Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜಿಲ್ಲಾ ಮಟ್ಟದ ಸೈಕಲ್ ಪೋಲೋ ಪಂದ್ಯಾವಳಿಗೆ ಚಾಲನೆ

ಮೈಸೂರು: ಸೈಕಲ್ ಪೋಲೋ ಕ್ರೀಡೆಥಿu ಜನರ ಬೆಂಬಲ, ಕ್ರೀಡಾಪಟುಗಳ ಆಸಕ್ತಿ ಹಾಗೂ ಸಂಘ-ಸAಸ್ಥೆಗಳ ಸಹಕಾರದಿಂದ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಬೆಳೆಯಲಿದೆ ಎಂದು ನೆಹರು ಯುವ ಕೇಂದ್ರದ ನಿವೃತ್ತ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ಹೇಳಿದರು.
ನಗರದ ಸರಸ್ವತಿಪುರಂ ಪೊಲೀಸ್ ಠಾಣೆ ಮುಂಭಾಗದ ಗೌತಮ್ ಸ್ಕೂಲ್ ಮೈದಾನದಲ್ಲಿ ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಜಿಲ್ಲಾ ಮಟ್ಟದ ಸೈಕಲ್ ಪೋಲೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು,
ಸೈಕಲ್ ಪೋಲೋ ಕ್ರೀಡೆ ಇಂದು ಸಣ್ಣ ಮಟ್ಟದಲ್ಲಿ ಆರಂಭಗೊAಡಿದ್ದರೂ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದರು. ಪಂದ್ಯಾವಳಿಯ ಆಯೋಜಕರಾದ ಅಕ್ಷಯ್ ಸಂಸ್ಥೆಯ ಸಂಸ್ಥಾಪಕ ಅರುಣ್ ಪಾಟೀಲ್ ಮಾತನಾಡಿ,
ಪಂದ್ಯಾವಳಿಯಲ್ಲಿ ಮೈಸೂರು, ಎಚ್.ಡಿ.ಕೋಟೆ ಹಾಗೂ ಹುಣಸೂರು ತಾಲ್ಲೂಕುಗಳ ಮೂ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡವು ರಾಜ್ಯಮಟ್ಟದ ಸೈಕಲ್ ಪೋಲೋ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದು, ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುವಾನಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮಾಂಜನೇಯ ರೆಡ್ಡಿ, ಸೆಂಟ್ರಲ್ ಅಕಾಡೆಮಿಯ ನಿರ್ದೇಶಕಿ ಶ್ರೀದೇವಿ ರೆಡ್ಡಿ, ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಸೈಕಲ್ ಪೋಲೋ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷೆ ಡಾ. ವಿಜಯಲಕ್ಷಿ÷್ಮÃ ಎ. ಪಾಟೀಲ್, ಸೈಕಲ್ ಪೋಲೋ ಫೆಡರೇಷನ್ ಆಫ್ ಇಂಡಿಯಾದ ಸಹ ಕಾರ್ಯದರ್ಶಿ ಗುರುರಾಜ್ ಜೋಶಿ ಹಾಜರಿದ್ದರು.
ಜಿಲ್ಲೆ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕರು ಹಾಗೂ ಯುವತಿಯರು ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು