರಾಣಿಕ ಪರಂಪರೆ, ದಸರಾ ಹಬ್ಬಕ್ಕೆ ಸಂಬAಧಿಸಿದ ಯಾವುದೇ ಜಾನಪದ ಕಲೆಗಳು ಹಾಗೂ ಮಹಿಳಾ ಶಕ್ತಿಯ ವೈಭವವನ್ನು ಕಲೆಯ ಮೂಲಕ ಅನಾವರಣಗೊಳಿಸುವ ಉದ್ದೇಶದಿಂದ ಅಂದು ಬೆಳಿಗ್ಗೆ ೧೧ಕ್ಕೆ ಈ ವಿಶೇಷ ಸಾಂಸ್ಕöÈತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ನವದುರ್ಗೆಯರ ಯಾವುದೇ ಒಂದು ರೂಪ ಅಥವಾ ಪೌರಾಣಿಕ ಪಾತ್ರವನ್ನು ಆಯ್ಕೆ ಮಾಡಿಕೊಂಡು ನಾಟಕ, ನೃತ್ಯ ಅಥವಾ ಅಭಿನಯದ ಮೂಲಕ ೩ರಿಂದ ೫ ನಿಮಿಷಗಳ ಅವಧಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ ಎಂದು ಹೇಳಿದರು.
ಮೊದಲು ನೋಂದಾಯಿಸಿಕೊಳ್ಳುವ ೩೦ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ, ೨ ಸಮಾಧಾನಕರ ಬಹುಮಾನ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: ೯೫೧೩೧ ೧೨೧೫೫ ೫ ೯೫೧೩೯ ೨೬೬೫೫೨ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ನಿರ್ದೆಶಕಿಯರಾದ ಶೋಭಾ, ವಿಜಯಲಕ್ಷಿ÷್ಮÃ, ವೇದಾಮಣಿ, ಚಂದ್ರಕಲಾ ರಮೇಶ್ ಉಪಸ್ಥಿತರಿದ್ದರು.