
ಮೈಸೂರು: ‘ಕಲಬುರಗಿ ಸೇರಿದಂತೆ ಇಡೀ ಕರ್ನಾಟಕ ಡ್ರಗ್ಸ್, ಮಾದಕವ್ಯಸನಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಸ್ವತಃ ಕಾಂಗ್ರೆಸ್ ಮಂಡಲ ಅಧ್ಯಕ್ಷ ಡ್ರಗ್ಸ್ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಹೇಳಿದರು.
ಗುರುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪರಾಧ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ.
ನ್ಯಾಷನಲ್ ಅಪರಾಧ ರೆಕಾರ್ಡ್ ಬ್ಯೂರೋದ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ 10ಕ್ಕಿಂತ ಜಾಸ್ತಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇ 15ರಷ್ಟು ಹೆಚ್ಚಾಗಿದೆ.ಅಪರಾಧ ಚಟುವಟಿಕೆಗಳು ಶೇಕಡಾ ಹದಿನೈದಕ್ಕಿಂತ ಹೆಚ್ಚು ಹೆಚ್ಚಾಗಿವೆ. ಆದರೆ ಅದರ ಬಗ್ಗೆ ಗಮನ ಹರಿಸುತ್ತಿಲ್ಲ.
ಕೋಮು ಸೌಹಾರ್ದ ತರುತ್ತೇನೆ ಎಂದು ಹೇಳಿದ ತಾವು, ಕಳೆದ ಆರು ತಿಂಗಳಲ್ಲಿ ಯಾದಗಿರಿ, ಶಹಾಬಾದ್ ಹಾಗೂ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಲ್ಲು ತೂರಾಟದ ಘಟನೆಗಳ ಬಗ್ಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ.
ಶಿವಲಿಂಗಕ್ಕೆ ಮುಸಲ್ಮಾನರು ಅವಮಾನ ಮಾಡಿದ ಪ್ರಕರಣದಲ್ಲಿ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾದ ವಿಷಯಗಳಲ್ಲಿಯೂ ನೀವು ಆರೋಪಿಗಳ ವಿರುದ್ಧ ಕಠಿಣ ನಿಲುವು ತಾಳುವುದಕ್ಕಿಂತ ಪ್ರಕರಣಗಳನ್ನು ಹಿಂಪಡೆಯಲು ಸಹಿ ಮಾಡುತ್ತೀರಿ. ಶಿವಲಿಂಗವನ್ನು ಅಪವಿತ್ರಗೊಳಿಸಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿದವರನ್ನು ಬಿಡುಗಡೆಗೊಳಿಸಲು ಒಪ್ಪಿಗೆ ನೀಡುತ್ತೀರಿ. ಹಿಂದೂಗಳ ವಿರುದ್ಧದ ನಿಲುವನ್ನು ತೆಗೆದುಕೊಳ್ಳುತ್ತೀರಿ ಎಂದು ಕಿಡಿಕಾರಿದರು.
ಗೃಹ ಸಚಿವರ ಜಿಲ್ಲೆಯಲ್ಲೇ ಅವ್ಯಾಹತವಾಗಿ ಮಾದಕ ದ್ರವ್ಯಗಳ ಚಟುವಟಿಕೆ ನಡೆಯುತ್ತಿದೆ. ಸೇಡಂನಲ್ಲಿ ಶಾಲಾ ಮಕ್ಕಳು ಗಾಂಜಾ ಸಾಗಾಟ ಮಾಡುತ್ತಿದ್ದಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಮ್ಮ ಪಕ್ಷದ ಪ್ರಮುಖ ಪದಾಧಿಕಾರಿಯೊಬ್ಬರು ಗೋವಾದಿಂದ ಮಾದಕ ದ್ರವ್ಯಗಳನ್ನು ತಂದು ಬಂಧನಕ್ಕೊಳಗಾದ ಘಟನೆಗಳನ್ನೂ ನಾವು ನೋಡಿದ್ದೇವೆ. ಆದರೆ ಅದರ ಬಗ್ಗೆ ತಾವು ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್ ಅನ್ನು ರಾಷ್ಟçವಿರೋಧಿ ಎಂದು ಭಾವಿಸುತ್ತಿದ್ದರೆ, ನಿಮ್ಮಲ್ಲಿ ತಾಕತ್ತು ಇದ್ದರೆ UಂPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಅವರು ರಾಷ್ಟçವಿರೋಧಿಗಳು ಎಂದು ಸಾಬೀತುಪಡಿಸಿ. ಅದನ್ನು ಬಿಟ್ಟು ಪ್ರತಿದಿನ ಆರ್ಎಸ್ಎಸ್ ಬಗ್ಗೆ ತಮಗೇ ಎಲ್ಲವೂ ತಿಳಿದಿದೆ ಎಂಬAತೆ ಮಾತನಾಡುತ್ತೀರಿ. ಅದು ಕುರುಡರು ಆನೆಯನ್ನು ವರ್ಣಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಆರ್ಎಸ್ಎಸ್ (ರಾಷ್ಟಿçÃಯ ಸ್ವಯಂಸೇವಕ ಸಂಘ) ಜೀವಂತವಾದ ಸಂಘಟನೆ ಹಾಗೂ ಅದೊಂದು ವಿಚಾರಧಾರೆ. ಅದನ್ನು ನೋಂದಾಯಿಸುವುದು ಹೇಗೆ? ನೀರನ್ನು, ಮನಸ್ಸನ್ನು, ವಿಚಾರವನ್ನು ನೋಂದಣಿ ಮಾಡಿಸಲು ಆದೀತೇ?’ ಎಂದು ಪ್ರಶ್ನಿಸಿದರು. ಸದಾ ಸುದ್ದಿಯಲ್ಲಿ ಇರಬೇಕೆಂಬ ಉದ್ದೇಶದಿಂದ ಸದಾ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತೀರಿ. ನಿಮಗೆ ತಿಳಿದಿರಲಿ, ಆರ್ಎಸ್ಎಸ್ ಒಂದು ಜೀವಂತ ಸಂಘಟನೆ. ನೀವು ಅದರ ಮೇಲೆ ಎಷ್ಟು ಕೆಸರೆರಚುತ್ತೀರೋ ಅಷ್ಟು ಅದು ಕೆಸರಿನಲ್ಲಿ ಬೆಳೆಯುವ ಕಮಲದಂತೆ ಮತ್ತಷ್ಟು ಪ್ರಬಲವಾಗಿ ಹೊರಹೊಮ್ಮುತ್ತದೆ ಎಂದರು.
ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಸೇರಿದಂತೆ ಅನೇಕರು ಶಕ್ತಿಯನ್ನೆಲ್ಲಾ ಪ್ರಯೋಗಿಸಿದರೂ ಸಂಘವನ್ನು ಮುಗಿಸಲು ಆಗಲಿಲ್ಲ. ಪ್ರಿಯಾಂಕ್ ಖರ್ಗೆ ಅಂಥವರು ಎಷ್ಟೇ ಮಂದಿ ಬಂದರೂ ಆರ್ಎಸ್ಎಸ್ಗೆ ಏನನ್ನೂ ಮಾಡಲಾಗದು’ ಎಂದರು.
ಭಾರತದ ಸಂವಿಧಾನ ನಿಮ್ಮಂತಹವರಿಗೂ ಮಂತ್ರಿಯಾಗುವ ಅವಕಾಶವನ್ನು ನೀಡಿದೆ. ಮಂತ್ರಿ ಪದವಿ ಸಿಕ್ಕಿದೆ ಎಂದು ಏನು ಬೇಕಾದರೂ ಮಾತನಾಡಬಹುದು ಎಂಬ ಮನೋಭಾವ ಸರಿಯಲ್ಲ. ವಾಕ್ ಸ್ವಾತಂತ್ರ÷್ಯದ ಹೆಸರಿನಲ್ಲಿ ಗೃಹ ಖಾತೆಯನ್ನು ಬಳಸಿಕೊಂಡು ನಿಮ್ಮ ದ್ವೇಷದ ಕಾರ್ಯಸೂಚಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ.
ಡಾ. ಅಂಬೇಡ್ಕರ್ ಈ ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕರ ರಕ್ಷಣೆಗಾಗಿ ರಚಿಸಿದ್ದಾರೆ. ಅವರ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ, ಅವರು ಹೇಗೆ ನಡೆದುಕೊಂಡರು ಎಂಬುದನ್ನು ವಿವೇಚನೆಯಿಂದ ಯೋಚಿಸಿ.ಅಂಬೇಡ್ಕರ್ ಅವರು ತಮ್ಮ ವಿರೋಧಿಗಳ ಬಗ್ಗೆ ಎಂದಿಗೂ ದ್ವೇಷ ಸಾಧಿಸಲಿಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರನ್ನೂ ಒಳಗೊಂಡ ಸುಂದರ ಸಂವಿಧಾನವನ್ನು ರಚಿಸಿದರು. ಆದರೆ ಅಂಬೇಡ್ಕರ್ ನೀಡಿದ ಸಂವಿಧಾನ ಮತ್ತು ಮೀಸಲಾತಿಯ ಲಾಭ ಪಡೆದು ಇಂದು ನೀವು ದ್ವೇಷವನ್ನು ಬಿತ್ತುವ ಕೆಲಸವನ್ನು ರಾಜ್ಯದ ಗೃಹ ಸಚಿವರಾಗಿ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಬಾಂಗ್ಲಾ ದೇಶದ ನುಸುಳುಕೋರರಿಗೆ ಊಟೋಪಚಾರಕ್ಕೆಂದು ಜೈಲುಗಳಿಗೆ 2 ಕೋಟಿ ಬಿಡುಗಡೆ ಮಾಡುವಂತೆ ವಿತ್ತ ಇಲಾಖೆಗೆ ಪತ್ರ ಬರೆದಿರುವ ಪ್ರಿಯಾಂಕ್, ಕರ್ತವ್ಯ ನಿರ್ವಹಣೆಯಲ್ಲಿ ಪದೇ ಪದೇ ಲೋಪ ಎಸಗುತ್ತಿದ್ದಾರೆ’ ಎಂದು ದೂರಿದರು. ‘ನುಸುಳುಕೋರರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಗೃಹ ಸಚಿವರೇ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.
ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಮಂತ್ರಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ’ ಎಂದು ಅರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರ ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ವಕ್ತಾರ ಜಯಶೇಖರ್, ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಬಿ.ಎಂ. ಇದ್ದರು