
ಮೈಸೂರು; ಮೈಸೂರು ಮತ್ತು ಶ್ರೀರಂಗಪಟ್ಟಣ ದಸರಾ ಎರಡೂ ಕಡೆ ಅಂಬಾರಿ ಹೊರುವ ಜವಾಬ್ದಾರಿ ಅಪ್ಪ-ಮಗನ ಹೆಗಲಿಗೆ ವಹಿಸಲಾಗಿದೆ. ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನ ನಡೆಯುವ ಐತಿಹಾಸಕ ಜಂಬೂಸವಾರಿಯಲ್ಲಿ ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿ ಕುಳಿತಿರುವ ಚಿನ್ನದ ಅಂಬಾರಿಯನ್ನು ಬೆನ್ನ ಮೇಲೆ ಹೊರುವ ಪ್ರಶಾಂತ ಆನೆಯ ಮಾವುತ ಚಿಣ್ಣಪ್ಪ ಮತ್ತು ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊರುತ್ತಿರುವ ಧನಂಜಯ ಆನೆಯ ಮಾವುತ ಭಾಸ್ಕರ್ ಅವರು ತಂದೆ ಮಗನಾಗಿದ್ದಾರೆ. ಅಂಬಾರಿಯನ್ನು ತಂದೆ-ಮಗನ ಆನೆಗಳು ಹೊರುತ್ತಿರುವುದು ಅವರ ಕುಟಂಬದಲ್ಲೂ ಒಂದು ರೀತಿ ಸಂತೋಷವನ್ನೇ ಉಂಟು ಮಾಡಿದೆ. ಜಂಬೂಸವಾರಿಯಲ್ಲಿ ಧನಂಜಯ ಆನೆಯನ್ನು ಮೀಸಲು ಅಂಬಾರಿಯಾಗಿ ಇರಿಸಲಾಗಿದೆ.