ಆಡಳಿತದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್
ಕೆ.ಆರ್.ನಗರ;ಸಾಮಾಜಿಕನ್ಯಾಯದ ಹರಿಕಾರಎನಿಸಿದ ಬಸವಣ್ಣ ನಾಲ್ವಡಿಯವರ ನಂತರ ಸಂವಿಧಾನಾತ್ಮಕ ರಾಜಕೀಯದ ರಾಜಕಾರಣದಲ್ಲಿ ಸಾಮಾಜಿಕನ್ಯಾಯದ ಬಂಡಿಯನ್ನು ಎಳೆದು ಆಡಳಿತದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿದವರು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸ್ರವರಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.ಪಟ್ಟಣದ ರೋಟರಿಭವನದಲ್ಲಿ ತಾಲೂಕು ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಡಿ.ದೇವರಾಜಅರಸುರವರ ನೆನೆಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ಅಧಿಕಾರವಧಿಯಲ್ಲಿ ಕನ್ನಡವನ್ನು ಆಡಳಿತಭಾಷೆ ಮಾಡಿದ ಕೀರ್ತಿ ಪಡೆದ ಅರಸರು, ಭೂಸುಧಾರಣೆ ಕಾಯ್ದೆ, ಉಳುವವನೆ ಭೂಮಿಒಡೆಯ, ಜೀತ ಪದ್ದತಿ ವಿರುದ್ದ ಕಾನೂನು, ಮಲಹೊರುವ ಪದ್ದತಿ…