Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಾಂಪ್ರದಾಯಿಕ ಡ್ರೆಸ್ ಧರಿಸಿದ್ದ ದಂಪತಿಗಳಿ0ದ ಪಾರಂಪರಿಕ ಟಾಂಗಾ ಸವಾರಿ


ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ 7 ನೇ ದಿನವಾದ ಶನಿವಾರ ಸಾಂಪ್ರದಾಯಿಕ ಡ್ರೆಸ್‌ಗಳನ್ನು ಧರಿಸಿದ್ದ ದಂಪತಿಗಳಿAದ ಪಾರಂಪರಿಕ ಟಾಂಗಾ ಸವಾರಿ ನಡೆಯಿತು.
ರಂಗ ಚಾರ್ಲು ಭವನದ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಉಡುಗೆಯಲ್ಲಿ ಅಲಂಕೃತರಾಗಿದ್ದ ದಂಪತಿಗಳನ್ನು ತಮಗಾಗಿ ಮೀಸಲಾಗಿದ್ದ ಟಾಂಗಾಗಳನ್ನು ಹತ್ತಿ ಕುಳಿತರು. ಚಲನಚಿತ್ರ ಖ್ಯಾತ ನಟಿ ಹಾಗೂ ರಂಗಭೂಮಿ ಕಲಾವಿದರಾದ ಅಕ್ಷತಾ ಪಾಂಡವಪುರ ಅವರು ಪಾರಂಪರಿಕ ಟಾಂಗಾ ಸವಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಮೈಸೂರಿನಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳು ಹಾಗೂ ದಸರಾ ಹಬ್ಬದ ಸಡಗರವು ಕಳೆಗಟ್ಟಿದೆ. ದಂಪತಿಗಳು ಯಾವುದೇ ಮದುವೆ ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಹೋಗುವ ಮುನ್ನ ಪರಸ್ಪರ ಚರ್ಚಿಸಿ, ಯಾವ ಬಟ್ಟೆ ಧರಿಸಬೇಕು ಎಂಬುದನ್ನು ನಿರ್ಧರಿಸುವ ಅಪರೂಪದ ಕ್ಷಣಗಳು ಇಲ್ಲಿ ಎದ್ದು ಕಾಣುತ್ತಿವೆ. ಮೈಸೂರು ಸಿಲ್ಕ್ ಸೀರೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳ ಮೇಲಿನ ಒಲವು ಈ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರುಗು ತಂದುಕೊಟ್ಟಿದೆ ಎಂದರು.
ಮೈಸೂರಿನ ಜನತೆಗೆ ದಸರಾ ಹಬ್ಬ, ಟಾಂಗಾ ಸವಾರಿ ಮತ್ತು ಇಂತಹ ಸಾಂಪ್ರದಾಯಿಕ ವೇದಿಕೆಗಳು ಅಪರೂಪದ ಖುಷಿಯನ್ನು ನೀಡುತ್ತಿವೆ. ಹಿರಿಯರಿಂದ ಹಿಡಿದು ಎಲ್ಲರೂ ಒಟ್ಟಾಗಿ ಈ ಕಾರ್ಯಕ್ರಮಗಳನ್ನು ಆನಂದಿಸುತ್ತಿದ್ದು, ಮೈಸೂರಿನ ಒಟ್ಟು ಸಂಸ್ಕöÈತಿ ಹಾಗೂ ಸಂಪ್ರದಾಯದ ಸೊಗಡು ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪಿಳೈ ಅಯ್ಯಂಗಾರ್ ಮಾತನಾಡಿ, 2008ರಲ್ಲಿ ಯುನೆಸ್ಕೋ ಸಂಸ್ಥೆಯು ವಿಶ್ವದ ಅತ್ಯಂತ ಪ್ರಾಚೀನ ಪದ್ಧತಿಗಳ ಅಮೂರ್ತ ಪರಂಪರೆಯನ್ನು ಗುರುತಿಸಿದ್ದು, ಅದೇ ರೀತಿಯಲ್ಲಿ ಮೈಸೂರು ದಸರಾವನ್ನು ಕೂಡ ಒಂದು ವಿಶ್ವ ಪರಂಪರೆ ಎಂದು ಗುರುತಿಸಬೇಕು ಎಂದು ಹೇಳಿದರು.
ಅರಮನೆ ಹಾಗೂ ಕಟ್ಟಡಗಳಂತಹ ಮೂರ್ತ ಪರಂಪರೆಯ ಜೊತೆಗೆ, ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಗೊಂಬೆ ಇಡುವಿಕೆ, ಪರಂಪರಾಗತ ಉಡುಪುಗಳು ಮತ್ತು ಆನೆ ಅಂಬಾರಿ ಉತ್ಸವದಂತಹ ಅಮೂರ್ತ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಡಾ ಪಿ. ಶಿವರಾಜು ಮಾತನಾಡಿ, ನಮ್ಮ ನಾಡಿನ ಕಲೆ, ಸಂಸ್ಕöÈತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಪಾತ್ರವೂ ಹಿರಿದಾಗಿದ್ದು, ನಮ್ಮ ರಕ್ತದ ಧಮನಿ-ಧಮನಿಗಳಲ್ಲಿ ಪರಂಪರೆ ಇರಬೇಕು ಎಂದು ಹೇಳಿದರು
ನಾವು ಆಧುನಿಕ ಉಡುಗೆ-ತೊಡುಗೆಗಳಲ್ಲಿದ್ದರೂ ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ನಮ್ಮ ಕಲೆ, ಸಂಸ್ಕöÈತಿ ಮತ್ತು ಪರಂಪರೆಯನ್ನು ಜಗತ್ತಿಗೆ ಸಾರಲು ಮುಖ್ಯ ಕಾರಣವಾಗಿವೆ. ಪರಂಪರೆಯನ್ನು ಇಡೀ ವಿಶ್ವದಾದ್ಯಂತ ಪ್ರಸಾರ ಮಾಡಲು ಇಲಾಖೆಯೊಂದಿಗೆ ಸಾರ್ವಜನಿಕರು ಹಾಗೂ ಕನ್ನಡಿಗರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಂಪತಿಗಳು ವಿವಿಧ ರೀತಿಯ ಉಡುಪುಗಳನ್ನು ಧರಿಸಿ ಟಾಂಗ ಸವಾರಿ ಹತ್ತುವ ಮೂಲಕ ನಗರದ ವಿವಿಧ ರಸ್ತೆಗಳ ಮೂಲಕ ಸಂಚರಿಸಿ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲಾಯಿತು