Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅನಿಶ್ಚಿತತೆಯ ಕಾಲದಲ್ಲಿ ಆಹಾರ, ಇಂಧನ ಮತ್ತು ಜೀವನೋಪಾಯದ ಭದ್ರತೆಗೆ ತೆಂಗು ಪ್ರಮುಖ ಆಧಾರ; ಡಾ. ಹಂಚಿಮನಿ


ಮೈಸೂರು; ತೆಂಗು ವಿಶ್ವದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದ್ದು, ಇದು ಕೇವಲ ರೈತರಿಗೆ ಆದಾಯ ನೀಡುವ ಬೆಳೆಯಷ್ಟೇಅಲ್ಲದೆ, ಮಾನವನ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವ ಪ್ರಮುಖ ಆಹಾರದ ಮೂಲವಾಗಿದೆ ಎಂದು ಮೈಸೂರಿನ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹಂಚಿಮನಿ ಹೇಳಿದರು.
ವಿಶ್ವತೆಂಗು ದಿನ–೨೦೨೬ರ ಅಂಗವಾಗಿ “ಅoಛಿoಟಿuಣ iಟಿ ಖಿimes oಜಿ Uಟಿಛಿeಡಿಣಚಿiಟಿಣಥಿ: Seಛಿuಡಿiಟಿg ಈooಜ, ಇಟಿeಡಿgಥಿ ಚಿಟಿಜ ಐiveಟihooಜs” ಎಂಬ ಆಶಯದೊಂದಿಗೆ ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರ, ಸುತ್ತೂರು, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು ಹಾಗೂ ಶೋಭಿತ ನಂಜೇಗೌಡ ಫಾರ್ಮ್, ಕೆನ್ನಾಳು ಇವರ ಸಹಯೋಗದಲ್ಲಿ ಬುಧವಾರ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರದಲ್ಲಿ ಏರ್ಪಡಿಸಿದ್ದ “ತೆಂಗು ಆಧಾರಿತ ಸಮಗ್ರ ಕೃಷಿ: ಅಂತರಬೆಳೆಗಳಿAದ ಮೌಲ್ಯವರ್ಧನೆಯವರೆಗೆ”
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಹಾಗೂ ಮೈಸೂರು ಜಿಲ್ಲೆಯಲ್ಲಿ ಪ್ರಮುಖ ಆರ್ಥಿಕ ಬೆಳೆಯಾಗಿದೆೆ.ತೆಂಗು ತೆಂಗಿನ ವಿವಿಧ ಉತ್ಪನ್ನಗಳು ಆಹಾರ, ಇಂಧನ ಹಾಗೂ ಜೀವನೋಪಾಯದ ಭದ್ರತೆಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.
ತೆಂಗಿನಲ್ಲಿ ವೈಜ್ಞಾನಿಕ ನಿರ್ವಹಣೆ ಹಾಗೂ ಮೌಲ್ಯವರ್ಧನೆಯ ಮೂಲಕ ರೈತರು ನಿರಂತರ ಆದಾಯ ಗಳಿಸಬೇಕು ಎಂದು ತಿಳಿಸಿದರು. ಪ್ರಸ್ತುತ ಹವಾಮಾನ ಬದಲಾವಣೆ, ಮಳೆಯ ಅನಿಶ್ಚಿತತೆ ಮತ್ತು ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ತೆಂಗಿನ ತೋಟಗಳ ಉತ್ಪಾದಕತೆ ಹಾಗೂ ರೈತರ ಆದಾಯವನ್ನು ಸ್ಥಿರಗೊಳಿಸುವುದು ಅತ್ಯಂತಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತೆಂಗಿನ ತೋಟಗಳಲ್ಲಿ ಅಂತರಬೆಳೆ ಪದ್ಧತಿ ಮತ್ತು ಮೌಲ್ಯವರ್ಧನೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ವಿಜ್ಞಾನಿ ಡಾ. ಜ್ಞಾನೇಶ್ ಬಿ. ಎನ್., . ರೈತರು ತಮ್ಮ ತೆಂಗಿನ ತೋಟದಲ್ಲಿರುವ ನೀರಿನ ಲಭ್ಯತೆಯನ್ನು ಮೊದಲು ಗಮನಿಸಬೇಕು, ವಿಶೇಷವಾಗಿ ತೆಂಗಿನ ತೋಟದ ಆರಂಭಿಕ ಹಂತದಲ್ಲಿ ಉತ್ತಮ ನಿರ್ವಹಣೆ ಅತ್ಯಂತ ಮುಖ್ಯವಾಗಿದ್ದು, ಸಮರ್ಪಕ ನೀರಾವರಿ, ಪೋಷಕಾಂಶ ನಿರ್ವಹಣೆ, ಕಳೆ ನಿಯಂತ್ರಣ ಮತ್ತು ಕೀಟ–ರೋಗನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಆರಂಭಿಕ ವರ್ಷಗಳಲ್ಲಿ ಉತ್ತಮ ನಿರ್ವಹಣೆ ಮಾಡಿದರೆ, ಮುಂದಿನ ಹಂತದಲ್ಲಿ ತೆಂಗಿನ ಗಿಡಗಳು ಉತ್ತಮ ಬೆಳವಣಿಗೆ ಹೊಂದಿ, ಉತ್ತಮ ಇಳುವರಿ ಹಾಗೂ ನಿರಂತರ ಆದಾಯ ನೀಡುತ್ತವೆ ಎಂದು ಹೇಳಿದರು.
ತೆಂಗಿನ ತೋಟಗಳಲ್ಲಿ ಅಂತರಬೆಳೆ ಪದ್ಧತಿ ರೈತರ ಆದಾಯ ಹೆಚ್ಚಿಸಲು ಉತ್ತಮ ಅವಕಾಶವಾಗಿದ್ದು, ಏಲಕ್ಕಿ, ಬೆಣ್ಣೆಹಣ್ಣು (ಅವಕಾಡೊ) ಮತ್ತು ಕಾಳುಮೆಣಸು ಮುಂತಾದ ಬೆಳೆಗಳು ಸೂಕ್ತ ಪರಿಸ್ಥಿತಿಯಲ್ಲಿ ಉತ್ತಮ ಆದಾಯ ನೀಡಬಲ್ಲವು ಎಂದು ತಿಳಿಸಿದರು.
ತೆಂಗಿನ ತೋಟಗಳಲ್ಲಿ ಮಣ್ಣಿನಆರೋಗ್ಯವನ್ನು ಕಾಪಾಡಲು ಸಾವಯವಗೊಬ್ಬರ, ಜೈವಿಕ ಗೊಬ್ಬರಗಳು ಮತ್ತುಜೈವಿಕ ಕೀಟನಾಶಕಗಳ ಬಳಕೆಗೆ ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ಹಾಗೂ ಸಮಗ್ರ ಬೆಳೆ ನಿರ್ವಹಣಾ ಪದ್ಧತಿಗಳನ್ನು ಅನುಸರಿಸುವ ಮೂಲಕ ದೀರ್ಘಕಾಲಿಕವಾಗಿ ಉತ್ತಮ ಉತ್ಪಾದನೆ ಪಡೆಯಬಹುದುಎಂದು ತಿಳಿಸಿದರು. ನಿಖರ ಕೃಷಿ ಬೇಸಾಯವನ್ನು ಅಳವಡಿಸಿಕೊಂಡರೆ ಉತ್ತಮ ಎಂದು ಕಿವಿಮಾತು ಹೇಳಿದರು.
ಡಾ. ಸಿದ್ದಪ್ಪ, ನಾಗೇಶ್ ಬಾಬು, ಡಾ. ರಾಮೇಗೌಡ, ಚಂದ್ರಶೇಖರ್, ನಂಜೇಗೌಡ ಅವರು ತೆಂಗಿನ ಸಸಿಗಳ ಲಭ್ಯತೆ ಹಾಗೂ ನರ್ಸರಿ ನಿರ್ವಹಣಾ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ರೈತ–ವಿಜ್ಞಾನಿ ಸಂವಾದದಲ್ಲಿ ಡಾ. ರವೀಂದ್ರ, ಡಾ. ವಿನಯ್ ಜಿ. ಎಂ., ಡಾ. ಪ್ರಸಾದ್ ವೈ. ಪಿ.; ಡಾ. ದೀಪಕ್, ದಿವ್ಯಾಎಚ್. ವಿ. ಹಾಗೂ ಶಾವ್ಮರಾಜ್ ಸ್ಭೆರಿದಂತೆ ಕೆವಿಕೆಯ ವಿಜ್ಞಾನಿಗಳು ಭಾಗವಹಿಸಿ ರೈತರ ವಿವಿಧ ಪ್ರಶ್ನೆಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರು, ಕೆವಿಕೆ ಸಿಬ್ಬಂದಿ ಹಾಗೂ ತೆಂಗು ಬೆಳೆಗಾರರು ಸೇರಿದಂತೆ ೧೨೦ಕ್ಕೂ ಹೆಚ್ಚು ರೈತರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.