ಹುಣಸೂರು ಬಂದ್ ಯಶಸ್ವಿ
ಅಂಗಡಿ ಮುಂಗಟ್ಟುಗಳು ಬಂದ್; ಎಂದಿನಂತೆ ಸಂಚರಿಸಿದ ಬಸ್‌ಗಳು — ಮೀಸಲಾತಿ ಮರುಪರಿಶೀಲನೆಗೆ ಆಗ್ರಹ ಹುಣಸೂರು: ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿನ ಪರಿಶಿಷ್ಟ ಜಾತಿಗೆ ಪ್ರಾತಿನಿಧ್ಯ ನೀಡದಿರುವುದನ್ನು ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಹುಣಸೂರು ಬಂದ್ ಯಶಸ್ವಿಯಾಯಿತು. ಬಂದ್‌ಗೆ ಬೆಂಬಲವಾಗಿ ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆದರೆ, ಸಾರಿಗೆ ಬಸ್‌ಗಳು ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ನಡೆಯಿತು. ಹುಣಸೂರು ತಾಲೂಕಿನ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಗೆ ಒಂದೂ ಕ್ಷೇತ್ರವನ್ನು ಮೀಸಲಿಡದಿರುವುದನ್ನು…