
ಎಚ್ ಡಿ ಕೋಟೆ : ತಾಲೂಕಿನ ಬಸವನಗಿರಿಹಾಡಿಯ ಆಶ್ರಮ ಶಾಲೆಯಲ್ಲಿ ಗ್ರೀನ್ ಇಂಡಿಯ ಟ್ರಸ್ಟ್ ವತಿಯಿಂದ ಜೀವನಾಧಾರಿತ ಕೃಷಿ ಪದ್ದತಿಯ ಬಳಕೆ ಮತ್ತು ಮೂಲಭೂತ ಸೌಕರ್ಯ ಅನುಷ್ಠಾನ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ನೇತ್ರಾವತಿ, ಆದಿವಾಸಿಗಳು ತಮ್ಮ ಮನೆಯ ಹಿತ್ತಲಿನಲ್ಲೇ ಸೌತೆ, ಬದನೆ, ಸೊಪ್ಪು, ಮರದ ಅವರೆ ಸೇರಿದಂತೆ ಇನ್ನಿತರ ಬೆಳೆ ಬೆಳೆದು ಯಾವುದೇ ರಾಸಾಯನಿಕ ಮಿಶ್ರಣ ಇಲ್ಲದೆ ತರಕಾರಿ, ಸೊಪ್ಪುಗಳನ್ನು ತಿನ್ನಬಹುದು. ಇದರಿಂದ ಆರೋಗ್ಯ ಕಾಪಾಡುವುಕೊಳ್ಳುವುದರ ಜೊತೆಗೆ ಮಾರ್ಕೆಟ್ ನಲ್ಲಿ ಖರೀದಿಸಲು ತಗಲುವ ವೆಚ್ಚವನ್ನು ಕೂಡ ತಪ್ಪಿಸಬಹುದು ಎಂದು ಹೇಳಿದರು.
ಪರಿಶಿಷ್ಟ ಪಂಗಡ ಇಲಾಖೆ ತಾಲೂಕು ಅಧಿಕಾರಿ ಎನ್.ಜಿ.ಮಹೇಶ್ ಮಾತನಾಡಿ, ನಿಮಗೆ ಲಭ್ಯವಿರುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ನಮ್ಮ ಇಲಾಖೆ ಸದಾ ನಿಮ್ಮೊಂದಿಗೆ ಇದೆ ಎಂದು ಹೇಳಿದರು. ಹವಾಮಾನ ಬದಲಾವಣೆ ಸಂಧರ್ಭದಲ್ಲಿ ಆದಿವಾಸಿಗಳು ಹೇಗೆ ಜೀವನನಾಧಾರತ ಕೃಷಿ ಪದ್ದತಿ ಯನ್ನು ಅಳವಡಿಸಿಕೊಳ್ಳವ ಬಗ್ಗೆ ಎಂಬುದರ ಬಗ್ಗೆ ಡಾ. ಮಹೇಂದ್ರಕುಮಾರ್ ತಿಳಿಸಿಕೊಟ್ಟರು
ಈ ಸಂದರ್ಭದಲ್ಲಿ ಮೇಟಿಕುಪ್ಪೆ ಆರ್ ಎಫ್ ಒ ಅಭಿಷೇಕ್, ಕಂದಾಯ ಇಲಾಖೆಯ ಸಹನಾ, ತಾಲೂಕು ಅರಣ್ಯ ಹಕ್ಕು ಒಕ್ಕೂಟದ ಅಧ್ಯಕ್ಷರಾದ ನಟರಾಜ್, ಆಶ್ರಮ ಶಾಲೆಯ ವಾರ್ಡನ್ ಲಕ್ಷ್ಮೀಕಾಂತ್ , ಆದಿವಾಸಿ ಮುಖಂಡರಾದ ದೇವಮ್ಮ, ಗ್ರೀನ್ ಇಂಡಿಯಾ ಸಂಸ್ಥೆಯ ಮಹೇಶ್ ಕುಮಾರ್ , ಕಾಳಯ್ಯ, ವಿಜಯ ಕುಮಾರ್, ಡಿಎಂ ಬಸವರಾಜ್, ಶಿವಣ್ಣ, ಬೊಮ್ಮಿ ಸೇರಿದಂತೆ ಗ್ರೀನ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು.