
ಮೈಸೂರು; ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಎಸ್‌ಐಆರ್ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಸ್ಟರ್ ಟ್ರೆöÊನರ್, ಚುನಾವಣಾ ತರಬೇತಿ ಮತ್ತು ಜನಗಣತಿ ತರಬೇತಿದಾರ ರಮೇಶ ಎಂ ಆಗಮಿಸಿ, ಮತದಾನದ ಮಹತ್ವ ಹಾಗೂ ಎಸ್‌ಐಆರ್ ಅರ್ಜಿಯನ್ನು ಯಾವ ರೀತಿಯಾಗಿ ಭರ್ತಿ ಮಾಡಬೇಕು ಮತ್ತು ಅದರ ಪ್ರಾಮುಖ್ಯತೆಯನ್ನು ಕುರಿತು ಎಲ್ಲಾ ವಿದ್ಯಾರ್ಥಿಗಳಿಗೆ, ಅಧ್ಯಾಪಕರು ಹಾಗೂ ಅಧ್ಯಾಪಕೇತರರಿಗೆ ತಿಳಿಸಿಕೊಟ್ಟರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ಸಹಾಯಕ ತರಬೇತುದಾರ ಮಂಜುನಾಥ್, ಸಿಇಓ ಡಾ. ಎಸ್.ಆರ್. ರಮೇಶ್ ಉಪಸ್ಥಿತರಿದ್ದರು.
ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.