
ಮೈಸೂರು : ಸಾಮಾಜಿಕ ನ್ಯಾಯದಡಿ ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕೆಂದು ಶ್ರೀ ಶಿವಯೋಗಿಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿಗಳನ್ನು ಆಗ್ರಹ ಮಾಡುತ್ತದೆ ಎಂದು ಬೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವೊ ಸೀತಾರಾಮ್ ಹೇಳಿದರು
ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಾಮಾಜಿಕವಾಗಿ, ಕರ್ನಾಟಕದಲ್ಲಿ ಭೋವಿ (ಒಡ್ಡರು) ಸಮುದಾಯವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಸಮುದಾಯದ ಏಳಿಗೆಗಾಗಿ ಸರ್ಕಾರದಲ್ಲಿ ಸೂಕ್ತ ಪ್ರಾತಿನಿದ್ಯದ ಅಗತ್ಯವಿದೆ ಎಂಬುದು ನಮ್ಮ ಮತ್ತು ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಕಳಕಳಿಯನ್ನು ಅರ್ಥಮಾಡಿಕೊಳ್ಳಬೇಕು ಎಂದರು
ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಇಬ್ಬರೂ ಪ್ರಬಲ ನಾಯಕರಿಂದ ಅತ್ಯಂತ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು
ರಾಷ್ಟçಕವಿ ಕುವೆಂಪು ಅವರ ಅಮರ ವಾಣಿಯಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಬಸವಣ್ಣನವರ ಅನುಭವ ಮಂಟಪದ ಆಶಯದಂತೆ ಪ್ರಸ್ತುತ ಸಚಿವ ಸಂಪುಟದಲ್ಲಿ ರಾಜ್ಯದ ಎಲ್ಲಾ ಸರ್ವ ಸಮೂಹಗಳಿಗೂ ಸಮಾನ ಅಧ್ಯತೆ ಮತ್ತು ಪ್ರಾತಿನಿಧ್ಯ ಸಿಗುವಂತಾಗಬೇಕು ಎಂದು ನಮ್ಮ ಸಮಾಜದವರ ಆಶಯವಾಗಿದೆ ಎಂದು ತಿಳಿಸಿದರು
ಡಿ.ಕೆ. ಶಿವಕುಮಾರ್ ಅವರ ಸುದೀರ್ಘ ಹೋರಾಟ, ಪಕ್ಷದ ಮೇಲಿನ ಅಚಲ ನಿಷ್ಠೆ, ನಿರಂತರ ಜನಸೇವೆ ಮತ್ತು ಅಜೇಯ ಮನೋಬಲಕ್ಕೆ ಇಂದು ಮುಖ್ಯಮಂತ್ರಿ ಹುದ್ದೆಯ ಫಲ ದೊರೆತಿದೆ. ಇದು ಕೇವಲ ‘ಯೋಗ’ವಲ್ಲ. ಬದಲಿಗೆ ಅವರ ‘ಯೋಗ್ಯತೆ’ಗೆ ಸಿಕ್ಕ ಸತ್ಪಲವಾಗಿದೆ ಎಂದು ತಿಳಿದಿದ್ದೇವೆ. ಹಾಗಾಗಿ ಭೋವಿ ಜನಾಂಗದ ಒಳಿತಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿ ಸಮುದಾಯದಿಂದ ಒಬ್ಬ ಸಚಿವರನ್ನು ಆಯ್ಕೆ ಮಾಡಬೇಕು. ಸಮಾಜದಲ್ಲಿ ಸಚಿವರಾಗಿ ಸೇವೆ ಸಲ್ಲಿಸಲು ಸಮರ್ಥ ಹಾಗೂ ಹಿರಿಯ ನಾಯಕರಿದ್ದು, ಈ ಕೆಳಗಿನವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಮಾಜ ಮನವಿ ಮಾಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಸ್.ವಿಜಯ್ ಕುಮಾರ್, ಪಿ ಬಸವರಾಜು, ಪರಮೇಶ್ವರ್, ರಾಮಸ್ವಾಮಿ ಇದ್ದರು.