Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

29 ಮಂದಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ


ಮೈಸೂರು: ರಾಜಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ಕೊಡಮಾಡುವ ರಾಜಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ 2026ನೇ ಸಾಲಿಗೆ ನಾಲ್ವಡಿ ಅವರ ಜೀವನ, ಸಾಧನೆಗಳಿಗೆ ಪೂರಕ ವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಂಸ್ಥೆ ಗಳು ಸೇರಿದಂತೆ ಒಟ್ಟು 29 ಮಂದಿ U್ಪಣ್ಯರನ್ನು ಆಯ್ಕೆ ಮಾಡ ಲಾಗಿದ್ದು, ಅವರಿಗೆ ಇಂದು ನಗರದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಾಲ್ವಡಿ ಪ್ರಶಸ್ತಿ ಪುರಸ್ಕöÈತರು: ಸಾಹಿತ್ಯ ಕೇತ್ರದಿಂದ ಬನ್ನೂರು ಕೆ.ರಾಜು, ಪ್ರೊ.ಮಸೂದ್ ಸಿರಾಜ್, ಕುಪ್ಪೆ ನಾಗರಾಜ್, ಎಂ.ಎಸ್.ವೇದ ಅವರಿಗೆ, ರಂಗಭೂಮಿ ಕ್ಷೇತ್ರ ದಿಂದ ಗೀತಾ ಮೋಂಟಡ್ಕ ದಿನೇಶ್ ಚಮಾಳಿಗೆ ಅವರಿಗೆ, ಜಾನಪದ ಕ್ಷೇತ್ರದಿಂದ ಹುತ್ತೂರು ಬಿಸಿಲನಾಯ್ಕ, ಕೈಲಾಸ್ ಮೂರ್ತಿ, ಸೋಮಶೇಖರ್ ಬಿಸಿಲ್ವಾಡಿ ಅವರಿಗೆ, ವಿಜ್ಞಾನ ಕ್ಷೇತ್ರದಿಂದ ಡಾ.ಎಸ್.ಎನ್.ಸ್ವಾಮಿಗೌಡ, ಮುದ್ರಣ ಮಾಧ್ಯಮದಿಂದ ಲೈಕ್ ಅಹಮದ್‌ಖಾನ್, ಮಹೇಶ್ ಭಗೀರಥ, ಪ್ರಗತಿ ಗೋಪಾಲ ಕೃಷ್ಣ (ಪತ್ರಿಕಾ ಛಾಯಾ ಗ್ರಹಣ), ಜಿ.ಜಯಂತ್(ದೃಶ್ಯಮಾಧ್ಯಮ) ಅವರಿಗೆ, `ಗಲ್ ಮತ್ತು ಪಂಡಿತ್ ರಮೇಶ್ ಧನ್ನೂರು ಅವರಿಗೆ, ವೈದ್ಯಕೀಯ ಕ್ಷೇತ್ರದಿಂದ ಡಾ.ಸುಜಯ್‌ಕುಮಾರ್, ಡಾ.ಗುರುಬಸವರಾಜು ಅವರಿಗೆ, ಸಮಾಜ ಸೇವೆ ಕ್ಷೇತ್ರದಿಂದ ಕೆ.ಎಸ್.ಹಸನ್‌ಸಾಬ್, ಹಿಮಾಂಶು, ರಿಯಾಜ್ ಅಹಮದ್, ಮಹದೇವಯ್ಯ, ಎನ್.ಆರ್.ನಾಗೇಶ್ ಅವರಿಗೆ, ಚಳವಳಿ ಕ್ಷೇತ್ರದಿಂದ ಶಂಭುಲಿAಗ ಸ್ವಾಮಿ, ಆರ್.ಎಸ್.ದೊಡ್ಡಣ್ಣ ಮತ್ತು ಬಿ.ಎ.ಶಿವಶಂಕರ್ ಅವರಿಗೆ, ಚಿತ್ರಕಲಾ ಕ್ಷೇತ್ರದಲ್ಲಿ ಎಚ್.ಕೆ.ದ್ವಾರಕನಾಥ್ ಅವರಿಗೆ, ಸಂಸ್ಥೆ ವಿಭಾಗದಲ್ಲಿ ಮೈಸೂರಿನ ಸ್ವರಸಂಕುಲ ಹಾಗೂ ಮೈಸೂರು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕöÈತಿಕ ಸಂಘಟನೆ- ಮೆಸ್ಕೋ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷಿö್ಮಕಾಂತ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.