ಭೋವಿ ಸಮಾಜದ ಜಮೀನು ಒತ್ತುವರಿ ತೆರವಿಗೆ ಒತ್ತಾಯಿಸಿ ಧರಣಿ
ಎಚ್ .ಡಿ.ಕೋಟೆ : ಭೋವಿ ಸಮಾಜದ ಬಡ ಮಕ್ಕಳ ವಿದ್ಯಾರ್ಥಿನಿಲಯಕ್ಕೆ ಸರ್ಕಾರ ಮಂಜೂರು ಮಾಡಿಕೊಟ್ಟಿರುವ ಜಮೀನು ಒತ್ತುವರಿಯಾಗಿದ್ದು, ಈ ಸಂಬಂಧ ಅತಿಕ್ರಮ ಪ್ರವೇಶ ಮಾಡಿರುವವ ವಿರುದ್ಧ ಕಾನೂನು ಕ್ರಮಕೈಗೊಂಡು ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ಹಾಗು ತಾಲೂಕು ಮಟ್ಟದ ಭೋವಿ ಸಮಾಜದವರು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು. ಭೋವಿ ಸಮುದಾಯದ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಅಧ್ಯಕ್ಷ ಐಡಿಯಾ ವೆಂಕಟೇಶ್ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ನಮ್ಮ ಸಮಾಜದ ಜಾಗವನ್ನು…