Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಗ್ರಂಥಾಲಯಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು; ಎಂ.ಬಾಲಸುಬ್ರಮಣ್ಯ


ಮೈಸೂರು; ನಗರ ಕೇಂದ್ರ ಗ್ರಂಥಾಲಯ ಪೀಪಲ್ಸ್ ಪಾರ್ಕ್ ಮೈಸೂರು ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸಹಯೋಗದೊಂದಿಗೆ ಇಂದು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಸಂಬAಧಿಸಿದ ಎರಡನೇ ಅಣಕು ಪರೀಕ್ಷೆಯ ಎರಡನೇ ಪತ್ರಿಕೆಯ ಅಣಕು ಪರೀಕ್ಷೆ ನಡೆಸಲಾಯಿತು.
ಅಣಕು ಪರೀಕ್ಷೆಗೆ ಚಾಲನೆ ನೀಡಿದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಎಂ.ಬಾಲಸುಬ್ರಮಣ್ಯ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಗ್ರಂಥಾಲಯಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪರೀಕ್ಷಾ ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಯಶಸ್ಸು ಸಾಧಿಸಲು ನಿರಂತರ ಪ್ರಯತ್ನ, ಓದುವ ಹವ್ಯಾಸ ಹಾಗೂ ಯೋಜನಾಬದ್ಧ ತಯಾರಿ ಅತ್ಯಂತ ಮುಖ್ಯ ಹಾಗೂ ಸ್ಪರ್ಧಾರ್ಥಿಗಳು ನಿರಂತರತೆ ಕಾಪಾಡಿಕೊಳ್ಳಬೇಕು. ಪ್ರತಿದಿನವೂ ನಿಗಧಿತ ಸಮಯವನ್ನು ಅಧ್ಯಯನಕ್ಕೆ ಮೀಸಲಿಟ್ಟು, ಓದಿದ ವಿಷಯಗಳನ್ನು ನಿಯಮಿತವಾಗಿ ಪುನರಾವರ್ತನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವ ಹವ್ಯಾಸವು ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಸಮಯದ ಮಹತ್ವ ಅರಿತುಕೊಂಡು, ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅನಗತ್ಯ ಚಟುವಟಿಕೆಗಳಿಂದ ದೂರವಿದ್ದು, ಗುರಿಯತ್ತ ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.
ದೆಹಲಿಯ ವಿಷನ್ ಐಎಎಸ್ ಕಿರಿಯ ಶೈಕ್ಷಣಿಕ ಮಾರ್ಗದರ್ಶಕ ಶ್ರೀನಿಧಿ.ಬಿ ಮಾತನಾಡಿ, ಪರೀಕ್ಷಾ ಸ್ಪರ್ಧಾರ್ಥಿಗಳಿಗೆ ಮೂರು ವಾರಗಳ ತಯಾರಿ ತಂತ್ರ ರೂಪಿಸಿಕೊಂಡು, ಪ್ರತಿಯೊಂದು ವಿಷಯಕ್ಕೂ ಆದ್ಯತೆ ನೀಡಿ ಅಧ್ಯಯನ ನಡೆಸಬೇಕು. ವಾರ-ವಾರದ ಗುರಿಗಳನ್ನು ನಿಗದಿಪಡಿಸಿಕೊಂಡು, ಓದಿದ ವಿಷಯಗಳ ಪುನರಾವರ್ತನೆ, ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸ ಹಾಗೂ ಅಣಕು ಪರೀಕ್ಷೆಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು. ಪ್ರತಿ ವಿಷಯಕ್ಕೂ ಪ್ರತ್ಯೇಕ ಅಧ್ಯಯನ ಯೋಜನೆ ರೂಪಿಸಿಕೊಂಡು, ವಿಷಯವಾರು ಸಮಯ ಹಂಚಿಕೆ ಮಾಡಿಕೊಳ್ಳಬೇಕು. ತಮ್ಮಲ್ಲಿರುವ ಸಾಮರ್ಥ್ಯ ಮತ್ತು ಸುಧಾರಿಸಬೇಕಾದ ಅಂಶಗಳನ್ನು ಗುರುತಿಸಿ, ನಿರಂತರ ಅಭ್ಯಾಸದ ಮೂಲಕ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಿದ್ಧರಾಗಬೇಕು ಎಂದು ಸ್ಪರ್ಧಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ .ಬಿ, ಮೈಸೂರು ಬಾಲ್ಯ ಫೌಂಡೇಶನಿನ ಅನಿಲ್ ಹಾಗೂ ಅಣುಕು ಪರೀಕ್ಷೆಯನ್ನು ಸೇರಿದಂತೆ ಹಲವಾರು ಅಣುಕು ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ಉಚಿತವಾಗಿ ಸಿದ್ಧಪಡಿಸಿ ಕೊಡುತ್ತಿರುವ ಬೆಂಗಳೂರಿನ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಮುಖ್ಯಸ್ಥರಾದ ವೈ.ವಿ. ಗಾಯತ್ರಿ ಹಾಗೂ ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ಸೌಮ್ಯ ಎಸ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.