Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನೋಡುಗರ ಗಮನ ಸೆಳೆದ ನೃತ್ಯ ರೂಪಕ


ಚಾಮರಾಜನಗರ; ರಾಜ್ಯದ ಗಮನ ಸೆಳೆದಿರುವ ಚಾಮರಾಜನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ೬೪ನೇ ವರ್ಷದ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿರುವ ನಂಜನಗೂಡಿನ ಭರತನಾಟ್ಯ ಕಲಾವಿದೆ ವಿದುಷಿ ರಂಜಿತಾ ಸೋಮಶೇಖರ್ ಶಿಷ್ಯಾವೃಂದದವರಿAದ ನೃತ್ಯರೂಪಕ. ಭಕ್ತಾದಿಗಳ ಗಮನ ಸೆಳೆಯಿತು.
ಚಾಮರಾಜನಗರ ಜೈ ಭುವನೇಶ್ವರಿ ಕನ್ನಡ ವೇದಿಕೆ ಅಧ್ಯಕ್ಷ ಜಿ ಬಂಗಾರು ಪ್ರಾಯೋಜನೆ ಮಾಡಿರುವ ನೃತ್ಯರೂಪಕ ಸುಮಾರು ಒಂದು ಗಂಟೆಗಳ ಕಾಲ ಭಕ್ತಾದಿಗಳ ಗಮನ ಸೆಳೆಯಿತು
ಅ. ೨೮ರ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ವಿವಿಧ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರು ಭಾಗವಹಿಸಲಿದ್ದಾರೆ. ಅ. ೨೯ ಗುರುವಾರ. ಬೆಳಗ್ಗೆ ಒಂಬತ್ತು ಗಂಟೆಗೆ ೨೦ಕ್ಕೂ ಹೆಚ್ಚು ಜನಪದಕಲಾ ತಂಡದೊAದಿಗೆ ಸಾವಿರಾರು ಪೊಲೀಸ್ ಭದ್ರತೆಯಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ವಿದ್ಯಾಗಣಪತಿ ಮೆರವಣಿಗೆ ಮತ್ತು ವಿಸರ್ಜನೆ ಮಹೋತ್ಸವ ನಡೆಯಲಿದೆ
ಸಾಂಸ್ಕöÈತಿಕ ಕಾರ್ಯಕ್ರಮಗಳಿಗೆ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಚಾಲನೆ ನೀಡಿದರು.
ಮೈಸೂರು ವಿಭಾಗದ ವಿ ಎಚ್ ಪಿ ಕಾರ್ಯದರ್ಶಿ ಎಚ್ ಬಿ ವೆಂಕಟರಾಮ್ ಇಲವಾಲ ಮಾತನಾಡಿದರು.
ಶ್ರೀ ವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ನವೀನ್, ಚುಡಾ ಮಾಜಿ ಅಧ್ಯಕ್ಷ ಎಸ್ ಬಾಲಸುಬ್ರಹ್ಮಣ್ಯಂ. ಕುಲಗಾನ ಶಾಂತಮೂರ್ತಿ. ಗಣಪತಿ ಮಂಡಳಿ. ಬುಲೆಟ್ ಚಂದ್ರು, ವಿರಾಟ್ ಶಿವು, ಶಿವಣ್ಣ, ಆನಂದ್ ಭಗಿರಥ, ಮಹೇಶ್, ಮೂಡಲಪುರ ನಂದೀಶ್, ಕುಮಾರ್, ಬಂಗಾರ ನಾಯಕ, ಮಂಜು. ಸೇರಿದಂತೆ ಗಣಪತಿ ಮಂಡಳಿಯ ಪದಾಧಿಕಾರಿಗಳು. ವಿಧವಿಧ ಸಂಘ-ಸAಸ್ಥೆ ಮುಖಂಡರು ಭಕ್ತಾದಿಗಳು ಹಾಜರಿದ್ದರು