Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿ

ನಂಜನಗೂಡು: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ದಾರುಣ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಂಚಿಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಿವಾಸಿಯಾದ ಶಿವಕುಮಾರ್ (60) ಸಾವಿಗೀಡಾದವರು. ಇವರು ತಮ್ಮ ಜಮೀನಿನ ಕಾವಲು ಕಾಯಲು ತೆರಳಿದ್ದು, ಮುಂಜಾನೆ ಜಮೀನಿನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಗ್ರಾಮದಲ್ಲಿ ಆ*ತಂಕದ ವಾತಾವರಣ ನಿರ್ಮಾಣವಾಗಿದೆ.ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ…

Read More

ಕಾಂಗ್ರೆಸ್ ಕೂಟದ ಪ್ರತಿಭಟನೆಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿರುವುದು ಖಂಡನೀಯ; ತೋಟದಪ್ಪ ಬಸವರಾಜು

ಮೈಸೂರು; ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ನಡೆಸುತ್ತಿರುವ ಕಾಂಗ್ರೆಸ್ ಕೂಟದ ಪ್ರತಿಭಟನೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ವರುಣ ಕ್ಷೇತ್ರದ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಕಿಡಿಕಾರಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಕೂಟದ ಈ ಹೋರಾಟ ಖಂಡನೀಯ. ಇದು ದೇಶದ್ರೋಹದ ಪ್ರತಿಭಟನೆಯಾಗಿದೆ ಎಂದು ಹೇಳಿದ್ದಾರೆ.ದೆಹಲಿಯ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಮ್ಮ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಎಳೆದು ಹಿಂದಕ್ಕೆ ತಳ್ಳಿ, ಕೇವಲ ಮಾಧ್ಯಮಕ್ಕೆ ಪೋಸ್ ನೀಡುವ ಪ್ರಚಾರದ…

Read More

ದಸರಾ ಕ್ರೀಡಾಕೂಟ ಸಿ.ಎಂ ಕಪ್ ಸ್ಪರ್ಧೆಯಲ್ಲಿ ನೂತನ ದಾಖಲೆ

ಮೈಸೂರು: ನಾಡ ಹಬ್ಬ ದಸರಾ ನಿಮಿತ್ಯವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯದ 5 ವಿಭಾಗಗಳ ಕ್ರೀಡಾ ಪಟುಗಳು ಕಳೆದ ವರ್ಷದ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.ಬೆಂಗಳೂರು ನಗರ ವಿಭಾಗದ ಪ್ರಸನ್ನಕುಮಾರ ವಿ.ಎಮ್ 200 ಮೀ ಓಟ ಸ್ಪರ್ಧೆ ಪುರುಷರ ವಿಭಾಗದಲ್ಲಿ 2024 ರಲ್ಲಿ ಬೆಂಗಳೂರು ನಗರ ವಿಭಾಗದ ಪ್ರಸನ್ನಕುರಮಾರ 21.56 ಸೆಕೆಂಡನಲ್ಲಿ ಓಡಿದ ದಾಖಲೆಯನ್ನು 21.35 ಸೆಕೆಂಡನಲ್ಲಿ ಕ್ರಮೀಸಿ ಹೊಸದಾಖಲೆ ನಿರ್ಮಿಸಿದ್ದಾರೆ.ಬೆಂಗಳೂರು…

Read More

ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ನಗರ ಪ್ರದೇಶಗಳ ಸ್ವಚ್ಛತೆ ಆದ್ಯತೆ; ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು; ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು, ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ನಗರಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯೆತೆ ನೀಡುವ ಮೂಲಕ, ನಗರಗಳ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಮಂಗಳವಾರ ನಗರದ ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಮತ್ತು ಘನ ತ್ಯಾಜ್ಯ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಘನ ತಾಜ್ಯ…

Read More

ಅರಮನೆ ಆವರಣದಲ್ಲಿ ಅರಳಿದ ತರಾವರಿ ಬಣ್ಣ, ಬಣ್ಣದ ರಂಗೋಲಿಗಳು

• ರಂಗೋಲಿ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗಿಮೈಸೂರು: ನಗರದಲ್ಲಿರುವ ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ಮಂಗಳವಾರ ಮುಂಜಾನೆ ತರಾವರಿಯ ಬಣ್ಣ, ಬಣ್ಣದ ರಂಗೋಲಿಗಳು ಅರಳಿದ್ದವು. ವಿವಿಧ ಜಿಲ್ಲೆಗಳಿಂದ ಬೆಳ್ಳಂ ಬೆಳಗ್ಗೆನೇ ಅರಮನೆ ಆವರಣಕ್ಕೆ ಬಣ್ಣ, ಬಣ್ಣದ ರಂಗೋಲಿಗಳೊAದಿಗೆ ಆಗಮಿಸಿದ ಮಹಿಳೆಯರು ತಮ್ಮ ಸುಂದರವಾದ ಕೈಚಳಕದಿಂದ ಚೆಂದ, ಚೆಂದವಾದ ರಂಗೋಲಿಗಳನ್ನು ಬಿಡಿಸಿದರು. ಆ ಮೂಲಕ ಅರಮನೆಯ ಆವರಣಕ್ಕೆ ಹೊಸ ಮೆರಗು ನೀಡಿದರು.ಅರಮನೆ ಆವರಣದಲ್ಲಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಒಟ್ಟು…

Read More

ಕನ್ನಡ ಕಾವ್ಯ ಲೋಕಕ್ಕೆ ಯಾವುದೇ ಕೃತಕ ಬುದ್ಧಿಮತ್ತೆಯ ಸ್ಪರ್ಶವಾಗಬಾರದು; ಸಾಹಿತಿ ವೈದೇಹಿ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ಮೂರನೇ ದಿನವಾದ ಮಂಗಳವಾರ ನಾಡಿನ ಕವಿಗಳ ಕಲರವ ಆರಂಭವಾಯಿತು.ನಗರದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ. ಶ್ರೀ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿದ್ದ ಬಹುರೂಪಿ ಕವಿಗೋಷ್ಠಿಗೆ ಖ್ಯಾತ ಸಾಹಿತಿ ವೈದೇಹಿ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿ,ಕನ್ನಡ ಕಾವ್ಯವು ತನ್ನದೇ ಆದ ಸಹಜ ಸೌಂದರ್ಯ ಮತ್ತು ಭಾವನಾತ್ಮಕ ಲೋಕವನ್ನು ಹೊಂದಿದ್ದು, ಅದಕ್ಕೆ ಯಾವುದೇ ಕೃತಕ ಬುದ್ಧಿಮತ್ತೆಯ ಸ್ಪರ್ಶವಾಗಬಾರದು,ಡಿಜಿಟಲ್ ಯುಗದಲ್ಲಿ ನಮಗೆ ದುಃಖ ಸುಖಗಳು ಪ್ರಾಕೃತಿಕವಾಗಿ ದೊರೆಯಬೇಕು….

Read More

ನೂತನ ಅಪಾರ ಜಿಲ್ಲಾಧಿಕಾರಿ ಪ್ರಿಯದರ್ಶಿನಿರಿಗೆ ಸನ್ಮಾನ

ಚಾಮರಾಜನಗರ ; ನೂತನವಾಗಿ ಆಗಮಿಸಿರುವ ಅಪಾರ ಜಿಲ್ಲಾಧಿಕಾರಿ ಪ್ರಿಯದರ್ಶಿನಿ ರವರಿಗೆನಗರದ ಜಿಲ್ಲಾ ಆಡಳಿತ ಭವನ ಅಪಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ. ಜಿಲ್ಲೆಯ ಜನತೆ ಪರವಾಗಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ. ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು ಸನ್ಮಾನಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ. ಕ್ರೀಡಾಪಟು ವಿ ಶ್ರೀನಿವಾಸ್ ಪ್ರಸಾದ್. ಕಾರ್ತಿಕ್ ನಾಯಕ್.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಮಂಜುನಾಥ್ ಕೆ.. ಇಲಾಖೆಯ…

Read More

ಏಷ್ಯಾ ಮಟ್ಟದಲ್ಲಿ ಸಾಧನೆ ಮೆರೆದ ಶ್ರವಣದೋಷ ಕ್ರೀಡಾಪಟುಗಳಿಗೆ ಸನ್ಮಾನ

ಮೈಸೂರು: ಮಲೇಷ್ಯಾದ ಪೆನಾಂಗ್‌ನಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಡೆಫ್ ಮಲ್ಟಿ ಸ್ಪೋರ್ಟ್್ಸ ಚಾಂಪಿಯನ್‌ಶಿಪ್ 2026ರಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದ ಕರ್ನಾಟಕದ ಮೂವರು ಶ್ರವಣದೋಷ ಕ್ರೀಡಾಪಟುಗಳನ್ನು ಸೋಮವಾರ ನಗರದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.ಮೈಸೂರಿನ ರಿಷಿತಾ ಅವರು 4* 100 ಮೀಟರ್ ರಿಲೇ ಓಟದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಹಾಸನದ ಶ್ರೇಯಾ ಅವರು ಚೆಸ್ ಬ್ಲಿಟ್ಜ್ ಚಾಂಪಿಯನ್‌ಶಿಪ್ ಹಾಗೂ ಮಿಕ್ಸ್÷್ಡ ರ್ಯಾಪಿಡ್ ವಿಭಾಗದಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದಿದ್ದಾರೆ.ಧಾರವಾಡದ ಅಂಬಿಕಾ ನಾಗಪ್ಪ ಮಸಗಿ…

Read More

ನಮ್ಮ ಜಮೀನಿಗೆ ಪ್ರವೇಶ ಮಾಡಲು ಬಿಡಿ : ಜಮೀನಿನ ಮಾಲೀಕ ಮೋಹನನ್ 

ಪಿರಿಯಾಪಟ್ಟಣ : ನಮ್ಮ ಜಮೀನಿಗೆ ಪ್ರವೇಶ ಮಾಡಲು ಬಿಡದೆ ಕೆಲವು ವ್ಯಕ್ತಿಗಳು ನಮಗೆ ತೊಂದರೆ ನೀಡುತ್ತಿದ್ದಾರೆ ಅವರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಜಮೀನಿನ ಮಾಲೀಕ ಮೋಹನನ್ ಆರೋಪಿಸಿದ್ದಾರೆ. ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನ್ನ ತಂದೆ ಗೋವಿಂದಯ್ಯ ರವರು ತಾಲೂಕಿನ ಅಳಲೂರು ಗ್ರಾಮದವರಾಗಿದ್ದು ಇವರಿಗೆ 1978ರಲ್ಲಿ ಸರ್ವೇ ಸಂಖ್ಯೆ 49 ರಲ್ಲಿ 2 ಎಕರೆ 10 ಗುಂಟೆ ಜಮೀನು ಮಂಜೂರಾಗಿರುತ್ತದೆ. ಇದರಂತೆ ತಹಸೀಲ್ದಾರ್ ರವರಿಂದ ಖಾತೆಯನ್ನು ಕೂಡ ಮಾಡಿಸಿಕೊಂಡಿದ್ದೇವೆ….

Read More

2 ಕೋಟಿ 40 ಲಕ್ಷ ವೆಚ್ಚದ ಸಮುದಾಯ ಭವನ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ. 

  ನಂಜನಗೂಡು; ತಾಲೂಕಿನ ಕಳಲೆ, ಸಿಂದುವಳ್ಳಿಪುರ ಗ್ರಾಮಗಳಲ್ಲಿ 2 ಕೋಟಿ 40 ಲಕ್ಷ ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.    ಅವರು ತಾಲೂಕಿನ ಕಳಲೆ, ಸಿಂಧುವಳ್ಳಿಪುರ, ಗೋಳೂರು, ಗೀಕಹಳ್ಳಿ ಗ್ರಾಮದಲ್ಲಿ 2 ಕೋಟಿ 40 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಮತ್ತು ವಿವಿಧ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.       ನಮ್ಮ ಕಾಂಗ್ರೆಸ್…

Read More