
ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಮೈಸೂರಿನಲ್ಲಿ ನೆಲೆ ನಿಂತಿರುವ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ದುಬಾರಿ ಬೆಲೆಯ ಹಸಿರು ರೇಷ್ಮೆ ಸೀರೆಯನ್ನು ನೀಡಿ, ಹರಿಕೆ ತೀರಿಸಿದರು.
ಗಣ್ಯರ ಸಾಲಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಂಡತಿ ಉಷಾ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತಿದ್ದು ಅದರಂತೆ ಹಸಿರು ಬಣ್ಣದ ರೇಷ್ಮೆ ಸೀರೆಯನ್ನು ನೀಡಿ ಹರಕೆ ತೀರಿಸಿದರು.
ಈ ಹಿಂದೆ ಡಿ.ಕೆ. ಶಿವಕುಮಾರ್ ಸಂಕಷ್ಟದ ಸಮಯದಲ್ಲಿ ಜೈಲಿನಿಂದ ಹೊರಬಂದ ಸಂದರ್ಭದಲ್ಲಿ ಚಾಮುಂಡಿ ಬೆಟ್ಟಕ್ಕೆ ಬೆಳ್ಳಿ ಆನೆಗಳ ಮೂರ್ತಿ ನೀಡಿ ಹರಕೆ ತೀರಿಸಿದ್ದರು. ಅದೇ ರೀತಿ ಚಾಮುಂಡಿ ತಾಯಿಯ ಪರಮಭಕ್ತರಾದ ಅವರು ಇಂದು ಮೊದಲ ಆಷಾಢ ಶುಕ್ರವಾರಕ್ಕೆ ಚಾಮುಂಡಿ ತಾಯಿಗೆ ರೇಷ್ಮೆ ಸೀರೆ ಅರ್ಪಿಸಿದರು. ಮುಂಜಾನೆಯ ವಿವಿಧ ಪೂಜಾ ಕೈಂಕರ್ಯಗಳ ನಂತರ ದೇವಿಗೆ ಸಿಎಂ ಕುಟುಂಬ ನೀಡಿರುವ ರೇಷ್ಮೆ ಸೀರೆಯನ್ನು ಅಲಂಕಾರ ಮಾಡಲಾಯಿತು.
ತಾಯಿ ದರ್ಶನ ಪಡೆದ ವಿಜಯಲಕ್ಷಿ÷್ಮ ದರ್ಶನ್: ಚಿತ್ರ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷಿ÷್ಮ ಸಹ ಮೊದಲ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕಷ್ಟದಿAದ ಪಾರು ಮಾಡುವಂತೆ ದೇವಿಯಲ್ಲಿ ಪ್ರಾರ್ಥನೆ ಮಾಡಿದರು. ಈ ಹಿಂದೆ ಚಾಮುಂಡೇಶ್ವರಿ ತಾಯಿಯ ಪರಮ ಭಕ್ತರಾದ ನಟ ದರ್ಶನ್ ಆಷಾಢ ಮಾಸದಲ್ಲಿ ತಪ್ಪದೆ ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಿದ್ದರು. ಆದರೆ ಈಗ ಅವರು ರೇಣುಕ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಹಾಗಾಗಿ ಅವರ ಬದಲು ಅವರ ಪತ್ನಿ ಅದರಂತೆ ಈ ಬಾರಿ ವಿಜಯಲಕ್ಷಿ÷್ಮ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.