Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಋಗ್ವೇದ ಬ್ರಾಹ್ಮಣ ಮತ್ತು ಆರಣ್ಯಕ ಎಂಬ ವಿಷಯದಲ್ಲಿ ಪಿಹೆಚ್.ಡಿ ಪಡೆದ ಎ. ಚಿನ್ಮಯ ದತ್ತ ಘನಪಾಠಿರಿಗೆ ಸನ್ಮಾನ


ಮೈಸೂರು; ಮೈಸೂರಿನ ಪ್ರಮುಖ ಋಗ್ವೇದ ಅಧ್ಯಾಪಕರಾದ ಎ. ಚಿನ್ಮಯ ದತ್ತ ಘನಪಾಠಿ ಅವರು, ಕೇವಲ ೩೨ ವರ್ಷ ವಯಸ್ಸಿನಲ್ಲಿ ಕರ್ನಾಟಕ ಸಂಸ್ಕöÈತ ವಿಶ್ವವಿದ್ಯಾಲಯದಲ್ಲಿ ಋಗ್ವೇದ ಬ್ರಾಹ್ಮಣ ಮತ್ತು ಆರಣ್ಯಕ ಎಂಬ ಅತ್ಯಂತ ವಿಶೇಷ ಹಾಗೂ ಗಂಭೀರ ವಿಷಯದಲ್ಲಿ ಡಾ. ವಂಶೀ ಕೃಷ್ಣ ಘನಪಾಠಿ ಜೀ ಅವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ಅವರಿಗೆ ಇತ್ತೀಚಿಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸನ್ಮಾನಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದ ವಿದ್ವಾಂಸರಲ್ಲಿ ಇವರೂ ಒಬ್ಬರು. ಇವರ ಸಾಧನೆಗೆ ಅಪೂರ್ವ ಸ್ನೇಹ ಬಳಗದ ವತಿಯಿಂದ ಗುರುಕುಲ ಗೌರಿಶಂಕರ ನಗರದಲ್ಲಿರುವ ವೇದ ಪಾಠ ಶಾಲೆಯಲ್ಲಿ ವಿದ್ವಾನ್ ಚಿನ್ಮಯ ದತ್ತ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು
ಇದೇ ಸಂದರ್ಭದಲ್ಲಿ ಅಪೂರ್ವ ಸುರೇಶ್, ವಿದ್ವಾನ್ ಪ್ರಸನ್ನ ಪ್ರಕಾಶ್, ಹನುಮತ್ ಪ್ರಸನ್ನ ಶರ್ಮ,ಕೋಹೀರ್,ಚೈತನ್ಯ ಕುಮಾರ್, ಶ್ರೌತಿ,
ಮಾಜಿನಗರ ಪಾಲಿಕಾ ಸದಸ್ಯ ಜಗದೀಶ್,ವಿಕ್ರಂ ಅಯ್ಯಂಗಾರ್, ದೂರ ರಾಜಣ್ಣ, ಜತ್ತಿಪ್ರಸಾದ್, ಸುಚಿಂದ್ರ ತೀರ್ಥ, ಹಾಗೂ ಶಾಲೆಯ ಸಂಸ್ಕöÈತ ವಿದ್ಯಾರ್ಥಿಗಳು ಹಾಜರಿದ್ದರು.