
ಮೈಸೂರು : ನಾಟ್ಯಲೇಖ ರಂಗಸಮೂಹ ಮೈಸೂರುವತಿಯಿಂದ “ಘಾಟಿ” ನಾಟಕ ಪ್ರದರ್ಶನವನ್ನು ಎರಡು ದಿನಗಳ ಕಾಲ ಅಯೋಜನೆ ಮಾಡಲಾಗಿದೆ ಎಂದು ನಾಟ್ಯಾಲೇಖ ರಂಗಸಮೂಹದ ಖಜಾಂಚಿ ಮಹೇಶ್ ಕಲ್ಲಂಗಡಿ ಹೇಳಿದರು
ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಕಲಾಮಂದಿರದ ಕಿರುರಂಗಮAದಿರದಲ್ಲಿ ಜೂನ್ 11 ಮತ್ತು 12 ರಂದು ಸಂಜೆ 6.30 ಕ್ಕೆ ಸುಮಧುರ ರಾವ್ ರಚಿಸಿರುವ ಅಮಿತ್ ಜೆ ರೆಡ್ಡೆ ನಿರ್ದೇಶನದ “ಘಾಟಿ ” ಎಂಬ ನಾಟಕ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಎಂ ಡಿ ಸುದರ್ಶನ್ ಉದ್ಘಾಟನೆ ಮಾಡಲಿದ್ದು, ಅತಿಥಿಗಳಾಗಿ ಜಿಲ್ಲಾ ಹವ್ಯಾಸಿ ರಂಗಕರ್ಮಿ ವೇದಿಕೆ ಅಧ್ಯಕ್ಷ ರಾಜೇಶ್ ತಲಕಾಡು ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ ಮೊ.ನಂ 6361848788,9482203369 ಸಂಪರ್ಕಿಸಬಹುದು ಎಂದು ತಿಳಿಸಿದರು
ಸುದ್ದಿಗೋಷ್ಟಿಯಲ್ಲಿ ಮಧುಸೂದನ್, ಧನುಷ್ ,ಪ್ರಶಾಂತ್, ನಯನಾ ಉಪಸ್ಥಿತರಿದ್ದರು.