Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪಾದಚಾರಿ ಮಾರ್ಗ ತೆರವಿಗೆ ಆದೇಶಿದ್ದು ಯಾರು ಎಂಬುದನ್ನು ನಗರಪಾಲಿಕೆಯ ಅಧಿಕಾರಿಗಳು ಬಹಿರಂಗಪಡಿಸಲಿ; ಎಂ. ಲಕ್ಷ್ಮಣ್

ಮೈಸೂರು: ನಗರದಲ್ಲಿರುವ ಪಾದಚಾರಿ ಮಾರ್ಗ ತೆರವುಗೊಳಿಸುವಂತೆ ನಗರಪಾಲಿಕೆಗೆ ಆದೇಶಿಸಿದ್ದು ಯಾರು ಎಂಬುದನ್ನು ಸಂಬAಧಿಸಿದ ಅಧಿಕಾರಿಗಳು ಕೂಡಲೇ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲP್ಪ್ಷö್ಮಣ್ ಒತ್ತಾಯಿಸಿದರು.
ಗುರುವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಂ ಬೀದಿಬದಿ ವ್ಯಾಪಾರಿಗಳ ಸಭೆ ನಡೆಸಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಮಹಾನಗರಪಾಲಿಕೆಯವರು ರಾಜ್ಯ ಸರ್ಕಾರ, ಸುಪ್ರಿಂಕೋರ್ಟ್ ಆದೇಶವಿಲ್ಲದಿದ್ದರೂ ಪಾದಚಾರಿ ಮಾರ್ಗ ತೆರವು ಕಾರ್ಯ ಮಾಡುತ್ತಿದ್ದಾರೆ. ಸುಪ್ರಿಂಕೋರ್ಟ್ ಯಾವುದೋ ಒಂದು ಪಾದಚಾರಿ ಅಪಘಾತ ಪ್ರಕರಣದಲ್ಲಿ ಆದೇಶ ಮಾಡಿದೆ. ಪಾದಚಾರಿ ನಡೆದು ಹೋಗುವಾಗ ಮಾರ್ಗ ಸಾರ್ವಜನಿಕರ ಸ್ವತ್ತು ಎಂದು ಆದೇಶಿಸಿದೆ. ಇದನ್ನೇ ಆದೇಶವಾಗಿರಿಸಿಕೊಂಡು ಪಾದಚಾರಿ ಒತ್ತುವರಿ ತೆರವು ಮಾಡಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬೀದಿ ಬದಿಗಳಲ್ಲಿ ಹೂ, ಹಣ್ಣು, ಸೊಪುö್ಪ, ತರಕಾರಿ ಮಾರುವವರನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ. ಅವರದು ಬದುಕು ಅಲ್ಲವೇ, ಎಲ್ಲಾ ಪಾದಚಾರಿ ಮಾರ್ಗ ಫ್ರೀ ಫರ್ ವಾಕ್ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪಾದಚಾರಿ ಮಾರ್ಗದಲ್ಲಿರುವ ಹಾಲಿನ ಬೂತ್, ಸಫಾಯಿ ಕರ್ಮಚಾರಿ ಅಂಗಡಿ, ಟ್ರಾನ್ಸ್ ಫಾರ್ಮ್, ಹೋಟೆಲ್ ಚೇರ್ ತೆರವುಗೊಳಿಸಿ ಅದನ್ನು ಹೊರತುಪಡಿಸಿ ಗುಬ್ಬಿಗಳ ಮೇಲೆ ಬ್ರಹ್ಮಾಸ್ತç ಎಷ್ಟು ಸರಿ?. ಫುಟ್ ಬಾತ್ ಸಾರ್ವಜನಿಕ ಆಸ್ತಿಯಾದರೆ ಅದನ್ನು ಬಾಡಿಗೆ ಕೊಟ್ಟಿದ್ದೇವೆಂದು ಸಾವಿರ ರೂ. ಬಾಡಿಗೆಗೆ ಕೊಡುವುದು ಹೇಗೆ? ಪರ್ಯಾಯವಾಗಿ ನೀವು ಜಾಗ ಕೊಟ್ಟ ಮೇಲೆ ಒತ್ತುವರಿ ತೆರವು ಖಾಲಿ ಮಾಡಿಸಬೇಕು. ಅದರಲ್ಲೂ ನಗರದಲ್ಲಿ ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ಒಲಂಪಿಯಾ ಟಾಕೀಸ್ ನಲ್ಲಿ ತೆಗೆಸುವುದು ಸರಿಯಲ್ಲ. ಇದೆಲ್ಲವನ್ನೂ ಬೀದಿ ಬದಿ ವ್ಯಾಪಾರಿಗಳೇ ಹೇಳುತ್ತಿದ್ದಾರೆ. 350 ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಬಟ್ಟೆ ಸೇರಿ ಇನ್ನಿತರೆ ವ್ಯಾಪಾರ ಮಾಡುತ್ತಿದ್ದು, ಪಾದಚಾರಿಗಳಿಗೆ ಅವರಿಂದ ತೊಂದರೆಯಿಲ್ಲ. ಏಕೆಂದರೆ ಅವರೆ ಇವರಿಗೆಲ್ಲಾ ಗ್ರಾಹಕರೆಂದರು.
ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಸರ್ಕಾರ ಆದೇಶ ಮಾಡಿದ್ದರೆ ತೋರಿಸಲಿ. ತೆರವು ಮಾಡುವುದು ತಪುö್ಪ ಎನ್ನಲ್ಲಾ ಹದಿನೈದು ಅಡಿ ಜಾಗಕ್ಕೆ ಮೂರಡಿ ಜಾಗವನ್ನು ವ್ಯಾಪಾರಕ್ಕೆ ಕೊಡುವ ನಿಟ್ಟಿನಲ್ಲಿ ಹೈಕೋರ್ಟ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದನ್ನು ನಗರಪಾಲಿಕೆ ಜಾರಿಗೊಳಿಸಲಿ. ನಗರದಲ್ಲಿ 1450ಕಿ.ಮೀ. ರಸ್ತೆಯಿದೆ. ಎಲ್ಲವನ್ನೂ ತೆರವು ಮಾಡುವ ಕೆಲಸ ಪಾಲಿಕೆ ಮಾಡುತ್ತದೆಯೇ? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಬಡವರ ಪರ ಸರ್ಕಾರ ಆಗಿದೆ. ಹೀಗಾಗಿ ಬಡವರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು ಎಂದರು.
ನಗರಪಾಲಿಕೆ ಮಾದ್ಯಮದ ಗಮನ ಸೆಳೆಯುವುದಕ್ಕೋಸ್ಕರ ಮಾಡುತ್ತಿದ್ದಾರೋ ಎನೋ ಗೊತ್ತಿಲ್ಲ. ಸದ್ಯ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲ. ಹೀಗಾಗಿ ಆಡಳಿತಾಧಿಕಾರಿ ಹಾಗೂ ಪಾಲಿಕೆ ಆಯುಕ್ತರೆ ತೆರವುಗೊಳಿಸುವ ತೀರ್ಮಾನ ಕೈಗೊಳ್ಳಬಹುದೇ?, ಮೊದಲು ಬಡವರಿಗೆ ಶಾಶ್ವತ ನೆಲೆ ಕಲ್ಪಿಸಿ ಅನಂತರ ತೆರವುಗೊಳಿಸಿ, ರಾಜಕಾರಣಿಗಳು ಸೇರಿ ಅನೇಕರು ಕಾರಿನ ಶೆಡ್ ಮಾಡಿಕೊಂಡಿದ್ದಾರೆ. ಬೆಟ್ಟದ ಸುತ್ತಲೂ ಮಠ, ಮಾನ್ಯಗಳ ಒತ್ತುವರಿ ತೆರವುಗೊಳಿಸಿ ಎಂದು ಹೇಳಿದರು.
ಈ ವೇಳೆ ರಾಜ್ಯ ಕಾಂಗ್ರೆಸ್ ನ ರಸ್ತೆ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಬಸವರಾಜು, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಕೆ.ಮಹೇಶ್, ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಜ್ಮಲ್ ಪಾಷ, ನಗರ ಕಾರ್ಯದರ್ಶಿ ಜುನಾಯಿದ್, ನಗರ ಉಪಾಧ್ಯಕ್ಷ ಹಲೀಂ ಇನ್ನಿತರರು ಇದ್ದರು.