Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ !

ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮು ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ವೈದ್ಯರ ಶಿಫಾರಸು ಇಲ್ಲದೇ ಯಾವುದೇ ಸಿರಪ್‌ಗಳನ್ನು ಖರೀದಿಸುವಂತಿಲ್ಲ. ಎಲ್ಲಾ ಸಿರಪ್‌ಗಳಿಗೆ ವೈದ್ಯರ ಪ್ರಿಸ್ಕ್ರಿಪ್ಷನ್‌ ಕಡ್ಡಾಯಗೊಳಿಸಲಾಗಿದೆ. ಕೆಮ್ಮಿನ ಸಿರಪ್‌ಗೂ ವೈದ್ಯರ ಶಿಫಾರಸು ಅಗತ್ಯ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕೆಮ್ಮು, ಶೀತ, ಜ್ವರ ಅಥವಾ ಸಿರಪ್‌ ಆಧಾರಿತ ಔಷಧಿಗಳ ಅಗತ್ಯವಿರುವ ಇತರ ಪರಿಸ್ಥಿತಿಗಳಲ್ಲಿ ಜನರು ಈ ಉತ್ಪನ್ನಗಳನ್ನು ಖರೀದಿಸುವ ಮೊದಲು ವೈದ್ಯರಿಂದ ಪ್ರಿಸ್ಕ್ರಿಪ್ಷನ್‌ ಪಡೆಯುವ ಅಗತ್ಯವಿದೆ.