Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶೀಘ್ರದಲ್ಲೇ ಶುರುವಾಗಲಿದೆ ‘ಬಿಗ್ ಬಾಸ್ ಕನ್ನಡ ಸೀಸನ್ 13’


ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೀಘ್ರದಲ್ಲೇ ಶುರುವಾಗಲಿದೆ. ಇದರ ಮೊದಲ ಅಧಿಕೃತ ಟೀಸರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸೀಸನ್ 12 ಭಾರಿ ಯಶಸ್ಸು ಕಂಡು ಕೆಲವು ತಿಂಗಳುಗಳಷ್ಟೇ ಆಗಿದ್ದರೂ, ಹೊಸ ಸೀಸನ್‌ನ ಟೀಸರ್ ಈಗಲೇ ಬಿಡುಗಡೆಯಾಗಿರುವುದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಎಂದಿಗಿAತಲೂ ಮುಂಚಿತವಾಗಿ ಆರಂಭ:
ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ಬಿಗ್ ಬಾಸ್, ಈ ಬಾರಿ ಎಂದಿಗಿAತಲೂ ಮುಂಚಿತವಾಗಿ ಅಂದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲೇ ಪ್ರಸಾರವಾಗಲಿದೆ ಎಂದು ವಾಹಿನಿ ಸುಳಿವು ನೀಡಿದೆ.
ಕಿಚ್ಚ ಸುದೀಪ್ ಅವರೇ ಸಾರಥಿ:
ಕಳೆದ ಸೀಸನ್ ಮುಕ್ತಾಯದ ವೇಳೆ ಶೋ ಮುನ್ನಡೆಸುವ ಕುರಿತು ಅನಿಶ್ಚಿತತೆ ಮೂಡಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪ್ರೇಕ್ಷಕರ ಮತ್ತು ವಾಹಿನಿಯ ಭಾರಿ ಒತ್ತಾಯದ ಮೇರೆಗೆ 13ನೇ ಸೀಸನ್ ಅನ್ನು ಕೂಡ ತಾವೇ ನಿರೂಪಣೆ ಮಾಡಲಿದ್ದಾರೆ.
ವಿಶೇಷ ಥೀಮ್ ಮತ್ತು ಅಚ್ಚರಿಯ ಟ್ವಿಸ್ಟ್:
ಈ ಬಾರಿಯ ಸೀಸನ್ ಗಾಗಿ ಹೊಚ್ಚ ಹೊಸ ಥೀಮ್ ಒಂದನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್‌ಸ್ಟಾಗ್ರಾಂ ರೀಲ್ಸ್ ಮತ್ತು ಯೂಟ್ಯೂಬ್‌ನ ಸೋಷಿಯಲ್ ಮೀಡಿಯಾ ಇನ್‌ಪ್ಯೂಯೆನ್ಸರ್‌ಗಳು ಹಾಗೂ ಕಿರುತೆರೆಯ ಜನಪ್ರಿಯ ನಟರ ನಡುವೆ ಬಿಗ್ ಫೈಟ್ ಇರಲಿದೆ ಎಂದು ತಿಳಿದು ಬಂದಿದೆ.