Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಗಲು ಹೊತ್ತಿನಲ್ಲಿಯೂ ವಾಹನಗಳಲ್ಲಿ ಲೈಟ್ ಹಾಕಿಕೊಂಡು ಓಡಿಸುತ್ತಾರೆ ಗೊತ್ತಾ !

ಹಗಲು ಹೊತ್ತಿನಲ್ಲಿಯೂ ಈತ ಬೈಕ್, ಕಾರ್‌ನಲ್ಲಿ ಲೈಟ್ ಹಾಕಿಕೊಂಡು ಹೋಗುತ್ತಿದ್ದನ್ನೆಲ್ಲಾ, ಇವನಿಗೆ ಗ್ಯಾನ ಇಲ್ವಾ ಎಂದು ಹೀಗೆಳೆಯುತ್ತಿರಾ. ಈ ರೀತಿ ನೀವು ಅಂದು ಕೊಂಡರೆ ಅದು ತಪ್ಪು. ಯಾಕೇಂದರೆ ಹೊಸ ವಿಷಯ ತಿಳಿದುಕೊಂಡಿಲ್ಲ ಎಂದು ಅರ್ಥ. ಹಾಗಾದರೆ ಯಾಕೇ ಲೈಟ್ ಹಾಕಿಕೊಂಡು ವಾಹನ ಓಡಿಸುತ್ತಾರೆ ಗೊತ್ತಾ.. ಇಲ್ಲಿ ಕೇಳಿ. ಹೊಸ ಬೈಕ್‌ಗಳಲ್ಲಿ ಇಂಜಿನ್ ಸ್ಟಾರ್ಟ್ ಆದ ತಕ್ಷಣ ಹೆಡ್‌ಲೈಟ್ ಆನ್ ಆಗಲು ‘ಆಟೋಮ್ಯಾಟಿಕ್ ಹೆಡ್‌ಲೈಟ್ ಆನ್’ ವ್ಯವಸ್ಥೆಯೇ ಕಾರಣ. ಈ ಹೆಡ್‌ಲೈಟ್ ಯಾಕೆ ಆಫ್ ಆಗಲ್ಲ? (ಆಟೋಮ್ಯಾಟಿಕ್ ಹೆಡ್‌ಲೈಟ್ ಆನ್) ನಿಯಮ, ಸುರಕ್ಷತಾ ಪ್ರಯೋಜನಗಳು ಮತ್ತು ಬ್ಯಾಟರಿ ಬಾಳಿಕೆಯ ಬಗ್ಗೆ ಮಾಹಿತಿ ತಿಳಿಯಿರಿ.

ಸೂರ್ಯನ ಬೆಳಕಿದ್ದರೂ ಈ ಬೈಕ್‌ನ ಚಿಕ್ಕ ಲೈಟ್ ಯಾಕೇ ಹಾಕುತ್ತಾರೆ ;
ರಸ್ತೆಗಳಲ್ಲಿ ಓಡಾಡುವ ಹೊಸ ಬೈಕ್‌ಗಳನ್ನು ನೀವು ಗಮನಿಸಿದ್ದರೆ ಒಂದು ವಿಷಯ ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ಬೈಕ್ ಇಂಜಿನ್ ಸ್ಟಾರ್ಟ್ ಮಾಡಿದ ತಕ್ಷಣ ಹೆಡ್‌ಲೈಟ್ ಕೂಡ ಆಟೋಮ್ಯಾಟಿಕ್ ಆಗಿ ಆನ್ ಆಗುತ್ತದೆ. ಅದನ್ನು ಆಫ್ ಮಾಡಲು ಯಾವುದೇ ಸ್ವಿಚ್ ಇರುವುದಿಲ್ಲ. ಇದರ ಹಿಂದೆ ರಸ್ತೆ ಸುರಕ್ಷತೆಗೆ ಸಂಬAಧಿಸಿದ ಒಂದು ಪ್ರಮುಖ ಕಾರಣವಿದೆ. ಅದೇನು ಗೊತ್ತಾ?

ಆಟೋಮ್ಯಾಟಿಕ್ ಹೆಡ್‌ಲೈಟ್ ಆನ್ ಎಂದರೇನು?
Aಊಔ ಎಂದರೆ ‘ಆಟೋಮ್ಯಾಟಿಕ್ ಹೆಡ್‌ಲೈಟ್ ಆನ್’. ಬೈಕ್ ಇಂಜಿನ್ ಸ್ಟಾರ್ಟ್ ಮಾಡಿದ ತಕ್ಷಣ ಹೆಡ್‌ಲೈಟ್ ತಾನಾಗಿಯೇ ಆನ್ ಆಗುವ ವ್ಯವಸ್ಥೆಗೆ ಂಊಔ ಎನ್ನುತ್ತಾರೆ. ಈ ಫೀಚರ್ ಇರುವ ವಾಹನಗಳಲ್ಲಿ ಲೈಟನ್ನು ಸಂಪೂರ್ಣವಾಗಿ ಆಫ್ ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ 2017ರ ಏಪ್ರಿಲ್ 1ರಿಂದ ತಯಾರಾಗುವ ಎಲ್ಲಾ ಹೊಸ ದ್ವಿಚಕ್ರ ವಾಹನಗಳಲ್ಲಿ ಸರ್ಕಾರ ಈ ಫೀಚರ್ ಅನ್ನು ಕಡ್ಡಾಯಗೊಳಿಸಿದೆ. ರಸ್ತೆಗಳಲ್ಲಿ ಬೈಕ್‌ಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸಬೇಕು ಎನ್ನುವುದೇ ಇದರ ಮುಖ್ಯ ಉದ್ದೇಶ.

ಹಗಲು ಹೊತ್ತಿನಲ್ಲಿ ಲೈಟ್ಸ್ ಯಾಕೆ ಹಾಕಬೇಕು?
ಹಗಲಿನಲ್ಲಿ ಸೂರ್ಯನ ಬೆಳಕಿರುವಾಗಲೂ ಲೈಟ್ ಯಾಕೆ ಬೇಕು? ಎಂದು ಹಲವರಿಗೆ ಪ್ರಶ್ನೆ ಮೂಡುತ್ತದೆ. ಆದರೆ ಹೆಡ್‌ಲೈಟ್‌ನ ಉದ್ದೇಶ ಕೇವಲ ಚಾಲಕನಿಗೆ ದಾರಿ ತೋರಿಸುವುದಲ್ಲ. ಬದಲಿಗೆ, ನಿಮ್ಮ ವಾಹನವು ಇತರರಿಗೆ ಸ್ಪಷ್ಟವಾಗಿ ಕಾಣಿಸುವುದು ಕೂಡ ಅಷ್ಟೇ ಮುಖ್ಯ. ಅದರಲ್ಲೂ ಬೈಕ್, ಸ್ಕೂಟರ್‌ಗಳಂತಹ ಸಣ್ಣ ವಾಹನಗಳು ಟ್ರಾಫಿಕ್‌ನಲ್ಲಿ ಬೇಗನೆ ಕಣ್ಣಿಗೆ ಬೀಳುವುದಿಲ್ಲ. ಆದರೆ ಲೈಟ್ ಆನ್ ಆಗಿದ್ದರೆ, ಎದುರಿನಿಂದ ಬರುವ ವಾಹನಗಳು, ಜಂಕ್ಷನ್‌ಗಳಲ್ಲಿರುವ ಚಾಲಕರು ಮತ್ತು ಪಾದಚಾರಿಗಳು ನಿಮ್ಮ ವಾಹನವನ್ನು ಬೇಗನೆ ಗುರುತಿಸುತ್ತಾರೆ. ಇದರಿಂದ ಅಪಘಾತದ ಸಾಧ್ಯತೆಗಳು ಕಡಿಮೆಯಾಗುತ್ತವೆ.

ರಸ್ತೆ ಅಪಘಾತ ತಡೆಯುವುದೇ ಇದರ ಮುಖ್ಯ ಉದ್ದೇಶ
ದೇಶದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಜೊತೆಗೆ ಬೈಕ್ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸಾರಿಗೆ ಇಲಾಖೆಯು ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಂಊಔ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸಂಶೋಧನೆಗಳ ಪ್ರಕಾರ, ಹೆಡ್‌ಲೈಟ್ ಯಾವಾಗಲೂ ಆನ್ ಆಗಿರುವುದರಿಂದ ವಾಹನವು ದೂರದಿಂದಲೇ ಕಾಣಿಸುತ್ತದೆ. ವಿಶೇಷವಾಗಿ ಓವರ್‌ಟೇಕ್ ಮಾಡುವಾಗ, ತಿರುವುಗಳಲ್ಲಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಇದು ಬಹಳ ಉಪಯುಕ್ತವಾಗಿದೆ