Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕುಡಿಯುವ ನೀರಿಗೆ ತೊಂದರೆಯಾಗದ0ತೆ ಎಚ್ಚರಿಕೆ ವಹಿಸಿ; ಸಚಿವ ಡಾ:ಯತೀಂದ್ರ ಸಿದ್ದರಾಮಯ್ಯ


ರೈತರಿಗೆ ಕಡಿಮೆ ನೀರಿನ ಬೇಡಿಕೆಯ ಪರ್ಯಾಯ ಬೆಳೆ ಬೆಳೆಯಲು ಪ್ರೇರೇಪಿಸಿ
• ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ ನೀಡಿ
ಮೈಸೂರು
: ಜಿಲ್ಲೆಯಲ್ಲಿ ಶೇ 58 ರಷ್ಟು ಮಳೆಯ ಕೊರತೆಯಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದAತೆ ಅಧಿಕಾರಿಗಳು ಮುನ್ನಚ್ಚರಿಕಾ ಕ್ರಮ ಹಾಗೂ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ: ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಶಾರದದೇವಿನಗರ ಮೈಸೂರು ಮಹಾನಗರಪಾಲಿಕೆ ವಲಯ ಕಚೇರಿ 3 ರಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಳೆದ 3 ದಿನಗಳಿಂದ ಮಳೆಯಾಗುತ್ತಿದ್ದು, ಜಲಾಶಯದಿಂದ ಬಿಡಲಾಗುವ ನೀರನ್ನು ಆದ್ಯತೆಯ ಮೇಲೆ ಕೆರೆಗಳನ್ನು ತುಂಬಿಸಲು ಬಳಸಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳು ಸಮರ್ಪಕವಾಗಿ ತುಂಬಿಸಲು ನಿಗಾ ವಹಿಸಬೇಕು ಎಂದು ಸೂಚಿಸಿದರು.
ಮುಂದಿನ ವರ್ಷದ ಜೂನ್ ಮಾಹೆಯವರೆಗೆ ಬರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳು ಬರ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು. ಕೆರೆಗೆ ನೀರು ತುಂಬಿಸುವುದರಿAದ ಗ್ರಾಮೀಣ ಭಾಗದಲ್ಲಿ ಬೋರ್‌ವೆಲ್ ಗಳು ರೀಚಾರ್ಜ್ ಆಗುತ್ತದೆ. ನಗರ ಪ್ರದೇಶದ ಚಿತ್ರಣ ಬೇರೆ ಇದ್ದು, ಬೋರ್ ವೆಲ್ ಗಳನ್ನು ರೀಚಾರ್ಜ್ ಮಾಡಲು ಹೊಸ ಚಿಂತನೆ ನಡೆಸಬೇಕಿದೆ ಎಂದರು.
ಬರ ಪರಿಸ್ಥಿತಿಯ ಹಿನ್ನಲೆ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸ ಬೋರ್ ವೆಲ್ ಕೊರೆಸಿದ ಸಂದರ್ಭದಲ್ಲಿ ಹಾಗೂ ಕುಡಿಯುವ ನೀರನ್ನು ಒದಗಿಸುವ ಮೂಲಗಳಲ್ಲಿ ನೀರನ್ನು ನಿಗಧಿತವಾಗಿ ರಸಾಯನಿಕ ಹಾಗೂ ಜೈವಿಕ ಪರೀಕ್ಷೆಗಳಿಗೆ ಒಳಪಡಿಸಿ ಎಂದು ತಿಳಿಸಿದರ.
ಹೆಚ್ಚಿನ ನೀರಿನ ಬೇಡಿಕೆ ಇರುವ ಭತ್ತ, ಕಬ್ಬು, ಮುಂತಾದ ವಾಣಿಜ್ಯ ಬೆಳೆಗಳನ್ನು ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಬೆಳೆಯದಂತೆ ಈಗಾಗಲೇ ಕೃಷಿ ಇಲಾಖೆಯಿಂದ ರೈತರಿಗೆ ತಿಳಿಸಲಾಗಿದೆ. ಇದರ ಬದಲಾಗಿ ಪರ್ಯಾಯ ಬೆಳೆಗಳಾದ ರಾಗಿ, ಜೋಳ, ಸಿರಿಧಾನ್ಯ ಇನ್ನಿತರೆ ಬೆಳೆಗಳನ್ನು ಬೆಳೆಯಲು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಸಹ ಸಹಕರಿಸಬೇಕು ಎಂದರು.
ಬರಗಾಲ ಮುಂದುವರೆದಲ್ಲಿ ಬೋರ್ ವೆಲ್ ಗಳಿಂದ ದೊರೆಯುವ ನೀರು ಸಹ ಕ್ಷೀಣಿಸಬಹುದು. ನಂತರ ಟ್ಯಾಂಕರ್ ಅಥವಾ ಖಾಸಗಿ ಟ್ಯಾಂಕರ್ ಅವಲಂಬಿಸಬೇಕಾಗುತ್ತದೆ. ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಯೋಜನೆಗಳನ್ನು ರೂಪಿಸಿಕೊಳ್ಳಿ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕೆರೆ ತುಂಬಿಸುವ ಸಂದರ್ಭದಲ್ಲಿ ಎಲ್ಲಾ ಕೆರೆಗಳಿಗೆ ನೀರು ಸಮನಾಗಿ ಹಂಚಿಕೆಯಾಗಬೇಕು. ಮೈಸೂರು ನಗರ ವ್ಯಾಪ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳು ಕಸವನ್ನು ಸರಿಯಾಗಿ ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ ರೆಡ್ಡಿ ಜಿ ಮಾತನಾಡಿ, ಮೈಸೂರಿನ ಹೂಟಗಳ್ಳಿಯ 6 ವಾರ್ಡ್ ಗಳಿಗೆ 6 ಟ್ಯಾಂಕರ್ ಮೂಲಕ, ಬೋಗಾದಿಯ 2 ವಾರ್ಡ್ ಗಳಿಗೆ 3 ಟ್ಯಾಂಕರ್ ಮೂಲಕ ಹಾಗೂ ರಮ್ಮನಳ್ಳಿಯ 5 ವಾರ್ಡ್ ಗಳಿಗೆ 5 ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ರೈತರು ಕಳೆದ ಸಾಲಿನಲ್ಲಿ 2,22,000 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಿದ್ದರು, ಸದರಿ ಸಾಲಿನಲ್ಲಿ 60- 70 ಸಾವಿರ ಹೆಕ್ಟೇರ್ ಬಿತ್ತನೆ ಕಡಿಮೆಯಾಗಿದ್ದು, 1,66,000 ಹೆಕ್ಟೇರ್ ಬಿತ್ತನೆಯಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.