3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ಶೇಕಡ ನೂರರಷ್ಟು ಎಥನಾಲ್ ಬಳಕೆಗೆ ಆದೇಶ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತ; ಕುರುಬೂರು ಶಾಂತಕುಮಾರ್


ಮೈಸೂರು; ಕಬ್ಬಿನಿಂದ ಹಾಗೂ ಕೃಷಿ ಉತ್ಪನ್ನಗಳಿಂದ ಉತ್ಪಾಧಿಸುವ ಎಥನಾಲ್‌ನ್ನು ಶೇಕಡ ನೂರರಷ್ಟು ಪೆಟ್ರೋಲ್. ಡೀಸೆಲ್‌ಗೆ ಪರ್ಯಾಯವಾಗಿ ಬಳಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಆದೇಶ ಸ್ವಾಗತರ್ಹವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2006 ರಲ್ಲಿ ದಕ್ಷಿಣ ಭಾರತ ರಾಜ್ಯಗಳ ರೈತರ ಸಮಾವೇಶವನ್ನು ಮೈಸೂರಿನಲ್ಲಿ ನಡೆಸಿ ಕಬ್ಬಿನಿಂದ ಎಥನಾಲ್‌ನ್ನು ಉತ್ಪಾದಿಸಲು ಹಾಗೂ ಪೆಟ್ರೋಲ್ ಜೊತೆ ಮಿಶ್ರಣ ಮಾಡಲು ಅವಕಾಶ ನೀಡಬೇಕು. ಇದರಿಂದ ದೇಶ ಖರೀದಿಸುವ ಪೆಟ್ರೋಲ್, ಡೀಸೆಲ್ ವಿದೇಶಿ ವಿನಿಮಯ ಹಣ ಎರಡು ಲಕ್ಷ ಕೋಟಿ ಉಳಿತಾಯವಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಸಮಾವೇಶದ ಮೂಲಕ ನಿರ್ಣಯ ಮಾಡಿ, ಒತ್ತಾಯಿಸಲಾಗಿತ್ತು. ಈ ಬಗ್ಗೆ ನಿರಂತರ ಒತ್ತಾಯ ತರಲಾಗಿತು. 20 ವರ್ಷಗಳ ನಂತರ ಇದು ಜಾರಿಯಾಗಿದೆ . ಇದರಿಂದ 22 ಲಕ್ಷ ಕೋಟಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇಂತಹ ನಿರ್ಧಾರ ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಮೆಕ್ಕೆಜೋಳ ಹೆಚ್ಚು ಅನುಕೂಲವಾಗಲಿ, ಇದರಿಂದ ಕಾರ್ಖಾನೆಗಳು ಸ್ಪರ್ಧಾತ್ಮಕ ಕಬ್ಬಿನ ಬೆಲೆ ನೀಡುವಂತಾಗುತ್ತದೆ ಎಂದು ತಿಳಿಸಿದ್ದಾರೆ.