
ಮೈಸೂರು; ಸಮರ್ಥನಂ ವಿಶೇಷ ಚೇತನರ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ ಮೈಸೂರು ಘಟಕವು ಒರೆಕಲ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ “ಬುದ್ಧಿವಿಕಲಚೇತನ ಮಕ್ಕಳಿಗಾಗಿ ಮೈಸೂರು ವಿಭಾಗ ಮಟ್ಟದ ಜನಪದ ನೃತ್ಯ ಸ್ಪರ್ಧೆ ಜನಪದೋತ್ಸª 2026” ಕಾರ್ಯಕ್ರಮವು ಗುರುವಾರ ನಗರದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮAದಿರದಲ್ಲಿ ಸಂಭ್ರಮ, ಸಡಗರ ಮತ್ತು ಸಾಂಸ್ಕöÈತಿಕ ವೈಭವದೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ಸಂಪ್ರದಾಯಬದ್ಧವಾಗಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮೈಸೂರು ವಿಭಾಗದ 12ಕ್ಕೂ ಹೆಚ್ಚು ವಿಶೇಷ ಶಾಲೆಗಳ ಬುದ್ಧಿವಿಶೇಷ ಚೇತನ ಮಕ್ಕಳು ತಮ್ಮ ವಿಶಿಷ್ಟ ಜನಪದ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್. ರಾಘವೇಂದ್ರ, ಜನಪದೋತ್ಸವದ ಎರಡನೇ ಆವೃತ್ತಿಯು ವಿಶೇಷ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮಹತ್ವದ ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ದೊರೆತಿರುವ ಅಮೂಲ್ಯ ಅವಕಾಶವಾಗಿದೆ ಎಂದು ಹೇಳಿದರು.
ಬುದ್ಧಿವಿಶೇಷ ಚೇತನ ಮಕ್ಕಳು ಕಲೆ, ಸಂಸ್ಕöÈತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಅವರಿಗೆ ಆತ್ಮವಿಶ್ವಾಸ, ಉತ್ಸಾಹ ಮತ್ತು ಸಮಾಜದೊಂದಿಗೆ ಬೆರೆಯುವ ಅವಕಾಶವನ್ನು ನೀಡುತ್ತವೆ. ವಿಶೇಷಚೇತನg ಅಗತ್ಯಗಳನ್ನು ಅರ್ಥಮಾಡಿಕೊಂಡಾಗ, ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಅವಕಾಶಗಳ ಅಗತ್ಯವಿರುವುದು ತಿಳಿಯುತ್ತದೆ ಎಂದು ಹೇಳಿದರು.
ಸರ್ಕಾರ ವಿಶೇಷಚೇತನರ ಹಾಗೂ ಅವರ ಆರೈಕೆದಾರರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮರ್ಥನಂ ವಿಶೇಷ ಚೇತನರ ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಗುರುರಾಘವೇಂದ್ರ ಮಾತನಾಡಿ, ಬುದ್ಧಿವಿಕಲಚೇತನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಸಾಂಸ್ಕöÈತಿಕ ಉತ್ಸವಗಳು ಹೆಚ್ಚು ಹೆಚ್ಚು ನಡೆಯಬೇಕು. ಎಂದು ಹೇಳಿದರು. ಸಮರ್ಥನಂ ವಿಶೇಷ ಶಾಲೆಗಳ ವ್ಯವಸ್ಥಾಪಕಿ ಡಾ. ಗೀತಾ ಕೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ಮೈಸೂರು ಘಟಕದ ಅಧ್ಯಕ್ಷ ಏನ್. ಶ್ರೀಧರ್ ದೀಕ್ಷಿತ್ ಮಾತನಾಡಿದರು.
ಮನಸೂರೆಗೊಂಡ ಜನಪದ ನೃತ್ಯಗಳು;
ಮೈಸೂರು ವಿಭಾಗದ 12 ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಮಲೆ ಮಹದೇಶ್ವರ, ಸಿದ್ದಪ್ಪಾಜಿ, ಎಲ್ಲಮ್ಮ ಸೇರಿದಂತೆ ವಿವಿಧ ಜನಪದ ದೇವತೆಗಳು ಮತ್ತು ಜನಪದ ಸಂಸ್ಕöÈತಿಯನ್ನು ಪ್ರತಿಬಿಂಬಿಸುವ ಹಾಡುಗಳಿಗೆ ಅತ್ಯಂತ ಮನಮೋಹಕವಾಗಿ ನೃತ್ಯ ಪ್ರದರ್ಶಿಸಿದರು.
ಮಕ್ಕಳ ಬಣ್ಣಬಣ್ಣದ ವೇಷಭೂಷಣಗಳು, ಜನಪದ ಶೈಲಿಯ ಅಲಂಕಾರ, ಮುಗ್ಧ ಅಭಿನಯ ಹಾಗೂ ನೃತ್ಯ ಕೌಶಲ್ಯಗಳು ಸಭಿಕರ ಮನಸೆಳೆಯಿತು. ಪ್ರೇಕ್ಷಕರು ಕರತಾಡನದ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು.
ವಿಜೇತ ತಂಡಗಳು;
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.
ಪ್ರಥಮ ಬಹುಮಾನ: ಪ್ರೇರಣಾ ವಿಶೇಷ ಶಾಲೆ, ಮಂಡ್ಯ 15,000 ಹಾಗೂ ಆಕರ್ಷಕ ಟ್ರೋಫಿ
ದ್ವಿತೀಯ ಬಹುಮಾನ: ಆಶಾ ಸದನ ವಿಶೇಷ ಶಾಲೆ, ಮಂಡ್ಯ 8,000 ಹಾಗೂ ಆಕರ್ಷಕ ಟ್ರೋಫಿ
ತೃತೀಯ ಬಹುಮಾನ: ಆಶಿಯಾನ ವಿಶೇಷ ಶಾಲೆ, ಮೈಸೂರು 5,000 ಹಾಗೂ ಆಕರ್ಷಕ ಟ್ರೋಫಿ
ಕಾರ್ಯಕ್ರಮದಲ್ಲಿ ಡಾ. ಸೋಮಶೇಖರ್, ಶ್ರೀನಿವಾಸ ರೆಡ್ಡಿ, ಸಾಗರ ಗುಂಬಳ್ಳಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಸೌಮ್ಯ ಸೇರಿದಂತೆ ಹಲವಾರು ಗಣ್ಯರು, ವಿವಿಧ ವಿಶೇಷ ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ಜನಪದೋತ್ಸವ 2026 ವಿಶೇಷ ಮಕ್ಕಳ ಪ್ರತಿಭೆ, ಆತ್ಮವಿಶ್ವಾಸ ಮತ್ತು ಸಾಂಸ್ಕöÈತಿಕ ಅಭಿವ್ಯಕ್ತಿಗೆ ಮಹತ್ವದ ವೇದಿಕೆಯಾಗಿದ್ದು, ಸಮಾಜದಲ್ಲಿ ವಿಶೇಷಚೇತನರ ಬಗ್ಗೆ ಇನ್ನಷ್ಟು ಜಾಗೃತಿ ಮತ್ತು ಗೌರವ ಮೂಡಿಸುವಲ್ಲಿ ಯಶಸ್ವಿಯಾಯಿತು.





