
ಮೈಸೂರು; ರೈತರು ಜಮೀನುಗಳಲ್ಲಿ ಕೃಷಿ ಮಾಡುವುದು ಲಾಭಕ್ಕಾಗಿ ಅಲ್ಲ, ಮನಶಾಂತಿ, ಉತ್ತಮ ಆರೋಗ್ಯಕ್ಕಾಗಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.
ಗುರುವಾರ ಮೈಸೂರು ತಾಲೂಕಿನ ವರುಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿವರ್ತನಾ ಬಿಜಿನೆಸ್ ಸ್ಕೂಲ್ ಅಗ್ರಿಟೆಕ್ ತಂಡದವರು ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಬೇಸಾಯ ರೈತ ಜಾಗೃತಿ ಕುರಿತು ಸಮಾವೇಶವನ್ನು ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳ ಜೊತೆ ಗಿಡ ನೆಟ್ಟು. ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಕೃಷಿ ಬೇಸಾಯ ಮೂಲಕ ರೈತರು ಸಂಕಷ್ಟ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು.
ನಾನು ಕಳೆದ 45 ವರ್ಷಗಳಿಂದಲೂ ಕೃಷಿಯ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ರೈತರು ಬದಲಾಗಿದ್ದಾರೆ. ಆದರೆ ಸಮಸ್ಯೆ ತಪ್ಪಿಲ್ಲ .ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ನ್ಯಾಯಸಮ್ಮತ ಬೆಲೆ ಸಿಗುವ ತನಕ, ರೈತರ ಬದುಕು ಹಸನಾಗುವುದಿಲ್ಲ. ಆದ್ದರಿಂದಲೇ ರೈತರ ಮಕ್ಕಳು ವ್ಯವಸಾಯದಲ್ಲಿ ಆಸಕ್ತಿ ತೋರುವುದಿಲ್ಲ ಎಂದು ನುಡಿದರು. ಕೃಷಿಯಲ್ಲಿ ಲಾಭಗಳಿಸಿ ಆಧುನಿಕ ಜೀವನ ನಡೆಸುತ್ತೇನೆ ಎಂಬ ಭ್ರಮೆ ಬಿಡಬೇಕು. ಕೃಷಿ ನೆಮ್ಮದಿಗಾಗಿ ಉತ್ತಮ ಆರೋಗ್ಯಕ್ಕಾಗಿ ಮಾಡಬೇಕು. ರೈತರು ಸರಳತೆಯಿಂದ ಹೈನುಗಾರಿಕೆ ಜೊತೆಯಲ್ಲಿ ಸಮಗ್ರ ಕೃಷಿ ಬೇಸಾಯ ಮಾಡಿದರೆ, ಯಾವುದೇ ವಿಪ್ಪತ್ತು ಬಂದರೂ ಎದುರಿಸಬಹುದು ಎಂದರು. ಪರಿವರ್ತನಾ ಕಾಲೇಜಿನ ಮುಖ್ಯಸ್ಥರಾದ ಸಂಕ್ರಾAತಿ ಮಾತನಾಡಿ, ಇಂಜಿನಿಯರ್ ಆಗಲಿ ಅಥವಾ ಬೇರೆ ಯಾರು ಕೆಲಸ ನಿಲ್ಲಿಸಿದರು ಜಗತ್ತು ನಡೆಯುತ್ತದೆ. ಆದರೆ ನಮ್ಮಗೆ ಅನ್ನ ಹಾಕುವ ರೈತರು ಕೆಲಸ ನಿಲ್ಲಿಸಿ ಬೆಳೆ ಬೆಳೆಯುವುದನ್ನು ಬಿಟ್ಟರೆ, ಈ ಜಗತ್ತು ನಡೆಯುವುದಿಲ್ಲ. ಕೃಷಿ ಯಾವ ಊರಲ್ಲಿ ತ್ಯಜಿಸುತ್ತೀರಾ ಆ ಊರಲ್ಲಿ ಜೀವನ ಇರುವುದಿಲ್ಲ ಜೀವ ಇರುವುದಿಲ್ಲ ಎಂದರು.
ವರುಣ ಕೃಷಿ ಸಂಪರ್ಕ ಅಧಿಕಾರಿ ಹೇಮಂತ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶೇಕಡ 80ರಷ್ಟು ರೈತರು ಹೈನುಗಾರಿಕೆ ಮೇಲೆ ಅವಲಂಬಿತವಾಗಿದೆ,ಮಳೆಯಾಶ್ರಿತ ಜಾಗದಲ್ಲಿ ನೀರನು ಬಳಸುವುದಕ್ಕೆ ಕೃಷಿ ಹೊಂಡಗಳನ್ನು ಮಾಡಿದಕ್ಕೆ, ಮೀನಿನ ಕೊಳಗಳನ್ನೂ ನಿರ್ಮಿಸಲು ಕೃಷಿ ಇಲಾಖೆ ಸಹಾಯಧನ ಕೊಡುತ್ತ ಇದೆ. ಸಮಗ್ರ ಕೃಷಿ ಮಾಡುವುದರಿಂದ ಆರೋಗ್ಯ ದೃಷ್ಟಿಯಿಂದ ಸುಧಾರಣೆಯಾಗುತ್ತದೆ ಎಂದರು. ವೇದಿಕೆಯಲ್ಲಿ ಪರಿವರ್ತನಾ ಸ್ಕೂಲ್ ಪ್ರಾಂಶುಪಾಲ ಡಾ. ರಘುನಂದನ್, ಪರಿವರ್ತನಾ ಸ್ಕೂಲ್ ಟ್ರಸ್ಟ್ ಖಜಾಂಜಿ ಡಾ. ಕೆ. ಬಿ. ಧನಂಜಯ, ಟ್ರಸ್ಟ್ ಮುಖ್ಯಸ್ಥರು ಇನ್ನಿತರರು ಇದ್ದರು.