
ರೈತರ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಜೊತೆ ನಿಲ್ಲಬೇಕು ಎಂದು ಬ್ಲೂ ಇಂಡಿಯಾ ಪಕ್ಷದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ
ಪಿರಿಯಾಪಟ್ಟಣ : ಅನಾವಷ್ಟಿಯ ಪರಿಣಾಮವಾಗಿ ಬಿತ್ತಿದ ಬೆಳೆ ಕೈ ಕೊಟ್ಟರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಿರಿಯಾಪಟ್ಟಣವನ್ನು ಬರ ಪೀಡಿತ ತಾಲ್ಲೂಕಿನ ಪಟ್ಟಿಯಿಂದ ಹೊರ ಹಾಕಲಾಗಿದೆ ಎಂದು ಬ್ಲೂ ಇಂಡಿಯಾ ಪಾರ್ಟಿ ರಾಜ್ಯಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಮೌರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಮೈಸೂರಿನ ಎಂಟು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ಪಿರಿಯಾಪಟ್ಟಣವನ್ನು ಹೊರತು ಪಡೆಸಿರುವುದು ಮಲತಾಯಿ ಧೋರಣೆಯಾಗಿದೆ ತಾಲೂಕಿನಲ್ಲಿ ಬರ ಬಂದು ರೈತರು ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಜೊತೆ ನಿಲ್ಲಬೇಕು ಆದರೆ ಪಿರಿಯಾಪಟ್ಟಣ ತಾಲೋಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆಮಾಡದೇ ಮೋಸ ಮಾಡಿದೆ ಇದನ್ನು ಮರು ಪರಿಶೀಲಿಸಿ ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ ತಾಲೂಕಿನಲ್ಲಿ ಬರದ ಪರಿಸ್ಥಿತಿ ಇದೆ ಆದರೆ ಸರ್ಕಾರ ಪಿರಿಯಾಪಟ್ಟಣ ತಾಲೋಕನ್ನು ಬರಪೀಡಿತ ಎಂದು ಘೋಷಣೆ ಮಾಡದೇ ತಾಲೂಕಿನ ರೈತರಿಗೆ ಮೋಸ ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಕೇಂದ್ರ ಸರ್ಕಾರದಿಂದ ರಾಗಿಯ ಹಣವನ್ನು ಬಿಡುಗಡೆಗೊಳಿಸಿದ್ದರು ರಾಜ್ಯ ಸರ್ಕಾರ ಈವರೆಗೂ ಹಣ ಬಿಡುಗಡೆ ಮಾಡದಿರುವುದು ರೈತರಿಗೆ ಸಂಕಷ್ಟ ತಂದಿದೆ. ಕೆರೆ ತುಂಬಿಸುವ ಅಭಿವೃದ್ಧಿ ಕಾರ್ಯ ಮುಗಿಸಿದ್ದರು ಕೂಡ ಕೆರೆಗಳು ಈವರೆಗೂ ತುಂಬಿಲ್ಲ ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿವೇಶನ ರಹಿತರಿಗೆ ನೀಡಬೇಕಾದ ನಿವೇಶಗಳು ಈವರೆಗೂ ಹಂಚಿಕೆಯಾಗಿಲ್ಲ, ಇದು ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿದೆ ಎಂಬ ಆಪಾದನೆ ಸಾರ್ವಜನಿಕರಿಂದ ಬಂದಿದೆ ಇದು ಅಕ್ಷಮ್ಯ ಅಪರಾಧ, ಪಿರಿಯಾಪಟ್ಟಣ ತಾಲ್ಲೂಕನ್ನು ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ರೈತರ ಸಮಸ್ಯೆ ಅರಿತು ಮರು ಸಮೀಕ್ಷೆ ನಡೆಸಿ ಪಿರಿಯಾಪಟ್ಟಣ ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಇಲ್ಲವಾದಲ್ಲಿ ತಾಲ್ಲೂಕಿನಲ್ಲಿ ಮುಂದಿನ ದಿವಸ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಕೋಡು ಬಸವರಾಜು, ಶೇಖರ್, ಶಿವರಾಜು, ಸ್ವಾಮೇಗೌಡ ಸೇರಿದಂತೆ ಇತರರು ಇದ್ದರು