
ಮೈಸೂರು; ವ್ಯಸನಕ್ಕೆ, ಖಿನ್ನತೆಗೆ ಒಳಗಾಗುವುದು ಸಾಧನೆಗೆ ದಾರಿಯಲ್ಲ. ನಿಮ್ಮ ವೈಯಕ್ತಿಕ ಸಾಧನೆ ಮತ್ತು ಯಶಸ್ಸು ಮುಖ್ಯವೇ ಹೊರತು ಯಾರು ದಾರಿ ತಪ್ಪಬಾರದು ಎಂದು ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲ ಮಧುಕರ್ ದೇಶಪಾಂಡೆ ಹೇಳಿದರು.
ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಮಹಾರಾಣಿ ಮಹಿಳಾ ಕಲಾ ಕಾಲೇಜನ ಮನೋವಿಜ್ಞಾನ ವಿಭಾಗ, ವಿದ್ಯಾರ್ಥಿ ಆಪ್ತ ಸಲಹಾ ಸಮಿತಿ, ಮಾದಕ ವಸ್ತು ವಿರೋಧಿ ಜಾಗೃತಿ ಸಮಿತಿ, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು (ಪೋಕ್ಕೊ ಕಾಯ್ದೆ, ಮಾದಕ ದ್ರವ್ಯ ದುರ್ಬಳಕೆ ತಡೆಗಟ್ಟುವುದು ಮತ್ತು ಂಓಖಿಊಖAಉಉIಓಉ) ಮಹಾರಾಣಿ ಮಹಿಳಾ ಕಲ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು,
ಸೋಲು ಸಹಜ, ಅದರಿಂದ ಕುಗ್ಗದೆ ಅದನ್ನು ಮೆಟ್ಟಿ ನಿಲ್ಲುವುದನ್ನು ಕಲಿಯಬೇಕು. ಕಾಲೇಜು ಹಂತದಲ್ಲಿ ಎಲ್ಲಾ ಚಟುವಟಿಕೆಗಳು, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅನುಭವ ಹೆಚ್ಚುತ್ತದೆ ಎಂದು ಹೇಳಿದರು.
ಮೊಬೈಲ್ ಮತ್ತು ಅಂತರ್ಜಾಲದ ಅತಿಯಾದ ಬಳಕೆಯಿಂದ ದೂರವಿರುವುದು ಮತ್ತು ನಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯ. ಮಾದಕ ವಸ್ತು ಅಥವಾ ಡಿಜಿಟಲ್ ವ್ಯಸನಕ್ಕೆ ಒಳಗಾದವರು ಹುಟ್ಟಿನಿಂದ ಕೆಟ್ಟವರಲ್ಲ. ಒತ್ತಡ, ಕಿನ್ನತೆ ಅಥವಾ ಸಂದರ್ಭಗಳ ಕಾರಣದಿಂದ ಅವರು ಆ ಹಾದಿಗೆ ಜಾರಿರಬಹುದು. ಅವರನ್ನು ಕೀಳಾಗಿ ಕಾಣದೆ, ಅವರೊಂದಿಗೆ ಮಾತನಾಡಿ, ಕೌನ್ಸಿಲಿಂಗ್ ಮತ್ತು ವೈದ್ಯಕೀಯ ನೆರವಿನ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು. ಕಾನೂನಿನಲ್ಲೂ ಇಂತಹ ವ್ಯಸನಿಗಳಿಗೆ ಶಿಕ್ಷೆಗಿಂತ ಹೆಚ್ಚಾಗಿ ಪುನರ್ವಸತಿ ಮತ್ತು ಚಿಕತ್ಸೆಗೆ ಅವಕಾಶವಿದೆ ಎಂದು ಹೇಳಿದರು.
ಫಾಸ್ಟ್ ಟ್ರಾ÷್ಯಕ್ ವಿಶೇಷ ನ್ಯಾಯಾಲಯ -1 ಜಿಲ್ಲಾ ನ್ಯಾಯಾಧೀಶರಾದ ಆನಂದ್ ಪಿ ಹೊಗಡೆ ಮಾತನಾಡಿ, ಮೈಸೂರು ನ್ಯಾಯಾಲಯದಲ್ಲಿ ಪ್ರಸ್ತುತ ಬರೋಬ್ಬರಿ 600 ಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ವಿಚಾರಣೆಗಾಗಿ ಬಾಕಿ ಉಳಿದಿದ್ದು, ಪೋಕ್ಸೊ ಕಾಯ್ದೆಯಡಿ ಬರುವ ಪ್ರಕರಣಗಳನ್ನು ಮುಖ್ಯವಾಗಿ ಮೂರು ವಿಭಾಗಗಳಾಗಿ ವರ್ಗೀಕರಿಸಬಹುದು ಬಾಲ್ಯವಿವಾಹಗಳು, ಲೈಂಗಿಕ ಒಡನಾಟ, ಅಪರಾಧ ಪ್ರಕರಣಗಳು. ಕೆಲವು ಪ್ರಕರಣಗಳಲ್ಲಿ ಅತ್ಯಂತ ಆಘಾತಕಾರಿ ಸಂಗತಿಗಳೆAದರೆ, ಸ್ವತಃ ತಂದೆಯೇ ತನ್ನ ಸ್ವಂತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಮಗು ಜನ್ಮ ಪಡೆದಿರುವ ಅಮಾನವೀಯ ಘಟನೆಗಳು ವರದಿಯಾಗಿವೆ. ಇದು ನಮ್ಮ ಸಂಸ್ಕöÈತಿ ಮತ್ತು ಕಾನೂನಿನ ಬಗ್ಗೆ ಇರುವ ಗೌರವ ಎಲ್ಲಿಗೆ ತಲುಪಿದೆ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದರು.
ಅAಕಿಅAಶಗಳು ಮತ್ತು ನ್ಯಾಯಾಲಯದ ಅನುಭವದ ಪ್ರಕಾರ,ವಿಕಲಚೇತನ ಮಕ್ಕಳು, ಸಾಮಾಜಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಮಕ್ಕಳು, ತಾಯಂದಿರು ಕೆಲಸಕ್ಕೆ ಹೋದಾಗ ಹಿರಿಯರ ಸೂಕ್ತ ಮೇಲ್ವಿಚಾರಣೆ ಇಲ್ಲದ ಮಕ್ಕಳು, ಕುಟುಂಬದಲ್ಲಿ ನಿತ್ಯ ಕಲಹಗಳು ನಡೆದು, ಮನೆಯ ವಾತಾವರಣ ಹದಗೆಟ್ಟಿರುವ ಕುಟುಂಬಗಳ ಮಕ್ಕಳು ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಹೆಚ್ಚು ಒಳಗಾಗುವ ಸಾಧ್ಯತೆ ಇರುತ್ತದೆ ಎಂದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ ಎಸ್ ಅನಿತಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನಾಗರಾಜು ಸಿದ್ದಪ್ಪ ಅಂಕಸದೊಡ್ಡಿ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಸಂತೋಷ್ ನಾಗರಾಳೆ, ಮೈಸೂರು ವಕೀಲ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್, ಪ್ರಾದೇಶಿಕ ಫೆಲಿಸಿಟೇಟರ್, ಹಾರ್ಟ್ಫುಲ್‌ನೆಸ್ ಸಂಸ್ಥೆಯ ಕೆ ಮಧುಸೂದನ್ ಮಾದಕ ವಸ್ತು ವಿರೋಧ ಜಾಗೃತ ಸಮಿತಿಯ ಪ್ರೊ. ಸರಿತಾ ಕೆ, ಮನೋವಿಭಾಗದ ಮುಖ್ಯಸ್ಥರು ಮತ್ತು ರಾಗಿಂಗ್ ವಿರೋಧಿ ಸಮಿತಿಯ ಡಾ. ವಾಣಿ ಆರ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.