Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಒತ್ತಾಯಿಸಿ ಅ.೨೩ರಂದು ಬೃಹತ್ ಹೋರಾಟ 

ಎಚ್ .ಡಿ .ಕೋಟೆ: ಸಂವಿಧಾನ ಸಂರಕ್ಷಣಾ ಪಡೆ ಕರೆಯ ಮೇರೆಗೆ ಗುರುವಾರ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ಸೇರಿ ರಾಜ್ಯದಲ್ಲಿ ನಡೆಯುತ್ತಿರುವ ಎಸ್ ಐ ಆರ್ ಅನ್ನು ರದ್ದುಗೊಳಿಸುವಂತೆ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 23ಕ್ಕೆ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಯಿತು. 

ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ ಪ್ರಾರಂಭದಲ್ಲಿ ಜನಸಾಮಾನ್ಯರಿಗೆ ಎಸ್ ಐ ಆರ್ ತೀವ್ರತೆಯ ಬಗ್ಗೆ ಗೊತ್ತಿರಲಿಲ್ಲ.  ಅದರಿಂದಾಗುವ ಅನಾಹುತಗಳ ಬಗ್ಗೆಯೂ ತಿಳಿದಿರಲಿಲ್ಲ, ಜೊತೆಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷವೂ ಕೂಡ ಇದರ ಬಗ್ಗೆ ಹೆಚ್ಚಿನ ಕೆಲಸ ಮಾಡಿರಲಿಲ್ಲ, ಆದರೆ ಏದ್ದೇಳು ಕರ್ನಾಟಕ ಮತ್ತು ಜನಪರ ಸಂಘಟನೆಗಳು ಇದರ ಆಳ ಅಗಲದ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ, ಈಗ ಇದು ದೇಶವ್ಯಾಪ್ತಿ ಹಬ್ಬಿಕೊಂಡು ದೊಡ್ಡ ಚಳವಳಿಯಾಗಿ ರೂಪುಗೊಂಡಿದೆ ಈ ಹಿನ್ನೆಲೆಯಲ್ಲಿ ಎಲ್ಲಾ ಸಂಘಟನೆಗಳು ಒಟ್ಟಿಗೆ ಬಂದು ಹೋರಾಟದಲ್ಲಿ ಭಾಗಿಯಾಗುವಂತೆ ಮಾಡೋಣ ಎಂದು ಮನವಿ ಮಾಡಿದರು. 

ಜಿಲ್ಲಾ ಸಂಚಾಲಕ ಬಸವರಾಜ್ ಮಾತನಾಡಿ,   ದೇಶದಲ್ಲಿ ಮತ್ತು ರಾಜ್ಯದಲ್ಲಿ ಎಸ್ ಐ ಆರ್ ಪರೀಕ್ಷರಣೆ ನಡೆಯುತ್ತಿದ್ದು. ಈಗಾಗಲೇ ನಮ್ಮ ತಾಲೋಕಿನಲ್ಲಿ ಪರೀಕ್ಷರಣೆ ಕಾರ್ಯ ಮುಗಿದಿದ್ದು ಅಕ್ಟೋಬರ್ 24ಕ್ಕೆ ಅಂತಿಮ ಪಟ್ಟಿ ಬಿಡುಗಡೆ ಆಗಲಿದೆ, ಆ ಪಟ್ಟಿಯಲ್ಲಿ ನೈಜ್ಯ ಮತದಾರರು ಪಟ್ಟಿಯಿಂದ ಕೈಬಿಟ್ಟವರ ವಿವರ ತಿಳಿಯುತ್ತದೆ, ಆದರೆ SIR ಹೆಸರಿನಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಜಾರಿಗೆ ತಂದು ಸಣ್ಣಪುಟ್ಟ ವ್ಯತ್ಯಾಸಗಳಿರುವ ಮತದಾರರನ್ನ ಕೈಬಿಡುವ ಹುನ್ನಾರವನ್ನ ಆಯೋಗವು ನಡೆಸುತ್ತಿದ್ದು, ಇದನ್ನ ತಡೆಗಟ್ಟಲು ನಾವು ದೊಡ್ಡ ಮಟ್ಟದ ಹೋರಾಟ ರೂಪಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು. 

ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಚಾ. ನಂಜುಂಡ ಮೂರ್ತಿ, ರೈತ ಸಂಘದ ಮಹದೇವ ನಾಯ್ಕ, ದಸಂಸ ಜಿಲ್ಲಾ ಸಂ ಸಂಚಾಲಕ ದೊಡ್ಡ ಸಿದ್ದು, ಪ್ರಗತಿಪರ ಮುಖಂಡ ಅಕ್ಬರ್ ಪಾಷ, ಆದಿ ಕರ್ನಾಟಕ ಮಹಾ ಸಭಾ ಅಧ್ಯಕ್ಷ ಡಾ ಎಸ್ ಮರಿದೇವಯ್ಯ, ಇಟ್ನಾ ರಾಜಣ್ಣ, ಕೆಂಪಶೆಟ್ಟಿ, ಮುದ್ದುಮಲ್ಲಯ್ಯ, ಮಲ್ಲೇಶ್ ಹೈರಿಗೆ, ಸದಾಶಿವ ಕೋಟೆ, ಪುಟ್ಟರಾಜು, ಚಂದ್ರಶೇಖರ ಮೂರ್ತಿ, ಚಲುವರಾಜ್, ಆಟೋ ಕುಮಾರ್, ಚೆನ್ನಕೋಟೆ, ಗೋವಿಂದ, ಮಹೇಶ್, ಮಂಜುಳಾ, ಸುನೀಲ್ ಸಿಂಗ್, ಬಸವರಾಜ್, ಮಹದೇವ, ನಟರಾಜ್, ಗೋಪಾಲ್, ಭೋಗನಂಜ, ಎನ್ ಜಿ ಗುರು, ಲಕ್ಷ್ಮಮ್ಮ ಮತ್ತು ವಿವಿಧ ಸಂಘಟನೆ ಮುಖಂಡರು, ಸಂವಿಧಾನ ಪಡೆಯ ನಾಯಕರು, ಮತಕಾವಲು ಸಮಿತಿ ಸದಸ್ಯರು, ದಸಂಸ ಪದಾಧಿಕಾರಿಗಳು ಭಾಗವಹಿಸಿದ್ದರು.