
ಮೈಸೂರು: ಮೈಸೂರಿನ ರೈಲು ನಿಲ್ದಾಣದಲ್ಲಿ ರೈಲಿನಿಂದ ಬಂದ ಕೆಲವರನ್ನು ಬಾಂಗ್ಲಾ ದೇಶದ ಪ್ರಜೆಗಳೆಂದು ಶಂಕಿಸಿ ತಡೆದು, ಪರಿಶೀಲನೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಗೃಹ ಸಚಿವರನ್ನು ಓಲೈಸುವ ಸಲುವಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು ರೈಲ್ವೆ ಪೆÇಲೀಸರು ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿ ಮಂಗಳವಾರ ಮಾತನಾಡಿದ ಅವರು, ಅಕ್ರಮ ಬಾಂಗ್ಲಾ ವಲಸಿಗರು ಮೈಸೂರಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದೇ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಪೆÇಲೀಸರ ಕಾರ್ಯಾಚರಣೆಗೆ ನೆರವು ನೀಡಿದ್ದಾರೆ. ಆದರೆ, ಪೆÇಲೀಸರು ಅಕ್ರಮ ವಲಸಿಗರ ಮೇಲೆ ಕ್ರಮ ತೆಗೆದುಕೊಳ್ಳದೇ, ಸಹಕಾರ ನೀಡಿದ 6 ಮಂದಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆಯೇ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಈ ವಿಚಾರದಲ್ಲಿ ನ್ಯಾಯಯುತ ತನಿಖೆ ಮಾಡಿ, ನನ್ನ ಅಭ್ಯಂತರ ಇಲ್ಲ ಎಂದು ನಾನು ಹೇಳಿದ್ದೆ. ಅಕ್ರಮವಾಗಿ ನಮ್ಮ ದೇಶಕ್ಕೆ ಯಾರೇ ಬಂದರೂ ಅವರನ್ನು ತಡೆಯೋದು ಪೆÇಲೀಸರ ಕರ್ತವ್ಯ. ವಲಸಿಗರ ಮೇಲೆ ಕ್ರಮ ತೆಗೆದುಕೊಳ್ಳೋದು ಬಿಟ್ಟು, ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೇ ಕ್ರಮ ಜರುಗಿಸುವುದು ಸರಿಯಲ್ಲ. ರೈಲ್ವೆ ಸ್ಟೇಷನ್ ಗಳಲ್ಲಿ ಪೆÇಲೀಸರು ಹೆಚ್ಚಿನ ತಪಾಸಣೆ ಮಾಡಬೇಕು. ಅಕ್ರಮ ವಲಸಿಗರು ಬರದಂತೆ ತಡೆಯಬೇಕು ಎಂದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗಳನ್ನು ಗಮನಿಸಿದರೆ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ಪೆÇಲೀಸರು ಅವರ ಮಾತಿಗೆ ಕುಣಿಯುತ್ತಿದ್ದಾರೆ ಅಂತ ಅನಿಸತ್ತಿದೆ ಎಂದರು.
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ನಾವು ಕೂಡ ರೈತರ ಪರವಾಗಿದ್ದೇವೆ. ಬಿಡದಿ ಟೌನ್ ಶಿಪ್‍ಗೆ ನಮ್ಮ ವಿರೋಧವಿದ್ದು, ಕೃಷಿ ಭೂಮಿ ಕೊಡಲು ಜನರು ಒಪ್ಪುತ್ತಿಲ್ಲ. ಆದರೂ ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರ ಬಲವಂತವಾಗಿ ಭೂಮಿ ಕಿತ್ತುಕೊಳ್ಳಲು ಹೊರಟಿದೆ ಎಂದರು.
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕರ ಆಣೆಪ್ರಮಾಣ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನಮ್ಮ ಪಕ್ಷದ ಹಿರಿಯರು ನಿರ್ಧಾರ ಮಾಡ್ತಾರೆ. ಮೊದಲು ಸತ್ಯ ಶೋಧನಾ ಸಮಿತಿ ವರದಿ ಕೊಡಲಿ, ನಂತರ ಮುಂದೆ ಏನು ಮಾಡಬೇಕು ಅನ್ನೋದು ನಿರ್ಧಾರ ಆಗತ್ತದೆ ಎಂದು ಹೇಳಿದರು