Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಗನಿಗಾಗಿ ಎಲ್ಲರ ರಾಜಕೀಯ ಜೀವನವನ್ನೂ ಮುಗಿಸಿದ ಸಿದ್ದರಾಮಯ್ಯ; ಮಾಜಿ ಸಂಸದ ಪ್ರತಾಪ ಸಿಂಹ


ಮೈಸೂರು: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದುಕೊಂಡಿದ್ದಾರೆ. ಈಗ ಮಗನಿಗಾಗಿ ಎಲ್ಲರ ರಾಜಕೀಯ ಜೀವನವನ್ನೂ ಮುಗಿಸಿ ಕುಟುಂಬ ರಾಜಕೀಯದ ಬಗ್ಗೆ ಟೀಕಿಸುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮೈಸೂರು ಭಾಗದಲ್ಲಿ ಮಗನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಇಲ್ಲಿನ ಕಾಂಗ್ರೆಸ್ ನಾಯಕರ ರಾಜಕೀಯ ಜೀವನವನ್ನೇ ಮುಗಿಸಿದ್ದಾರೆ ಎಂದು ದೂರಿದರು.
ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ಕರ್ನಾಟಕ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಜೀವನ ಮುಗಿಸಿದರು. ಅದೇ ಮಾದರಿಯನ್ನು ಸಿದ್ದರಾಮಯ್ಯವರು ಮೈಸೂರು ಭಾಗದಲ್ಲಿ ಅನುಸರಿಸಿದ್ದಾರೆ. ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಎಲ್ಲರನ್ನೂ ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು.
ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನದ ಅವಕಾಶ ತಪ್ಪಿಸಿದ್ದೇ ಸಿದ್ದರಾಮಯ್ಯ. ದಲಿತರ ಧ್ವನಿ ಆಗಿರುವ ಡಾ.ಹೆಚ್.ಸಿ.ಮಹದೇವಪ್ಪ ಅವರ ಸ್ನೇಹವನ್ನೇ ಮರೆತರು. ಮಗನ ಮೇಲೆ ಮಾತ್ರ ಕಿರೀಟ ಇರಬೇಕೆಂದು ಇತರ ನಾಯಕರ ರಾಜಕೀಯ ಬದುಕನ್ನು ಮುಗಿಸಿದ್ದಾರೆ. ಸದಾ ಜೊತೆಗಿರುತ್ತಿದ್ದ ಸ್ನೇಹಿತರಾದ ಮಹದೇವಪ್ಪ, ವೆಂಕಟೇಶ್ ಅವರ ಸ್ನೇಹಕ್ಕೂ ಬೆಲೆ ಕೊಡಲಿಲ್ಲ ಎಂದು ಟೀಕಿಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಸಿಕ್ಕಿಲ್ಲ. ಇದು, ಕಾಂಗ್ರೆಸ್ ಮಹಿಳಾ ವಿರೋಧಿ ಎಂಬುದನ್ನು ಸಾಬೀತು ಮಾಡಿದೆ. ಲಕ್ಷಿ÷್ಮÃ ಹೆಬ್ಬಾಳಕರ್, ಗಾಯತ್ರಿ ಶಾಂತೇಗೌಡ ಅವರಿಗೆ ಅವಕಾಶ ತಪ್ಪಿಸಿದವರು ಸಿದ್ದರಾಮಯ್ಯ. ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೇ ಅವರು. ಈಗ ರಾಜಕೀಯ ಕಲುಷಿತವಾಗಿದೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಯತೀAದ್ರ ಮೆರಿಟ್‌ನಿಂದ ಮಂತ್ರಿಯಾಗಿಲ್ಲ. ಅಪ್ಪನ ಕೋಟಾದಲ್ಲಿ ಆಗಿದ್ದಾರಷ್ಟೆ. ಮೆರಿಟ್ ಇಲ್ಲದ ಯತೀಂದ್ರ ಈ ಭಾಗದಲ್ಲಿ ನಾಯಕ ಆಗುವುದಿಲ್ಲ ಎಂಬ ಕಾರಣದಿಂದ, ದಲಿತರ ಧ್ವನಿಯಾದ ಮಹದೇವಪ್ಪ ಅವರನ್ನು ಪಕ್ಕಕ್ಕೆ ಸರಿಸಿದ್ದಾರೆ ಎಂದರು.
ಭಾರತ ಹಿಂದೂ ರಾಷ್ಟçವಾಗಬಾರದು ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಭಾರತವನ್ನು ಹಿಂದೂ ರಾಷ್ಟç ಮಾಡಲು ಯಾರೂ ಹೊರಟಿಲ್ಲ. ಇದು ಸ್ವಾಭಾವಿಕವಾಗಿಯೇ ಹಿಂದೂ ರಾಷ್ಟç. ಯತೀಂದ್ರ ಅವರೇ, ನಿಮಗೆ ಮಂತ್ರಿ ಸ್ಥಾನ ಸಿಕ್ಕಿದ್ದು ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಎಂಬುದನ್ನು ಮರೆಯಬೇಡಿ ಎಂದು ಟೀಕಿಸಿದರು.