
ಕೆ.ಆರ್.ನಗರ;
ಸಾಮಾಜಿಕನ್ಯಾಯದ ಹರಿಕಾರಎನಿಸಿದ ಬಸವಣ್ಣ ನಾಲ್ವಡಿಯವರ ನಂತರ ಸಂವಿಧಾನಾತ್ಮಕ ರಾಜಕೀಯದ ರಾಜಕಾರಣದಲ್ಲಿ ಸಾಮಾಜಿಕನ್ಯಾಯದ ಬಂಡಿಯನ್ನು ಎಳೆದು ಆಡಳಿತದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿದವರು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸ್ರವರಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.
ಪಟ್ಟಣದ ರೋಟರಿಭವನದಲ್ಲಿ ತಾಲೂಕು ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಡಿ.ದೇವರಾಜಅರಸುರವರ ನೆನೆಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ಅಧಿಕಾರವಧಿಯಲ್ಲಿ ಕನ್ನಡವನ್ನು ಆಡಳಿತಭಾಷೆ ಮಾಡಿದ ಕೀರ್ತಿ ಪಡೆದ ಅರಸರು, ಭೂಸುಧಾರಣೆ ಕಾಯ್ದೆ, ಉಳುವವನೆ ಭೂಮಿಒಡೆಯ, ಜೀತ ಪದ್ದತಿ ವಿರುದ್ದ ಕಾನೂನು, ಮಲಹೊರುವ ಪದ್ದತಿ ವಿರುದ್ದ ಹೋರಾಟ, ಋಣಭಾರ ಕಾಯ್ದೆ, ಭಾಗ್ಯಜ್ಯೋತಿಯಂತಹ ಹತ್ತು ಹಲವಾರು ಕಾನೂನುಗಳ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಡಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಸಾಮಾಜಿಕನ್ಯಾಯದ ಹಾಗೂ ಪರಿವರ್ತನೆಯಹರಿಕಾರ ಎನಿಸಿಕೊಂಡ ಭರತಖಂಡದ ಏಕೈಕ ಮುಖ್ಯಮಂತ್ರಿ ಎನಿಸಿದ್ದಾರೆ ಎಂದರು.
ರಾಜ್ಯದ ಎಲ್ಲಾವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶಾಲ ಮೈಸೂರುರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ ಕ್ರಾಂತಿ ಮಾಡಿದ ಡಿ.ದೇವರಾಜುಅರಸರ ವಿಚಾರಧಾರೆ, ಸಂದೇಶ ಹಾಗೂ ಮಾರ್ಗದರ್ಶನಗಳನ್ನು ಇಂದಿನ ಯುವಜನತೆ ಎದೆಯೊಳಗೆ ಬಿಟ್ಟುಕೊಂಡು ಮುಂದೆ ಬಂದಲ್ಲಿ ಸುಂದರ ಸಮಾಜದೊಂದಿಗೆ ಅಭಿವೃದ್ದಿಯ ಸಮಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದರು.
ಜಾನಪದಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ನಿವೃತ್ತಉಪನ್ಯಾಸಕ ಡಾ.ಕೃಷ್ಣ, ರೋಟರಿಅಧ್ಯಕ್ಷ ಪುರುಷೋತ್ತಮ, ನಿವೃತ್ತಶಿಕ್ಷಕ ರಾಮಕೃಷ್ಣ, ಉದಯಕುಮಾರ್, ಕಸಾಪ ನಗರಾಧ್ಯಕ್ಷ ಸಿ.ವಿ.ಮೋಹನ್ಕುಮಾರ್, ಕಬ್ಬುಬೆಳೆಗಾರರ ಸಂಘದಅಧ್ಯಕ್ಷ ಸಿ.ಕೆ.ರವೀಂದ್ರ, ರೋಟರಿ ಸಹಾಯಕಗರ್ನರ್ ಬ್ಯಾಂಕ್ರಾಘವೇAದ್ರ, ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ್ ಮತ್ತಿತರರು ಡಿ.ದೇವರಾಜಅರಸ್ರವರ ಕುರಿತು ಮಾತನಾಡಿ ಸ್ಮರಣೆ ಮಾಡಿದರು.
ರೋಟರಿಕಾರ್ಯದರ್ಶಿ ಅಶೋಕ್ಕುಮಾರ್, ಮಾಜಿ ಅಧ್ಯಕ್ಷ ದಯಾನಂದ್, ಮಿರ್ಲೆರಾಧಾಕೃಷ್ಣ, ರಾಮಕೃಷ್ಣ, ಸಾಹಿತಿ ಚವ್ಹಾಣ್, ಹರೀಶ್, ವ್ಯಾನ್ಸುರೇಶ್, ಹೆಗ್ಗಂದೂರುಪ್ರಭಾಕರ್, ರೈತಸಂಘದ ಗೌರವಾಧ್ಯಕ್ಷ ಕುಮಾರ್, ಭಾಸ್ಕರ್, ಬಿಎಸ್ಎನ್ಎಲ್ಕೃಷ್ಣ, ರಾಮಶೆಟ್ಟಿ, ಯೋಗೇಶ್ ಮತ್ತಿತರರು ಹಾಗೂ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಕಸಾಪ ಪದಾಧಿಕಾರಿಗಳು ಅರಸು ಅಭಿಮಾನಿಗಳು ಪಾಲ್ಗೊಂಡು ಡಿ.ದೇವರಾಜುಅರಸರನ್ನು ಸ್ಮರಣೆ ಮಾಡಿದರು.
ಪೋಟೋ-1-ಕೆ.ಆರ್.ನಗರ ಪಟ್ಟಣದ ರೋಟರಿಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜಅರಸ್ರ ನೆನೆಪು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖಂಡರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಕೆ.ಆರ್.ನಗರ
ಪಟ್ಟಣದ ಖ್ಯಾತ ಮೂಳೆತಜ್ಞ ಡಾ,ಮೆಹಬೂಬ್ಖಾನ್ ನಿವಾಸಕ್ಕೆ ತಮಿಳುನಾಡಿನ ಖ್ಯಾತ ಉದ್ಯಮಿ ಮಫತ್ಲಾಲ್ ಜವಳಿ ಉದ್ಯಮದ ವ್ಯವಸ್ಥಾಪಕನಿರ್ದೇಶಕ ಹಾಗೂ ರಾಷ್ಟಿçÃಯ ಜವಳಿ ಉದ್ಯಮದ ಅಧ್ಯಕ್ಷ ರಾಜ್ಕುಮಾರ್ ಭೇಟಿ ನೀಡಿ ಮಾತನಾಡಿದರು.
ಶನಿವಾರ ಮಧ್ಯಾಹ್ನ 12ಗಂಟೆ ಸುಮಾರಿಗೆ ಕೆ.ಆರ್.ನಗರದ ಶ್ರೀಕೃಷ್ಣರಾಜೇಂದ್ರ ಕ್ರೀಡಾಂಗಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಬಂದಿಳಿದ ರಾಜ್ಕುಮಾರ್ರನ್ನು ಮೂಳೆತಜ್ಞ ಮೆಹಬೂಬ್ಖಾನ್ ಮತ್ತು ಕುಟುಂಬದವರು ಬರಮಾಡಿಕೊಂಡರು. ನಂತರ ನಿವಾಸಕ್ಕೆ ಆಗಮಿಸಿ ರಾಜ್ಕುಮಾರ್ ಮೆಹಬೂಬ್ಖಾನ್ ಮತ್ತು ಅವರ ಪುತ್ರನೊಂದಿಗೆ ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಮಾತನಾಡಿದ ರಾಜ್ಕುಮಾರ್ ಮೆಹಬೂಬ್ಖಾನ್ರವರ ವೈದ್ಯಕೀಯ ಸೇವೆ ದೇಶದ ವಿವಿಧ ರಾಜ್ಯಗಳಲ್ಲಿ ಹರಡಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರಲ್ಲದೆ ಕಳೆದ 10ವರ್ಷಗಳ ಹಿಂದೆ ತಮ್ಮ ತಂದೆ ಕೆ.ಆರ್.ನಗರಕ್ಕೆ ಆಮಿಸಿದ ವಿಚಾರವನ್ನು ಮೆಲುಕು ಹಾಕಿ ನಂತರ ವಾಪಸ್ ತಮಿಳುನಾಡಿಗೆ ತೆರಳಿದರು.
ಈ ಸಂಧರ್ಭದಲ್ಲಿ ತಮಿಳುನಾಡಿನ ಹಲವು ಮುಖಂಡರು ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಪುರಸಭೆ ಮಾಜಿ ಸದಸ್ಯ ಸೈಯ್ಯದ್ಅಸ್ಲಾಂ ಇನ್ನಿತರರು ಹಾಜರಿದ್ದರು.
ಪೋಟೋ-2-ಕೆ.ಆರ್.ನಗರ ಪಟ್ಟಣದ ಖ್ಯಾತ ಮೂಳೆತಜ್ಞ ಮೆಹಬೂಬ್ಖಾನ್ರವರ ನಿವಾಸಕ್ಕೆ ತಮಿಳುನಾಡಿನ ಖ್ಯಾತಉದ್ಯಮಿ ಮಫತ್ಲಾಲ್ ಜವಳಿಉದ್ಯಮದ ವ್ಯವಸ್ಥಾಪಕನಿರ್ದೇಶಕ ಹಾಗೂ ರಾಷ್ಟಿçÃಯ ಜವಳಿ ಉದ್ಯಮದ ಅಧ್ಯಕ್ಷ ರಾಜ್ಕುಮಾರ್ ಭೇಟಿ ನೀಡಿ ಮಾತನಾಡಿದರು. ಕೆ.ಆರ್.ನಗರ
ಪಟ್ಟಣದಲ್ಲಿ ಕಳೆದರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಭಾರಿ ಅವಾಂತರವನ್ನೆ ಸೃಷ್ಟಿಮಾಡಿದ್ದು ಮುಖ್ಯರಸ್ತೆಗಳಲ್ಲಿ ಆಳುದ್ದ ನೀರು ನಿಂತು ಕೆರೆ ನಿರ್ಮಾಣವಾಗುವ ಮೂಲಕ ಪಟ್ಟಣದ ರಸ್ತೆಗಳ ಅವ್ಯವಸ್ಥೇಯನ್ನು ಜಗಜ್ಜಾಹೀರು ಮಾಡಿದೆ.
ಶುಕ್ರವಾರ ರಾತ್ರಿಯಿಂದ ಪ್ರಾರಂಭವಾದ ಮಳೆ ಶನಿವಾರ ಬೆಳಿಗ್ಗೆ 8ಗಂಟೆಯಾದರೂ ನಿಲ್ಲದ ಕಾರಣ ಭಾರಿ ಅವಾಂತರವನ್ನೆ ಸೃಷ್ಟಿಮಾಡಿದ್ದು ಪಟ್ಟಣದ ಹಾಶನ-ಮೈಸೂರು ರಾಷ್ಟಿçÃಯ ಹೆದ್ಧಾರಿಯ ಉದ್ದಕ್ಕೂ ಆಳುದ್ದ ನೀರು ನಿಂತು ಕೆರೆ ನಿರ್ಮಾಣವಾದ ಕಾರಣ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚಾರ ಮಾಡಲು ಪರದಾಡುವಂತಾಯಿತು.
ಪಟ್ಟಣದ ಮುಖಾಂತರ ಹಾದುಹೋಗಿರುವ ರಾಷ್ಟಿçÃಯ ಹೆದ್ದಾರಿ ಎನಿಸಿರುವ ಪುರಸಭೆ ಮುಂಭಾಗ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗ, ಸಾರ್ವಜನಿಕ ಆಸ್ಪತ್ರೆ ಮುಂಭಾಗ, ಶ್ರೀಕೃಷ್ಣರಾಜೇಂದ್ರ ವೃತ್ತದ ಬಳಿ ಮಳೆಬಿದ್ದ ನೀರು ಸರಾಗವಾಗಿ ಹೋಗದ ಕಾರಣ ಆಳುದ್ದ ನೀರು ನಿಂತು ಕೆರೆ ನಿರ್ಮಾಣವಾದ ಕಾರಣ ವಾಹನ ಸವಾರರಿಗೆ ಇದೇನು ರಸ್ತೆಯೋ ಇಲ್ಲ ಕೆರೆಯೋ ಎಂಬ ಅನುಮಾನದಿಂದ ಸಂಚಾರ ಮಾಡುವಂತಾಯಿತಲ್ಲದೆ ಇದರಿಂದ ಪಾದಚಾರಿಗಳು ದ್ವಿಚಕ್ರ ಸವಾರರು ಕೆಸರಿನ ನೀರಿನ ಸ್ನಾನ ಮಾಡಿ ಸಂಚಾರ ಮಾಡುವಂತಾಯಿತು.
ಪರಿಣಾಮ ಇಡೀ ರಸ್ತೆ ಕಿತ್ತುಬಂದಿದ್ದು ದ್ವಿಚಕ್ರ ಸವಾರರು ಎದ್ದುಬಿದ್ದು ಅಪಘಾತಕ್ಕೆ ಒಳಗಾದ ಕಾರಣ ಮನೆಗೆ ಹೋಗುವ ಬದಲು ಅಲ್ಲೆ ಅಕ್ಕಪಕ್ಕ ಇರುವ ಆಸ್ಪತ್ರೆಗಳ ಕದ ತಟ್ಟುವಂತಾಯಿತು. ಇನ್ನೂ ಬಡಾವಣೆಗಳ ರಸ್ತೆಯ ಸ್ಥಿತಿಯಂತೂ ಹೇಳತೀರದಾಗಿದ್ದು ಇಡೀ ರಸ್ತೆಗಳು ಕೊರಕಲು ಬಿದ್ದು ನಿವಾಸಿಗಳು ಎದ್ದುಬಿದ್ದು ಮನೆ ಸೇರುವ ಬದಲು ದವಾಖಾನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಟ್ಟಣದ ಜನತೆ ಸಂಬAಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಶೀಘ್ರ ಗಮನಹರಿಸಿ ರಾಷ್ಟಿçÃಯ ಹೆದ್ಧಾರಿಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಹಾಗೂ ರಸ್ತೆಯಲ್ಲಿ ಆಗಿರುವ ಹಳ್ಳಗಳನ್ನು ಮುಚ್ಚಿಸುವಂತೆ ಒತ್ತಾಯಿಸಿದ್ದು, ಬಡಾವಣೆಗಳಲ್ಲಿನ ರಸ್ತೆಗಳನ್ನು ದುರಸ್ಥಿಮಾಡಿಸಿ ಜನತೆಯ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಪೋಟೋ-3-ಕೆ.ಆರ್.ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರು ನೀರುನಿಂತು ಕೆರೆಯೆ ನಿರ್ಮಾಣವಾಗಿದ್ದು ಸಂಚಾರಕ್ಕೆ ಅಡಚಣೆಯಾಯಿತು.