Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪುಸ್ತಕಗಳಲ್ಲಿ ಒಂದು ತಲೆಮಾರಿನ ಅನುಭವ ಮತ್ತು ಜ್ಞಾನ ಹುದುಗಿರುತ್ತದೆ


ಮೈಸೂರು : ‘ಹೆತ್ತವರು ತಮ್ಮ ಮಕ್ಕಳಿಗೆ ಆಸ್ತಿ ಮತ್ತು ಆಭರಣ ಸಂಗ್ರಹಿಸಿಕೊಡುವದಕ್ಕೆ ನೀಡುವಷ್ಟೇ ಹೆಚ್ಚಿನ ಮುತುವರ್ಜಿಯನ್ನು, ಅವರಿಗೆ ಸಾಹಿತ್ಯದ ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿಕೊಡುವ ದಿಕ್ಕಿನಲ್ಲಿಯೂ ವಹಿಸಬೇಕಾದ ಅಗತ್ಯ ತುಂಬಾ ಇದೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಹೇಳಿದರು.
ನಗರದ ಶ್ರೀರಾಂಪುರದಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ದೀಪ್ತಿ ಸಾಂಸ್ಕöÈತಿಕ ವೇದಿಕೆ ಹಾಗೂ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಪುಸ್ತಕಗಳಲ್ಲಿ ಒಂದು ತಲೆಮಾರಿನ ಅನುಭವ ಮತ್ತು ಜ್ಞಾನ ಹುದುಗಿರುತ್ತದೆ. ಜೀವನ ದರ್ಶನವೂ ಇರುತ್ತದೆ. ವಿದ್ಯಾರ್ಥಿಗಳು, ಯುವಜನರು ಇಂತಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ, ಅವರ ಜೀವನದ ದೃಷ್ಟಿಕೋನ ಬದಲಾಗುತ್ತದೆ. ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ಬೇಕಾದ ವ್ಯಕ್ತಿತ್ವ ಸಹ ಬೆಖೆಯುತ್ತದೆ’ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ. ರವಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಸೇವೆ ಮತ್ತು ಸಾಧನೆ ಮಾಡಲು ತುಂಬಾ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದು ತಿಳಿಸಿದರು.
ಕೆ.ಆರ್. ನಗರ ತಾಲ್ಲೂಕು ಪಂಚಾಯಿತಿಯ ವ್ಯವಸ್ಥಾಪಕ ಕೆ.ಎಸ್. ಸತೀಶ್ ಕುಮಾರ್ ಮಾತನಾಡಿ, ‘ಸಾಹಿತ್ಯ ಮತ್ತು ಸಾಂಸ್ಕöÈತಿಕ ಕ್ಷೇತ್ರದಲ್ಲಿ ನಾವು ತೊಡಗಿಸಿಕೊಳ್ಳುವುದರಿಂದ ಸಮಾಜಮುಖಿಯಾಗಬಹುದು. ಅದರೊಟ್ಟಿಗೆ ಸ್ನೇಹ ವಲಯದ ವಿಸ್ತರಣೆ ಕೂಡ ಆಗುತ್ತದೆ ಎಂದು ಹೇಳಿದರು.
ಲೇಖಕ ಕಾಳಿಹುಂಡಿ ಶಿವಕುಮಾರ್ ಮಾತನಾಡಿ, ‘ನಮ್ಮನ್ನು ಅಗಲಿದರೂ, ತಮ್ಮ ಹಾಡುಗಳ ಮೂಲಕ ಜನಮನದಲ್ಲಿ ಉಳಿದಿರುವ ಗಾಯಕಿ ಎಸ್. ಜಾನಕಿ ಅವರು ತಮ್ಮ ಜೀವಿತದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದು ವಿಶೇಷ. ಅವರಿಗೆ ಮೈಸೂರು ತುಂಬಾ ಇಷ್ಟವಾಗಿದ್ದ ಕಾರಣ, ಇಲ್ಲಿನ ಮಣ್ಣಿನಲ್ಲಿ ಲೀನವಾಗಿದ್ದಾರೆ. 2024ರ ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ಸವಿ ನೆನಪಾಗಿ ಉಳಿದಿದೆ’ ಎಂದು ಸ್ಮರಿಸಿಕೊಂಡರು.
ಹಿರಿಯ ಲೇಖಕ ಕೊಕ್ಕಡ ವೆಂಕಟರಮಣ ಭಟ್ ಅವರು ‘ಶ್ರೀ ವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಭಾಜನಾಗಿರುವ ಕವಿ ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ದೀಪ್ತಿ ಸಾಂಸ್ಕöÈತಿಕ ವೇದಿಕೆಯ ಪದಾಧಿಕಾರಿ ಕಲಾ ಪ್ರಸಾದ್, ನಿವೃತ್ತ ಹಿರಿಯ ಶುಶ್ರೂಷಕ ಕಣ್ಣೂರು ವಿ. ಗೋವಿಂದಾಚಾರಿ, ರಂಗಕರ್ಮಿ ಚಂದ್ರು ಮಂಡ್ಯ, ಕವಯತ್ರಿ ಅನಿತಾ ಅಶೋಕ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಗಲಿದ ಗಾಯಕಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಕುದೇರು ಎಸ್. ಪರಶಿವಮೂರ್ತಿ ಎಸ್. ಜಾನಕಿ ಅವರಿಗೆ ‘ಗಾನ ನಮನ’ ಸಲ್ಲಿಸಿದರು.