
ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಇತಿಹಾಸದ ಕಾಲಗರ್ಭದಲ್ಲಿ ಮುಚ್ಚಿ ಹೋಗಿರುವ ಕೋಟೆ ಕಂದಕಗಳ ಬಗ್ಗೆ ಪರಿಶೀಲನೆ ನಡೆಸುವಂತೆ ತಹಸೀಲ್ದಾರ್ ನಿಸರ್ಗ ಪ್ರಿಯ ಸೂಚಿಸಿದರು.
ಪಟ್ಟಣದ ಚನ್ನಕೇಶವ ದೇವಾಲಯದ ಬಳಿ ಪುರಾತತ್ವ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭ ಭೇಟಿ ನೀಡಿ ಮಾತನಾಡಿದರು
ದೂರುದಾರರು ಕಂದಕಗಳನ್ನು ಮುಚ್ಚಿ ಜಮೀನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಇವುಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಸರ್ವೇ ಇಲಾಖೆ ಎಡಿಎಲ್ ಆರ್ ಮುನಿಯಪ್ಪ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೂರುದಾರ ನಂಜುಂಡಪ್ಪ ಕೆಲವರು ಕಂದಕದ ಸುತ್ತಲೂ ಗಣಿಗಾರಿಕೆ ನಡೆಸಿ ಅವುಗಳನ್ನು ಮುಚ್ಚಿ ತಮ್ಮ ಆಸ್ತಿಯಂತೆ ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ ಕಂದಕಗಳು ಸರ್ಕಾರಿ ಸೊತ್ತಾಗಿದ್ದು ಇವುಗಳನ್ನು ಉಳಿಸಬೇಕಾಗಿದೆ ದಾಖಲೆಯಲ್ಲೂ ಕೂಡ ಕಂದಕ ಇರುವುದಕ್ಕೆ ಸರ್ವೆ ನಕ್ಷೆ ಇದೆ. ಇದನ್ನು ಸರ್ವೇ ಇಲಾಖೆ ಕೂಡ ಒಪ್ಪಿಕೊಂಡಿದ್ದಾರೆ ಚೆನ್ನಕೇಶವ ದೇವಾಲಯದ ಸುತ್ತಲೂ 300 ಮೀಟರ್ ಅಂತವನ್ನು ಗುರುತಿಸಬೇಕು ಮತ್ತು ಕಂದಕ ಮುಚ್ಚಿಕೊಂಡಿರುವ ವಿರುದ್ದ ಸೂಕ್ತ ಕಾನೂನು ಕ್ರಮ ಆಗಬೇಕು ಈ ಹಿಂದೆ ಎಪಿಎಂಸಿಗೆ ಮಂಜೂರಾಗಿ ಕೈಬಿಟ್ಟ ಭೂಮಿಯನ್ನು ಅದಲು ಬದಲು ಮಾಡಿ ಖಾತೆ ಮಾಡಿಸಿಕೊಳ್ಳಲಾಗಿದೆ ನಕಲಿ ಎಮ್ ಆರ್ ಸೃಷ್ಟಿಸಲಾಗಿದೆ ಈ ಬಗ್ಗೆ ತಹಸಿಲ್ದಾರ್ ದಾಖಲೆ ನೀಡುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಅಕ್ರಮ ಖಾತೆ ಮಾಡಿಸಿ ಕೊಂಡಿರುವ ಬಗ್ಗೆ ಉಪ ವಿಭಾಗ ಅಧಿಕಾರಿಗಳಿಗೆ ದೂರು ನೀಡಿ ಕ್ರಮವಹಿಸಬಹುದು. ಕಂದಕಗಳ ಬಗ್ಗೆ ಸರ್ವೆ ಇಲಾಖೆಯಿಂದ ಸರ್ವೇ ಮಾಡಿಸಲಾಗುವುದು. ಹಿಸ್ಸಾ ಅದಲು ಬದಲಾಗಿರುವ ಸಾಧ್ಯತೆ ಇದೆ ಅಂದ್ರೆ ಮಾತ್ರಕ್ಕೆ ಆ ಭೂಮಿ ಅವರದಲ್ಲ ಎಂಬುದು ವಾದ ಸರಿಯಲ್ಲ ಸರ್ಕಾರಿ ಭೂಮಿ ಇದ್ದರೆ ಅದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಮಾತನಾಡಿ ದೇವಾಲಯದ ಸುತ್ತಲೂ 300 ಮೀಟರ್ ಅಂತರದಲ್ಲಿ ಯಾವುದೇ ಚಟುವಟಿಕೆ ಮಾಡಬಾರದು ಎಂಬುದು ಸುಳ್ಳು. ಇದರ ಬದಲಾಗಿ ಮನೆ ಕಟ್ಟುವವರು ನಮ್ಮ ಬಳಿ ನಿರಪೇಕ್ಷಣ ಪ್ರಮಾಣ ಪತ್ರ ಪಡೆದುಕೊಳ್ಳತಕ್ಕದ್ದು ಎಂಬ ಶರತ್ತು ಮಾತ್ರ ಇದೆ ಈ ಬಗ್ಗೆ ಜನರಲ್ಲಿ ಗೊಂದಲ ಬೇಡ ದೇವಾಲಯದ ಅಭಿವೃದ್ಧಿ ಮತ್ತು ಅದರ ಪುನರ್ ನಿರ್ಮಾಣ ಕಾರ್ಯಕ್ಕೆ ಇಲಾಖೆ ಬದ್ಧವಾಗಿದೆ ಆದರೆ ಕಾಮಗಾರಿ ಆರಂಭಿಸಲು ಬಂದರೆ ಜನರು ತೊಂದರೆ ನೀಡಿ ಗುತ್ತಿಗೆದಾರರಿಗೆ ವಾಪಸ್ ಕಳಿಸುತ್ತಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ದೇವಾಲಯವನ್ನು ಪುರಾತತ್ವ ಇಲಾಖೆಯಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಪಿ.ಜಿ.ರವಿ ಮಾತನಾಡಿ ಪುರಾತತ್ವ ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ನಮಗೆ ಇಷ್ಟವಿಲ್ಲ ಬದಲಾಗಿ ದೇವಾಲಯವನ್ನು ಮುಜರಾಯಿಗೆ ಇಲಾಖೆಗೆ ಸೇರಿಸಲು ಈಗಾಗಲೇ ಸರ್ಕಾರಕ್ಕೆ ಮನವಿ ನೀಡಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೂರುದಾರರಾದ ಡಿ.ದೇವಣ್ಣ, ರವಿಕುಮಾರ್ ಎನ್, ಚಂದ್ರೇಗೌಡ, ಪುರಾತತ್ವ ಇಲಾಖೆಯ ಸತೀಶ್ ಜೆ, ಸುನಿಲ್, ಸರ್ವೆ ಎಡಿಎಲ್ಆರ್ ಮುನಿಯಪ್ಪ, ಸರ್ವೆಯರ್ ಶಿವಪ್ಪಚಾರಿ, ಆರ್ ಐ ಪಾಂಡುರಂಗ, ವಿ.ಎ. ಪಾಂಡು ಪರದೇಶಿ. ಪುರಸಭೆ ಮಾಜಿ ಸದಸ್ಯ ರವಿ, ಅಧಿಕಾರಿಗಳಾದ ರಾಮಕೃಷ್ಣ, ಚಂದನ್, ಸೇರಿದಂತೆ ಮತ್ತಿತರರು ಹಾಜರಿದ್ದರು.