Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಸ್‌ಐಆರ್ ಯಶಸ್ಸಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು; ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ


ಬಿಜೆಪಿ ಮೈಸೂರು ವಿಭಾಗ ಎಸ್‌ಐಆರ್ ವಿಶೇಷ ಸಭೆ
ಮೈಸೂರು:
ಇದೇ ತಿಂಗಳು 29 ರಿಂದ ಆರಂಭವಾಗಿ ಒಂದು ತಿಂಗಳ ಕಾಲ ನಡೆಯಲಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಯಶಸ್ಸಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ತಿಳಿಸಿದರು.
ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಮೈಸೂರು ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗದ ಎಸ್‌ಐಆರ್ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದೆ ಬರಲಿರುವ ಒಂದು ದೇಶ, ಒಂದು ಚುನಾವಣೆ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಳ ಹಣೆಬರಹವನ್ನು ಎಸ್‌ಐಆರ್ ನಿರ್ಧರಿಸಲಿದೆ. ಈ ನಿಟ್ಟಿನಲ್ಲಿ ಪ್ರತಿ ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರಗಳ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಪಾಲಿಕೆ ಸದಸ್ಯರನ್ನೊಳಗೊಂಡ ತಂಡಗಳನ್ನು ರಚಿಸಿ, ತುರ್ತು ಸಭೆಗಳನ್ನು ನಡೆಸಿ, ಕಾರ್ಯಾಚರಣೆಗೆ ಇಳಿಯುವಂತೆ ಸೂಚನೆ ನೀಡಿದರು.
ಮತದಾರ 2002ರ ನಂತರ ಪಟ್ಟಿಗೆ ಸೇರಿದ್ದರೆ, ಕುಟುಂಬದ ಸಂಬAಧದ ದಾಖಲೆಗಳು, ವಲಸೆ ಹೋದವರ ಹಳೇ ಪುರಾವೆಗಳನ್ನು ಮರುಸಲ್ಲಿಸುವಲ್ಲಿ ಕಾರ್ಯಕರ್ತರು ಮತದಾರರಿಗೆ ನೆರವಾಗಬೇಕು. ಕೇವಲ ಜಾತಿ ಲೆಕ್ಕಾಚಾರ ಅಥವಾ ಆಮಿಷಗಳಿಂದ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಿಂದ ನಾಯಕರು ಹೊರಬರಬೇಕು. ಎಸ್‌ಐಆರ್ ಯಶಸ್ವಿಯಾದರೆ ಮಾತ್ರ ನೈಜ ಮತದಾನದ ಪ್ರಮಾಣ ಶೇ. 95 ಕ್ಕಿಂತ ಹೆಚ್ಚಾಗಲಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರವನ್ನೂ ಗೆಲ್ಲುವುದು ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜುಲೈ 30ರ ತನಕ ರಾಜ್ಯದಲ್ಲಿ ನಡೆಯಲಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಲಘುವಾಗಿ ಪರಿಗಣಿಸಿದರೆ ಭವಿಷ್ಯದಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ. ನಿರ್ಲಕ್ಷ÷್ಯ ವಹಿಸಿದರೆ, ನನ್ನನ್ನೂ ಸೇರಿದಂತೆ ಶಾಸಕರಾಗಿದ್ದವರ ಅಥವಾ ಶಾಸಕರಾಗಲಿಚ್ಛಿಸುವವರ ಮತಗಳೂ ಪಟ್ಟಿಯಿಂದ ಡಿಲೀಟ್ ಆಗಲಿವೆ ಎಂದು ಎಚ್ಚರಿಕೆ ನೀಡಿದರು.
ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಿ: ಕಳೆದ ಆರು ತಿಂಗಳಿನಿAದ ಎಸ್‌ಐಆರ್ ನಡೆಯಲಿದೆ ಎಂದು ಹೇಳುತ್ತಾ ಕಾಲ ಕಳೆದಿದ್ದೇವೆ. ಜೂ.29 ರಿಂದ ಜು.30ರವರೆಗೆ ಪ್ರಕ್ರಿಯೆ ನಡೆಯಲಿದೆ. ತೋಳ ಬಂತು ತೋಳ ಕಥೆಯಂತೆ ನಿಜವಾಗಿಯೂ ಪ್ರಕ್ರಿಯೆ ಆರಂಭವಾದಾಗ ನಾವು ಮನೆಯಲ್ಲಿ ಮಲಗುವಂತಾಗಬಾರದು. ಇದೊಂದು ಅತ್ಯಂತ ಗಂಭೀರವಾದ ಪ್ರಕ್ರಿಯೆಯಾಗಿದ್ದು, ಕಾರ್ಯಕರ್ತರು ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕಿದೆ ಎಂದು ಕಿವಿ ಮಾತು ಹೇಳಿದರು.
ಹಳೆಯದಲ್ಲ, ಹೊಸ ಲೆಕ್ಕ: ಇದು ಕೇವಲ ಮತದಾರರ ಪಟ್ಟಿಗೆ ಹೊಸ ಹೆಸರು ಸೇರಿಸುವ ಅಥವಾ ತೆಗೆಯುವ ಸಾಂಪ್ರದಾಯಿಕ ಪ್ರಕ್ರಿಯೆಯಲ್ಲ. ಶಿಕ್ಷಕರು ಬ್ಲಾ÷್ಯಕ್ ಬೋರ್ಡ್ ಮೇಲಿರುವ ಹಳೆಯ ಬರಹವನ್ನೆಲ್ಲಾ ಸಂಪೂರ್ಣವಾಗಿ ಅಳಿಸಿ, ಮೊದಲಿನಿಂದ ಹೊಸ ಲೆಕ್ಕ ಬರೆಯುವಂತೆ ಎಸ್‌ಐಆರ್ ಇರಲಿದೆ. ಬೂತ್‌ನಲ್ಲಿರುವ ಎಲ್ಲಾ ಹಳೇ ವೋಟ್‌ಗಳನ್ನು ಅಳಿಸಿ, ಮೊದಲನೇ ಮತದಾರನಿಂದ ಹೊಸದಾಗಿ ಪ್ರಕ್ರಿಯೆ ಆರಂಭವಾಗುತ್ತದೆ. ಬಿಎಲ್‌ಓಗಳು ತಂದುಕೊಡುವ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿ ವಾಪಸ್ ತಲುಪಿಸದಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮ ಮತವನ್ನು ಉಳಿಸಲು ಸಾಧ್ಯವಿಲ್ಲ. ಹೀಗಾಗಿ ನೈಜ ಮತದಾರರನ್ನು ಪಟ್ಟಿಗೆ ಸೇರಿಸುವ ಕೆಲಸ ಮಾಡಿ ಎಂದರು.
ಚುನಾವಣೆಗಳ ಗೆಲುವಿಗೆ ಮತದಾರರ ನೈಜ ಸಂಪರ್ಕವೇ ಮುಖ್ಯ. ಪ್ರತಿ ಬೂತ್ ಮಟ್ಟದಲ್ಲಿ ಮತದಾರರ ಹೆಸರು, ಮೊಬೈಲ್ ಸಂಖ್ಯೆಯನ್ನು ಒಳಗೊಂಡ ಪ್ರತ್ಯೇಕ ಪುಸ್ತಕ ನಿರ್ವಹಣೆ ಮಾಡುವ ಬುದ್ಧಿವಂತಿಕೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಅಳವಡಿಸಿಕೊಳ್ಳಬೇಕು. ಮದುವೆಯಾಗಿ ಅಥವಾ ಉದ್ಯೋಗ ನಿಮಿತ್ತ ಬೆಂಗಳೂರು, ದೆಹಲಿ, ಚೆನ್ನೆöÊ ಮುಂತಾದ ಕಡೆ ನೆಲೆಸಿರುವ ನಮ್ಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ದತ್ತಾತ್ರಯ ಮಾತನಾಡಿದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇAದ್ರ, ಶಾಸಕ ಟಿ.ಎಸ್.ಶ್ರೀವತ್ಸ, ಎಂಎಲ್ಸಿಗಳಾದ ರಘು ಕೌಟಿಲ್ಯ, ನವೀನ್, ಮಾಜಿ ಶಾಸಕರಾದ ಎನ್.ಮಹೇಶ್, ಹರ್ಷವರ್ಧನ್, ನಿರಂಜನ್ ಕುಮಾರ್, ಪಕ್ಷದ ಗ್ರಾಮಾಂಥರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ,ಮಾಜಿ ಎಂಎಲ್ಸಿ ತೋಂತೋAಟದಾರ್ಯ, ಲಕ್ಷಿ÷್ಮ ಅಶ್ವಿನ್ ಗೌಡ, ಮೈಸೂರು ವಿಭಾಗ ಸಹ ಪ್ರಭಾರಿ ಈ.ಸಿ.ನಿಂಗರಾಜೇಗೌಡ, ಹಾಸನ ಜಿಲ್ಲಾಧ್ಯಕ್ಷ ಸಿದ್ದೇಶ್, ಮಂಡ್ಯ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡರಾದ ಎನ್.ವಿ.ಫಣೀಶ್, ಸಿದ್ದರಾಜು, ಮಾಜಿ ಮೇಯರ್ ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ಕವೀಶ್ ಗೌಡ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.