ಅಭಿವೃದ್ಧಿಯಲ್ಲ, ಸಮೃದ್ಧಿ ಬೇಕು; ಪ್ರೊ.ಕೃಷ್ಣೇಗೌಡ ಪ್ರತಿಪಾದನೆ
ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ ಲಕ್ಷವೃಕ್ಷ ಅಭಿಯಾನ ಮೈಸೂರು: ಸರ್ಕಾರಗಳು ಹೇಳುತ್ತಿರುವ ಅಭಿವೃದ್ಧಿ ಬಗ್ಗೆ ಅಸಹ್ಯ ಬಂದು ಹೋಗಿದೆ. ನಮಗೆ ಬೇಕಿರುವುದು ಅಭಿವೃದ್ಧಿಯಲ್ಲ, ಸಮೃದ್ಧಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೃಷ್ಣೇಗೌಡ ಹೇಳಿದರು.ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮೈಸೂರು- ಊಟಿ ರಸ್ತೆಯ ಬಂಡೀಪಾಳ್ಯ ಸಮೀಪದ ಹಸಿರು ಮೈಸೂರು ನರ್ಸರಿಯಲ್ಲಿ ಗುರುವಾರ ಆಯೋಜಿಸಿದ್ದ ʼಹಸಿರು ಮೈಸೂರು- ಲಕ್ಷವೃಕ್ಷ ಅಭಿಯಾನʼ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ಸರ್ಕಾರಗಳು ಅಥವಾ ವ್ಯವಸ್ಥೆ ಅಭಿವೃದ್ಧಿ ಹೆಸರಲ್ಲಿ ಸೃಷ್ಟಿಸುತ್ತಿರುವ ಅದ್ವಾನಗಳನ್ನು ನೋಡಿದರೆ ಅಸಹ್ಯ…