Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಹಾರಾಜನಂತೆ ಪೇಟ ಧರಿಸಿ ಅರಮನೆಗೆ ಆಗಮಿಸಿದ ಅಭಿಮನ್ಯಗೆ ಅದ್ಧೂರಿ ಸ್ವಾಗತ


ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾದಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಭಾಗವಹಿಸಲೆಂದು ಸೋಮವಾರ ಮೈಸೂರಿನ ಅಂಬಾವಿಲಾಸ ಅರಮನೆಗೆ ಮಹಾರಾಜನಂತೆ ಆಗಮಿಸಿದ ಗಜಪಡೆಯ ಮಾಜಿ ಕ್ಯಾಪ್ಟನ್ ಅಭಿಮನ್ಯುವನ್ನು ಅದ್ಧೂರಿಯಾಗಿ ಸ್ವಾಗತಿಸಿ, ರಾಜ ಮರ್ಯಾದೆ, ಗೌರವವನ್ನು ನೀಡಲಾಯಿತು.
ಈ ಬಾರಿ ನಾಡಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸಲು ವಯಸ್ಸಿನ ಕಾರಣದಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಹೊರಲು ಅಭಿಮನ್ಯು ಆನೆಯನ್ನು ಆಯ್ಕೆ ಮಾಡಿರಲಿಲ್ಲ. ಆದರೆ ಅಭಿಮಾನಿಗಳ ತೀವ್ರ ಒತ್ತಾಯದಿಂದ ಸರ್ಕಾರದ ಆದೇಶದ ಮೇರೆಗೆ ಅಭಿಮನ್ಯು ಆನೆಯನ್ನು ಈ ಬಾರಿ ದಸರಾದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಲಾರಿಯಲ್ಲಿ ಮೈಸೂರಿನ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರಕ್ಕೆ ಆಗಮಿಸಿದ ಅಭಿಮನ್ಯು ಆನೆಗೆ ಗಜಪಡೆಯೊಂದಿಗೆ ಅರಮನೆ ಮಂಡಳಿ, ಅರಣ್ಯ ಇಲಾಖೆ, ಜಿಲ್ಲಾಡಳತದಿಂದ ಸಾಂಪ್ರದಾಯ ಸ್ವಾಗತವನ್ನು ನೀಡಿದರೆ, ಅಭಿಮಾನಿಗಳು ಮಹಾರಾಜರ ಬೃಹತ್ ಮಹಾರಾಜರ ಪೇಟಾವನ್ನು ಅಭಿಮನ್ಮ್ಯಗೆ ತೊಡಿಸಿ, ಬೃಹತ್ ಹೂವಿನ ಮಾಲೆಯನ್ನು ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು. ಮಾಡಲಾಯಿತು. ಗಂಧದಗುಡಿ ಫೌಂಡೇಶನ್ ಮತ್ತು ಅಭಿಮನ್ಯು ಅಭಿಮಾನಿ ಬಳಗದ ವತಿಯಿಂದ
ಗಜರಾಜನಿಗೆ ೧೦ ಕೆಜಿ ತೂಕದ ಭವ್ಯ ಮೈಸೂರು ಪೇಟವನ್ನು ತೊಡಿಸಿ, ಮೋಸಂಬಿ ಹಣ್ಣಿನ ದೊಡ್ಡ ಹಾರ ಹಾಕಿ, ಪುಷ್ಪಾರ್ಚನೆ ಮಾಡುವ ಮೂಲಕ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಮಹಾರಾಜರ ಬೃಹತ್ ಪೇಟವನ್ನು ತನ್ನ ಹಣೆಯ ನೆತ್ತಿ ಮೇಲೆ ಧರಿಸಿದ ಅಭಿಮನ್ಯುವಿನ ರಾಜಗಾಂಭೀರ್ಯದಿAದ ಅರಮನೆಯತ್ತ ಸಾಗಿದ. ಬಳಿಕ ದಸರಾ ಗಜಪಡೆಗಳಿದ್ದ ಶೆಡ್‌ನ್ನು ಸೇರಿಕೊಂಡ.
ದಸರಾಗೆ ಅಭಿಮನ್ಯುವಿನ ಆಗಮನ ಕೇಳಿ, ಆತನ ಅಭಿಮಾನಿಗಳು ಖುಷಿಯಾಗಿದ್ದಾರೆ.
ಸಾಂಪ್ರದಾಯಿಕ ಪೂಜೆ: ಅರಮನೆಯ ಜಯಮಾರ್ತಾಂಡ ದ್ವಾರಕ್ಕೆ ಬಂದಿಳಿದ ಅಭಿಮನ್ಮ್ಯಗೆ ಹೆಣ್ಣಾನೆಗಳಾದ ರೂಪ, ಚೈತ್ರ ಗಂಡಾನೆಗಳಾದ ಪ್ರಶಾಂತ ಮತ್ತು ಗೋಪಿ ಜೊತೆ ಸಾಲಾಗಿ ನಿಲ್ಲಿಸಿ ಅರಮನೆ ಆಡಳಿತ ಮಂಡಳಿ ಹಾಗೂ ಅರಣ್ಯ ಇಲಾಖೆಯಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಅಭಿಮನ್ಯು ಆನೆಯನ್ನು ಸಾಂಪ್ರದಾಯಿಕವಾಗಿ ಅರಮನೆಗೆ ಬರಮಾಡಿಕೊಂಡು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಪ್ರಭುಗೌಡ, ಮೊದಲ ತಂಡದಲ್ಲಿ ೯ ಆನೆ, ಎರಡನೇ ತಂಡದಲ್ಲಿ ೩ ಆನೆ ಹಾಗೂ ಈಗ ಸರ್ಕಾರದ ಆದೇಶದಂತೆ ಮೂರನೇ ತಂಡದಲ್ಲಿ ಅಭಿಮನ್ಯು ಆನೆಯನ್ನು ಅರಮನೆಗೆ ಕರೆತರಲಾಗಿದ್ದು, ಈ ಆನೆಯನ್ನು ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಬಳಸಲಾಗುತ್ತದೆ. ಸದ್ಯ ಅಭಿಮನ್ಯು ಆನೆಗೆ ತಾಲೀಮಿನ ಅವಶ್ಯಕತೆ ಇಲ್ಲ ಆದರೂ ಇಲ್ಲಿನ ವಾತಾವರಣ ಹಾಗೂ ಆಹಾರ ಪದ್ಧತಿಗೆ ಹೊಂದಿಕೊಳ್ಳಲು ೧೫ ದಿನಗಳ ಕಾಲ ತಾಲೀಮನ್ನು ನಡೆಸಲಾಗುತ್ತದೆ. ಇದೇ ತಿಂಗಳ ೭,೯ ಹಾಗೂ ೧೨ ರಂದು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಗಜಪಡೆಗೆ ಸಿಡಿಮದ್ದು ತಾಲೀಮನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಅಭಿಮಾನಿಗಳು ಅಭಿಮನ್ಯು ಆನೆಯ ಮೇಲಿನ ಅಭಿಮಾನದಿಂದ ಮೈಸೂರು ಪೇಟ ತರಿಸಿದ್ದಾರೆ. ಆದರೆ ಅಭಿಮನ್ಯು ಆನೆ ಮೇಲಿನ ಅಭಿಮಾನದ ಜೊತೆಗೆ ಎಚ್ಚರಿಕೆ ಇರಲಿ ಎಂದು ಕಿವಿಮಾತು ಹೇಳಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ದಸರಾದಲ್ಲಿ ೬ ಬಾರಿ ಅಂಬಾರಿ ಹೊತ್ತು ಇಡೀ ರಾಜ್ಯದ ಜನರ ಮನಸ್ಸನ್ನು ಗೆದ್ದಿರುವ ಅಭಿಮನ್ಯು ಆನೆಗೆ ೬೦ ವರ್ಷ ವಯಸ್ಸಾಯಿತು ಎಂಬ ಕಾರಣಕ್ಕೆ ನಿವೃತ್ತಿ ನೀಡಲಾಗಿದೆ. ಆದರೂ ಅಭಿಮಾನಿಗಳ ಆಸೆಯಂತೆ ಸರ್ಕಾರ ದಸರಾದಲ್ಲಿ ನಿಶಾನೆ ಆನೆಯಾಗಿ ವಿದಾಯ ನೀಡುವ ಮೂಲಕ ಆತನಿಗೆ ಬೀಳ್ಕೊಡುಗೆ ನೀಡಲು ಸರ್ಕಾರ ನಿರ್ಧರಿಸಿರುವುದು ಒಳ್ಳೆಯದು ಎಂದು ತಿಳಿಸಿದರು.