Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿಯವರಿಂದ ಯೋಗ ದಸರಾಗೆ ಚಾಲನೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ನಗರದ ಜೆ.ಕೆ. ಜೆ.ಕೆ. ಗ್ರೌಂಡ್‌ನ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಷಿಯೇಷನ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಯೋಗ ದಸರಾ ಉದ್ಘಾಟನೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ಮಾಡಿದರು.ಈ ವೇಳೆ ಮಾತನಾಡಿದ ಯೋಗ ದಸರಾ ಉಪಸಮಿತಿ ವಿಶೇಷಧಿಕಾರಿ ರಮ್ಯಾ.ಕೆ, ದಸರಾ ಎಂದರೆ ಕೇವಲ ಸಂಭ್ರಮ, ಮೆರವಣಿಗೆ, ದೀಪಾಲಂಕಾರ ಮಾತ್ರವಲ್ಲದೆ, ಅದು ನಮ್ಮ ಸಂಸ್ಕöÈತಿ, ಪರಂಪರೆ ಮತ್ತು ಜ್ಞಾನದ ಆಚರಣೆಯೂ ಹೌದು ಎಂದು ಹೇಳಿದರು.ಪರಂಪರೆಯ…

Read More

ದಸರಾ ಯುವ ಕವಿಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ವಿಶೇಷ ಚೇತನರು, ಕೂಲಿಕಾರ್ಮಿಕರಿಂದ ಕವನ ವಾಚನ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ನಾಲ್ಕನೇ ದಿನವಾದ ಬುಧವಾರ ದಸರಾ ಯುವಕವಿಗೋಷ್ಠಿ ನಡೆಯಿತು.ನಗರದ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಕವಿಗೋಷ್ಠಿಯಲ್ಲಿ 39 ಮಂದಿ ಕವಿತೆ ವಾಚನ ಮಾಡಿದರು. ಲಿಂಗತ್ವ ಅಲ್ಪಸಂಖ್ಯಾತರು, ವಿಶೇಷ ಚೇತನರು, ಕೂಲಿಕಾರ್ಮಿಕರು ಕವನ ವಾಚಿಸಿದ್ದು ವಿಶೇಷವಾಗಿತ್ತು.ಭ್ರಷ್ಟಾಚಾರ, ನಿರುದ್ಯೋಗ, ರಾಜಕೀಯ, ಧರ್ಮದ, ಕಾರುಣ್ಯ, ಪ್ರಕೃತಿ ಸಂಬAಧಿಸಿದAತೆ ಕವಿತೆಗಳು ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾದವು.ಕಾರ್ಯಕ್ರಮ ಉದ್ಘಾಟಿಸಿದ ಕವಯಿತ್ರಿ ಡಾ.ಕೆ.ಷರಿಫಾ ಮಾತನಾಡಿ, ಇಂದಿನ ಯುವ ಪೀಳಿಗೆ ಸಮಾಜದ ಚೈತನ್ಯ ಶಕ್ತಿಯಾಗಿದ್ದಾರೆ. ಸಾಮಾಜಿಕ ಪಿಡುಗು, ಭ್ರಷ್ಟಾಚಾರ, ಅಸಮಾನತೆ,…

Read More

ಮಕ್ಕಳ ದಸರಾಗೆ ಸಚಿವ ಮಧು ಬಂಗಾರಪ್ಪಚಾಲನೆ

ಸಾಧನೆಗೈದ ಮಕ್ಕಳಿಗೆ ಸಚಿವರಿಂದ ಸನ್ಮಾನ: ನೃತ್ಯ ಪ್ರದರ್ಶನ, ಕಲಾಥಾನ್ ಮೆರವಣಿಗೆಮೈಸೂರು; ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ಬುಧವಾರ ನಡೆದ ಮಕ್ಕಳ ದಸರಾಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು,ದಸರಾ ಮಹೋತ್ಸವದ ಅಂಗವಾಗಿ ಸುಮಾರು 6,500 ಮಕ್ಕಳು ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ವೇದಿಕೆಗೆ ಬರುವ ಮುನ್ನವೇ ಮಕ್ಕಳು ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನಾಡಹಬ್ಬ ದಸರಾವನ್ನು ಮಕ್ಕಳು ತಮ್ಮದೇ ಆದ…

Read More

ಈ ಬಾರಿ ದಸರಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾಗಿ ಪ್ರಶಾಂತ ಆಯ್ಕೆ

*ಧನಂಜಯ ಮೀಸಲು ಅಂಬಾರಿ ಆನೆ, ನಿಶಾನೆ ಆನೆಯಾಗಿ ಅಭಿಮನ್ಯು, ನೌಫತ್ ಆನೆಯಾಗಿ ಗೋಪಿ ಆಯ್ಕೆಮೈಸೂರು; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ವಿಜಯದಶಮಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಧಾನ ಆನೆಯಾಗಿ 54 ವರ್ಷ ವಯಸ್ಸಿನ, ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಅನುಭವಿ ಪ್ರಶಾಂತ್ ಆನೆಯನ್ನು ಆಯ್ಕೆ ಮಾಡಲಾಗಿದೆ.ಮೈಸೂರು ದಸರಾ ಕರ್ನಾಟಕದ ಭವ್ಯ ಸಾಂಸ್ಕöÈತಿಕ ಪರಂಪರೆ ಹಾಗೂ ಐತಿಹಾಸಿಕ ವೈಭವದ ಪ್ರತೀಕವಾಗಿದ್ದು, ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಆನೆಯ…

Read More

ರಾಜ್ಯದಲ್ಲಿ ಜನಪ್ರತಿನಿಧಿಗಳನ್ನೂ ಭಯಪಡಿಸುವ ಕೆಲಸಗಳು ನಡೆಯುತ್ತಿವೆ; ಸಚಿವ ಸಿ.ಪುಟ್ಟರಂಗಶೆಟ್ಟಿ

ಮೈಸೂರು: ರಾಜ್ಯದಲ್ಲಿ ಜನಪ್ರತಿನಿಧಿಗಳನ್ನೂ ಭಯಪಡಿಸುವ ಕೆಲಸಗಳು ನಡೆಯುತ್ತಿವೆ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬAಧಿಸಿದAತೆ ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,“ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಕೋರುತ್ತಿರುವ ವಿಚಾರ ಬೇರೆ” ಎಂದು ಹೇಳಿದರು.ತಮ್ಮ ವಿರುದ್ಧವೂ ಈ ಹಿಂದೆ ಆರೋಪಗಳು ಬಂದಿದ್ದವು, ದೂರು ನೀಡಿ ಆರೋಪಿಗಳ ಬಂಧನ ಮಾಡಿಸಿದ್ದಾಗಿ ತಿಳಿಸಿದರು.ರಾಜ್ಯದಲ್ಲಿ ಯಾವ ರೀತಿಯ…

Read More

17.65 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಗುದ್ದಲಿ ಪೂಜೆ

ಎಚ್ .ಡಿ.ಕೋಟೆ: ಲೂಕಿನ ಅಣ್ಣೂರು, ಪಡುಕೋಟೆ, ಪಂಚಾಯತ್ ವ್ಯಾಪ್ತಿಯ ಸುಮಾರು 8 ಹಳ್ಳಿಗಳಳ್ಳಿ  ಸುಮಾರು 17. 65 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಗುದ್ದಲಿಪೂಜೆ ನೆರವೇರಿಸಿದರು.  ವಿಶ್ವಕರ್ಮ ಕಾಲೋನಿ ಚಿಕ್ಕಪಡುಕೋಟೆ, ಭಾರತೀಪುರ, ಪಡುಕೋಟೆ, ಎಲೆಹುಂಡಿ, ಗಾಂಧಿನಗರ, ಇಂದಿರಾ ನಗರ, ಪಡುಕೋಟೆ, ಕೆ ಎಡತೊರೆ, ಕೈಲಾಸಪುರ, ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ವಿದ್ಯುತ್/ ವೋಲ್ಟೇಜ್  ಸ್ಥಿತಿಯನ್ನು ಸುಧಾರಿಸುವುದು ಮತ್ತು ಅಡಚಣೆ ರಹಿತ ವಿದ್ಯುತ್ ಪೂರೈಕೆ ಮಾಡುವುದು ಮತ್ತು ಈ ಭಾಗದ ರೈತರಿಗೆ ಮತ್ತು…

Read More

ಸಿದ್ದರಾಮಯ್ಯನವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ, ಅಪಪ್ರಚಾರ ನೋಡಿಕೊಂಡು ಸುಮ್ಮನಿರಲು ಆಗಲ್ಲ; ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ನಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ. ಅಪಪ್ರಚಾರ ನೋಡಿಕೊಂಡು ಸುಮ್ಮನಿರಲು ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಅವಹೇಳನಕಾರಿ ವಿಡಿಯೋ ಪ್ರಸಾರಕ್ಕೆ ತಡೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ವಿಚಾರಕ್ಕೆ ಸಂಬAಧಿಸಿದAತೆ, ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು,ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳಾಗಿದ್ದು, ನಮ್ಮ ತಂದೆಯವರ ವಿರುದ್ಧ ಅಪಪ್ರಚಾರ ಮತ್ತು ತೇಜೋವಧೆ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದರು.ಸುಳ್ಳು…

Read More

ದಸರಾ ಪುಸ್ತಕ ಮೇಳದಲ್ಲಿ ವಿವಿಧ ಲೇಖಕರ ಕೃತಿಗಳ ಲೋಕಾರ್ಪಣೆ

ಮೈಸೂರು; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ 2026 ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದ ರಾಷ್ಟçಕವಿ ಡಾ. ಜಿ ಎಸ್. ಶಿವರುದ್ರಪ್ಪ ಸಾಂಸ್ಕöÈತಿಕ ವೇದಿಕೆಯಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.ನಗರದ ಸ್ಕೌಟ್ ಮತ್ತು ಗೈಡ್ ಮೈದಾನದಲ್ಲಿ ನಡೆಯುತ್ತಿರುವ ದಸರಾ ಪುಸ್ತಕ ಮೇಳದಲ್ಲಿ ನಡೆದ ಕಾರ್ಯಕ್ರಮದಲ್ಲಿಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಪುಸ್ತಕ ಬಿಡುಗಡೆ ಮಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಡಾ. ಬಿ ಸಿ…

Read More

ನಾಡ ಹಬ್ಬ ಮೈಸೂರು ದಸರಾದಲ್ಲಿ ಮಹಿಳೆಯರ ಕಲರವ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮೂರನೇ ದಿನವಾದ ಮಂಗಳವಾರ ಕಳೆಗಟ್ಟಿದ್ದು, ಇಂದು ಮಹಿಳಾ ದಸರಾಗೆ ಚಾಲನೆ ನೀಡಲಾಯಿತು. ನಗರದ ಜೆ.ಕೆ.ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾಗೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರೇ ಈ ಸಮಾಜದ ಶಕ್ತಿ ಹಾಗೂ ಕುಟುಂಬದ ಆಧಾರ ಸ್ತಂಭ ಹಾಗಾಗಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಎಂದು ಹೇಳಿದರು.ಮಹಿಳೆಯರಿಗೆ…

Read More

ದಸರಾ ಕ್ರೀಡಾಕೂಟ ನಾಡಿನ ಹೆಮ್ಮೆ: ಅಭಿನವ ಶ್ರೀ ಗವಿಸಿದ್ದೇಶ್ವರ ಶ್ರೀ ಸ್ವಾಮಿ

ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜ್ಯದ 4500 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಸಿ.ಎಂ. ಕಪ್ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಾಡಿನ ಕೀರ್ತಿಯನ್ನು ದೇಶದಾದ್ಯಂತ ಪಸರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಈ ವರ್ಷದ ಮೈಸೂರು ದಸರಾ ಉದ್ಘಾಟಕರಾದ ಕೊಪ್ಪಳ ಗವಿಮಠ ಸಂಸ್ಥಾನದ ಅಭಿನವಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ ಹೇಳಿದರು.ಮಂಗಳವಾರ ನಗರದ ಚಾಮುಂಡಿ ವಿಹಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು, ಮೊದಲಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು…

Read More