3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೂನ್ 12 ರಂದು ಲಲಿತಾ ಜಿ.ಟಿ.ದೇವೇಗೌಡರಿಗೆ ಅಭಿನಂದನಾ ಸಮಾರಂಭ


ಮೈಸೂರು : ಕರ್ನಾಟಕ ರಾಜ್ಯ ಸಹಕಾರ ಮಂಡಳದ ಅಧ್ಯಕ್ಷರಾಗಿದ್ದ ಲಲಿತಾ ಜಿ.ಟಿ.ದೇವೇಗೌಡರಿಗೆ ಅಭಿನಂದನಾ ಸಮಾರಂಭವನ್ನು ಜೂನ್ 12 ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಲಲಿತಾಭಿನಂದನ ಸಮಿತಿ ಉಪಾಧ್ಯಕ್ಷ ಎಂ.ಎನ್.ನಟರಾಜ್ ಹೇಳಿದರು.
ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮಷ್ಟಕ್ಕೆ ತಾವು ಮನೆ ಮನೆಯ ತಪಸ್ವಿನಿಯಂತೆ ಬದುಕುತ್ತಿದ್ದ ಶಾಸಕ ಜಿ.ಟಿ.ದೇವೇಗೌಡರ ಪತ್ನಿಯಾದ ಲಲಿತಾ ಅವರು ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಒಂದು ಆಕಸ್ಮಿಕ. ಅಲ್ಲಿ ಅವರೆಷ್ಟು ಜನಪ್ರಿಯರಾದರೆಂದರೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷೆಯಾಗುವವರೆಗೂ ಏರಿದರು. ಏರಿದರ ಷ್ಟೇ ಅಲ್ಲ ಹಲವಾರು ಒಳ್ಳೆಯ ಕೆಲಸವನ್ನು ಮಾಡಿದರು. ಕಾಲಿಟ್ಟಲ್ಲೆಲ್ಲಾ ಆಳವಾದ ಹೆಜ್ಜೆಗುರುತುಗಳನ್ನು ಬಿಟ್ಟರು. ಹಾಗಾಗಿಯೇ ಸಹಕಾರಿ ಕ್ಷೇತ್ರದಲ್ಲಿ, ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಸಹಕಾರ ರತ್ನ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿಬಂದು ಅಲಂಕರಿಸಿದವು. ಅಂಥದ್ದೇ ಒಂದು ಪ್ರಶಸ್ತಿ ಮಂಡ್ಯದ ಜಿ.ಎಸ್.ಬೊಮ್ಮೇಗೌಡ ಸ್ಮಾರಕ ಸಹಕಾರ ರತ್ನ ಪ್ರಶಸ್ತಿ. ರಾಜ್ಯಮಟ್ಟದ ಈ ಪ್ರತಿಷ್ಠಿತ ಪ್ರಶಸ್ತಿ ನಮ್ಮ ಲಲಿತಕ್ಕ ಅವರಿಗೆ ಸಂದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಬೇಕೆAದು ಈ ಭವ್ಯ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. .
ಮೈಸೂರಿನ ಮಾನಸ ಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಲಲಿತಾ ಜಿ.ಟಿ.ದೇವೆಗೌಡ ಅವರಿಗೆ ಅಭಿನಂದನಾ ಸಮಾರಂಭವನ್ನು ಅಯೋಜನೆ ಮಾಡಲಾಗಿದೆ. ದಿವ್ಯ ಸಾನಿಧ್ಯವನ್ನು
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ದಿವ್ಯ ಸಮ್ಮುಖವನ್ನು
ಶ್ರೀ ರಾಮಕೃಷ್ಣ ಆಶ್ರಮ ಅಧ್ಯಕ್ಷ ಶ್ರೀ ಮುಕ್ತಿದಾನಂದಜೀ ಮಹಾರಾಜ್, ಶ್ರೀ ತ್ರೀನೇತ್ರ ಮಹಾಚಿತ ಶಿವಯೋಗಿ ಸ್ವಾಮೀಜಿ ವಹಿಸಲಿದ್ದು, ಶಾಸಕ ಜಿ.ಟಿ.ದೇವೇಗೌಡರು ಉಪಸ್ಥಿತರಿರುವರು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಟಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಯಚೂರಿನ ಪ್ರಯೋಗ ಶೀಲ ಕೃಷಿ ಸಾಧಕರಾದ ಡಾ.ಕವಿತಾ ಮಿಶ್ರಾ ಆಗಮಿಸುವರು. ವಿಶ್ರಾಂತ ಕುಲಪತಿ ಡಾ.ಕೆ.ಎಸ್ ರಂಗಪ್ಪ ಅವರು ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡುವರು. ವಿಶ್ರಾಂತ ಪ್ರಾಂಶುಪಾಲ ಪ್ರೊ ಎಂ ಕೃಷ್ಣೇಗೌಡರು ಅಭಿನಂದನಾ ಭಾಷಣ ಮಾಡುವರು. ಮಧ್ಯಾಹ್ನ 2.30ರಿಂದ 4.30ರ ತನಕ ನಿರುಪಮಾ-ರಾಜೇಂದ್ರ ಮತ್ತು ತಂಡದಿAದ ನೃತ್ಯ ಸಂಭ್ರಮ ವೈಭವ ಕಾರ್ಯಕ್ರಮ ನಡೆಲಿದೆ ಎಂದು ಮಾಹಿತಿ ನೀಡಿದರು
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಡಾ.ಆರತಿ ಸೋಮಶೇಖರ್,ನಟೇಶ್,ರವಿಕುಮಾರ್, ಸಿದ್ದಪ್ಪ ,ತಿಮ್ಮೇಗೌಡ ಉಪಸ್ಥಿತರಿದ್ದರು.