
ಚಾಮರಾಜನಗರ; ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಪಾರಾಗಲು ಸಂಗೀತ ಕೇಳುವ ಹಾಗೂ ಹಾಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾಕ್ಟರ್ ಆರ್ ಎಸ್ ಅಶ್ವಿನಿ ತಿಳಿಸಿದರು ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ಸಾಂಸ್ಕೃತಿಕ ವಿಭಾಗ ಸೋಮವಾರ ಮಧ್ಯಾಹ್ನ ಏರ್ಪಡಿಸಿದ
ಪ್ರತಿಭಾನ್ವೇಷಣೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾಭ್ಯಾಸದ ಜೊತೆಗೆ ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಉದ್ದೇಶ ಪವಾಡ ಪುರುಷರ ಜನಿಸಿದ ಜಾನಪದ ಗಳ ತವರೂರು ಚಾಮರಾಜನಗರ ದಿನನಿತ್ಯವೂ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡು ಬರುತ್ತಿದ್ದಾರೆ ಆದ್ದರಿಂದ ಕಲೆಯನ್ನು ಗೌರಿಸಿ ಪ್ರೀತಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಇಂದಿನ ಕಾಲದಲ್ಲಿ ಜಮೀನಿನಲ್ಲಿ ನಾಟಿ ಮಾಡಬೇಕಾದರೆ ಜನಪದ ಗೀತೆಗಳು ಸೋಬಾನ ಪದಗಳನ್ನು ಬಳಸಿ ತಮ್ಮ ದೈನಂದಿನ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದರು ಇತ್ತೀಚಿಗೆ ವಿದೇಶಿ ಸಂಸ್ಕೃತಿಯಿಂದ ನಮ್ಮ ಭಾರತೀಯ ಸಂಸ್ಕೃತಿ ಕಣ್ಮರೆ ಆಗುತ್ತಿದೆ ಆದ್ದರಿಂದ ನಮ್ಮ ಸಂಸ್ಕೃತಿ ಉಳಿಸು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಸಾಂಸ್ಕೃತಿಕ. ಕ್ರೀಡೆ. ಎನ್ಎಸ್ಎಸ್ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಎಂದು ತಿಳಿಸಿದರು
ಪದವಿ ವಿದ್ಯಾರ್ಥಿನಿಯರು ಮೂರು ವರ್ಷಗಳ ತನಕ ನಿರಂತರ ಆತ್ಮವಿಶ್ವಾಸದಿಂದ ಗುರುಗಳು ಹಾಗೂ ಹಿರಿಯರ ಮಾರ್ಗದರ್ಶನದಿಂದ ವಿದ್ಯಾಭ್ಯಾಸ ಕಲಿತರೆ ನಿಮ್ಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಜೊತೆಗೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು
ಜೆಎಸ್ಎಸ್ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಸಂಚಾಲಕಿ ಪ್ರೊ ಜಮುನಾ ಮಾತನಾಡಿ. ಹೆಣ್ಣು ಮಕ್ಕಳು ಇಂದಿನ ಕಾಲದಲ್ಲಿ ನಾಲ್ಕು ಗೋಡಗಳಿಗೆ ಸೀಮಿತವಾಗಿದ್ದರು ಈಗ ಪುರುಷರಿಗೆ ಸಮಾನವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ವಿಶೇಷವಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಸಾಂಸ್ಕೃತಿಕ. ಕಾರ್ಯಕ್ರಮಗಳ ಮೂಲಕ ಯುವ ಜನರಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಪರಂಪರೆ ಸಂಸ್ಕೃತಿಯನ್ನು ಉಳಿಸು ಬೆಳೆಸುವುದು ಪ್ರಯತ್ನ ಮಾಡುತ್ತಿದ್ದಾರೆ. ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಎಂ ಪ್ರಭು ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭಿರುಚಿ ಬೆಳೆಸಿಕೊಳ್ಳಬೇಕು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ತಮ್ಮ ಪ್ರತಿಭೆ ವರ ಚೆಲುವ ಜೊತೆ ಸೂಕ್ತ ವೇದಿಕೆಯಲ್ಲಿ ಆಕರ್ಷಕ ಬಹುಮಾನ ಗೆಲ್ಲಬಹುದು ಎಂದು ತಿಳಿಸಿದರು
ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಸಮಿತಿ ಡಾ. ಬಿಕೆ ಕೆಂಡಗಣ್ಯ ಸ್ವಾಮಿ. ಪ್ರೊ ಮರಿಸ್ವಾಮಿ ಪ್ರೊ ಡಾ ಸುಷ್ಮಾ. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೌಂದರ್ಯ. ಮಾನಸ, ತಸಿಮಾ. ಅಮೃತ. ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಪ್ರೊಫೆಸರ್ ಗಳು ವಿದ್ಯಾರ್ಥಿಗಳು ಹಾಜರಿದ್ದರು