Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೂನ್ 12 ರಂದು ಚಲನಚಿತ್ರಗೀತೆಗಳ ಕರೋಕೆ ಗಾಯನ


ಮೈಸೂರು : ಯುವ ಪ್ರತಿಭೆಗೆ ವೇದಿಕೆಗೆ ಕಲ್ಪಿಸುವುದಕ್ಕಾಗಿ ಶಿವ ಮ್ಯೂಸಿಕಲ್ ವತಿಯಿಂದ
ಕರೋಕೆ ಗಾಯನವನ್ನು ಜೂನ್ 12 ರಂದು ಮೈಸೂರಿನಲ್ಲಿ ಅಯೋಜಿಸಲಾಗಿದೆ ಎಂದು ವಕೀಲ ಶಿವಕುಮಾರ್ ಹೇಳಿದರು
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ ಭವನದಲ್ಲಿಶುಕ್ರವಾರದಂದು ಚಲನಚಿತ್ರಗೀತೆಗಳ ಕರೋಕೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೈಸೂರಿನ ನಾಗರೀಕರಿಗೆ ಹಾಗೂ ಸಂಗೀತ ಪ್ರಿಯರಿಗೆ, ಮನರಂಜನೆ ನೀಡುವುದು ಹಾಗೂ ಯುವ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಲಾಗಿದ್ದು ಕನ್ನಡ ಚಲನಚಿತ್ರಗೀತೆಗಳ ಒಟ್ಟು 45 ಜನಪ್ರಿಯ ಗೀತೆಗಳನ್ನು 10 ಜನ ಗಾಯಕ-ಗಾಯಕಿಯವರು ಹಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಿದ್ದು, ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈ.ಎಸ್ ಸುದರ್ಶನ್, ಗಾಯಕರಾದ ಪರಶಿವಮೂರ್ತಿ, ಮುತ್ತುರಾಜ್, ಕನ್ನಡ ಪ್ರಾಧ್ಯಪಕರಾದ ಮೇಘಶ್ರೀ ಸುರೇಶ್, ಗಾಯಕಿ ರಾಧಿಕಾ ಇದ್ದರು.