Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಲಿತರು ಇಂದಿಗೂ ಭೂಮಿ ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ

ಎಚ್.ಡಿ.ಕೋಟೆ: ಸ್ವಾತಂತ್ರ್ಯ ಬಂದು ಎಂಬತ್ತು ವರ್ಷ ಸಮೀಪಿಸುತ್ತಿದ್ದರೂ ಕೂಡ ದಲಿತರು ಇಂದಿಗೂ ಭೂಮಿ ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಗೂರು ತಾಲ್ಲೂಕಿನ ಕಾಡಬೇಗೂರು ಗ್ರಾಮದ ದಲಿತ ಮಹಿಳೆ ಸವರ್ಣೀಯರಿಂದ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಳು ಮಹಿಳೆಯನ್ನು ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದರು.
ತಾಲ್ಲೂಕಿನ ಕಾಡಬೇಗೂರು ಗ್ರಾಮದ ದಲಿತ ಸಮುದಾಯದ ಸುಮಾ ಮತ್ತು ಲತಾ ಇಬ್ಬರು ಅಕ್ಕ ತಂಗಿಯರು ಮೂವತ್ತು ನಲವತ್ತು ವರ್ಷಗಳಿಂದ ತಮ್ಮ ತಂದೆ ಕಾಲದಿಂದ ಅನುಭವದಲ್ಲಿ ಇದ್ದುಕೊಂಡು ವ್ಯವಸಾಯ ಮಾಡುತ್ತಿದ್ದ ಜಮೀನಿಗೆ ಅದೇ ಗ್ರಾಮದ ದಾಸಪ್ಪನ ಮಕ್ಕಳಾದ ಸ್ವಾಮಿ, ಸುಂದರಾದಾಸು ಹಾಗೂ ಇವರ ಸಂಬಂಧಿಕರು ಸೇರಿಕೊಂಡು ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಸುಮಾಳ ಮೇಲೆ ಮಹಿಳೆ ಎಂಬುದನ್ನು ಲೇಕ್ಕಿಸದೆ ಮಾರಣಾಂತಿಕವಾಗಿ ಹಲ್ಲೇ ಮಾಡಿರುವುದು ಇಡೀ ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಹಾಗಾಗಿ ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಈಗಾಗಲೇ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ಹಲ್ಲೆ ಪ್ರಕರಣ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾನೂನಿನ ಅಡಿಯಲ್ಲಿ ತಪ್ಪಿಸಿಕೊಳ್ಳದ ರೀತಿಯಲ್ಲಿ ನ್ಯಾಯಾಲಯಕ್ಕೆ ವರದಿ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿದ ಮುಖಂಡರು ಮಹಿಳೆಯರ ಮೇಲೆ ಆರೋಪಿಗಳು ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಿದ್ದಾರೆ ಇದನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಆರೋಪಿಗಳು ನೀಡಿರುವ ದೂರನ್ನು ವಜಾ ಮಾಡಬೇಕು. ಹಾಗೆಯೇ ಆರೋಪಿಗಳನ್ನು ತಕ್ಷಣದಲ್ಲೇ ಬಂಧಿಸಬೇಕು ಎಂದು ಮೇಲೆ ಅಧಿಕಾರಿಗಳಿಗೆ ಮನವಿ ಮಾಡಲು ತೀರ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ದೊಡ್ಡಸಿದ್ದು ಹಾದನೂರು, ಸಣ್ಣಸ್ವಾಮಿ, ಮಲ್ಲಿಕಾರ್ಜುನ, ಕಳ್ಳಿಮುದ್ದನಹಳ್ಳಿ ಚಂದ್ರು, ಸಿದ್ದರಾಜು ಶಂಕರಪುರ, ವಾಟಾಳ ನಾಗರಾಜು, ಬೊಮ್ಮೇನಹಳ್ಳಿ ಕುಮಾರ್, ಗೋವಿಂದರಾಜು, ಗಟ್ಟವಾಡಿ ಮಹೇಶ್, ಕಾಳಪ್ಪಾಜಿ, ಮಹೇಶ್ ಕಟ್ಟೇಮಳಲವಾಡಿ, ವರದಯ್ಯ, ಮಟಕೆರೆ ಮಹೇಶ್, ಆನಂದ, ಕೃಷ್ಣ, ಮಹಾದೇವ, ಚಂದ್ರು ಹಾದನೂರು, ಆನಂದ ಬ್ಯಾಳಾರು, ಶಿವು ಕಪ್ಪಸೋಗೆ, ಅನಿಲ ದೇಬೂರು, ಪಾಪಣ್ಣ, ರತ್ನಯ್ಯ, ಲೋಕೇಶ್, ಹೈರಿಗೆ ಕುಮಾರ್, ಅನಿಲ್, ಚಲುವರಾಜು, ಮಣಿಕಂಠ, ಶೀರಮ್ಮ, ಪಾರ್ವತಿ ಇದ್ದರು.

ಬಾಕ್ಸ್,
ಕಾಡಬೇಗೂರು ಗ್ರಾಮದ
ದಲಿತ ಮಹಿಳೆ ಸುಮಾ ಮೇಲೆ ನಡೆದಿರುವ ಹಲ್ಲೆಯ ದೂರಿನ ಬಗ್ಗೆ ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಕಿರಣ್, ಪಿಎಸ್ಐ ಸರಗೂರು ಪೊಲೀಸ್ ಠಾಣೆ.