Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ಚೆಸ್ ಸ್ಪರ್ಧೆಯಲ್ಲಿ ವಿಜಯ ವಿಠ್ಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಮೈಸೂರು; ‘ಗ್ರೇಟ್ ಮೈಂಡ್ಸ್ಚೆಸ್‌ಅಕಾಡೆಮಿ’ ಆಯೋಜಿಸಿದ್ದ ಚೆಸ್ ಸ್ಪರ್ಧೆಯಲ್ಲಿ ಮೈಸೂರಿನ ವಿಜಯ ವಿಠ್ಠಲ ವಿದ್ಯಾಶಾಲೆ’ಯ ವಿದ್ಯಾರ್ಥಿಗಳು ಪ್ರಮುಖ ಸ್ಥಾನಗಳನ್ನು ಗಳಿಸಿ ಶಾಲೆಗೆ ಕೀರ್ತಿತಂದಿದ್ದಾರೆ.ಆರನೇತರಗತಿಯ ಅದ್ವಿತ್ ಎಂ. ಡಿ. ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಚಿರಂತ್‌ಆತ್ರೇಯ ಪಿ. ತೃತೀಯ ಸ್ಥಾನವನ್ನು ಗಳಿಸಿ ತಮ್ಮ ಅತ್ಯುತ್ತಮ ವ್ಯೂಹಾತ್ಮಕಚಿಂತನೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಿದ್ದಾರೆ.ಐದನೇತರಗತಿಯ ವಿಭಾಗದಲ್ಲಿ ರಾಘವೇಂದ್ರ ಹರ್ಷಿಲ್ ಸಿ. ಎಲ್. ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ, ಹಾಗೆಯೇ ಅಭಿನವ್‌ಎಸ್. ಪಂಚಮ ಸ್ಥಾನವನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

Read More

ಕಲ್ಪವೃಕ್ಷಕ್ಷೇತ್ರದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಉತ್ತರರಾಧನೆ ಮಹೋತ್ಸವ

ಮೈಸೂರು; ಇಲ್ಲಿನ ಎಂ.ಬಿ.ಹಳ್ಳಿ ರಸ್ತೆ, ನಿರ್ಮಾಣ್ ನಗರ, ಜಂತಗಳ್ಳಿಯಲ್ಲಿರುವ ಕಲ್ಪವೃಕ್ಷಕ್ಷೇತ್ರ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ೩೫೫ನೇ ರಾಯರಉತ್ತರರಾಧನೆ ಮಹೋತ್ಸವ ಸಡಗರಿಂದ ನಡೆಯಿತು. ಇದರ ಅಂಗವಾಗಿ ಶ್ರೀರಾಘವೇಂದ್ರಸ್ವಾಮಿಯವರಿಗೆ ಪಂಚಾಮೃತಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗನಡೆಯಿತು. ನಂತರ ರಾಯರ ಮೆರವಣಿಗೆಯನ್ನು ಕಲ್ಪವೃಕ್ಷಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು. ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.

Read More

ಮಳೆ ಕೊರತೆ: ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಡಿಸಿಎಂ ಡಾ. ಜಿ. ಪರಮೇಶ್ವರ್

• ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು.• ರೈತರಿಗೆ ಕಿರುಕುಳ ನೀಡದಂತೆ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಎಚ್ಚರಿಕೆ ಮೈಸೂರು; ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಮಂಗಳವಾರ ಮೈಸೂರು ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರನ ಕೊಪ್ಪಲು ಗ್ರಾಮದಲ್ಲಿ ಬರವೀಕ್ಷಣೆಯ ಸಂದರ್ಭದಲ್ಲಿ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ,…

Read More

ನಗರ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು : ಸಚಿವ ಹೆಚ್.ಸಿ.ಬಾಲಕೃಷ್ಣ

ಮೈಸೂರು: ರಾಜ್ಯದ ಜನಸಂಖ್ಯೆಯಲ್ಲಿ ಅಂದಾಜು ಶೇ ೪೦ ರಷ್ಟು ಜನ ನಗರ ಪ್ರದೇಶದಲ್ಲಿ ವಾಸವಾಗಿದ್ದು, ನಗರ ಪ್ರದೇಶಗಳ ಅಭಿವೃದ್ಧಿಗೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ ೩೦ ರಷ್ಟು ಅನುದಾನ ದೊರಕುತ್ತದೆ, ಉಳಿದ ಹಣವನ್ನು ಕ್ರೋಢೀಕರಿಸಬೇಕಿರುತ್ತದೆ. ಈ ಹಿನ್ನಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದು ಪೌರಾಡಳಿತ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು.ಮಂಗಳವಾರ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹಾಸನ ಹಾಗೂ ಮಂಡ್ಯ…

Read More

ಪಿಒಪಿ, ರಾಸಾಯನಿಕ ಬಣ್ಣದ ಗಣೇಶ ಮೂರ್ತಿ ಬಳಕೆ ನಿಷೇಧ: ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ

ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಿ.ಒಪಿ ಹಾಗೂ ರಾಸಾಯನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸದೇ, ನೈಸರ್ಗಿಕ ಬಣ್ಣ ಬಳಸಿ ತಯಾರಿಸಿರುವ ಮಣ್ಣಿನ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದರು.ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಅಪರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬ ಆಚರಿಸುವ ಸಂಬAಧ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ತಡೆಯಲು ಮೈಸೂರು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ…

Read More

ಸೆ.28 ರಿಂದ ಅ.5ರವರೆಗೆ ದಸರಾದ ಯುವ ಸಂಭ್ರಮ

ಮೈಸೂರು: ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮನರಂಜೆಯ ಮುನ್ಮ್ನಡಿಯಾದ ಯುವ ಸಂಭ್ರಮ ಈ ಬಾರಿ ಸೆ.28ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದೆ.ಸ್ಥಳೀಯ ಕಾಲೇಜು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ನಗರದ ಮಾನಸಗಂಗೋತ್ರಿಯ ಬಯಲು ರಂಗಮAದಿರದಲ್ಲಿ ನಡೆಸಿಕೊಂಡು ಬರುತ್ತಿರುವ ಯುವ ಸಂಭ್ರಮವನ್ನು ಈ ಬಾರಿ ಸೆ.28ರಿಂದ ಅಕ್ಟೋಬರ್ 5 ರವರೆಗೆ ವಿಶೇಷವಾಗಿ ಆಯೋಜಿಸಲು ಉಪ ಸಮಿತಿ ನಿರ್ಧರಿಸಿದ್ದು, ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ನಡೆಸಿ ಹಲವಾರು…

Read More

ಅಪರಿಚಿತ ವ್ಯಕ್ತಿಯ ಶವ ಪತ್ತೆಮೈಸೂರು: ನಗರದ ಕೆ.ಆರ್.ಆಸ್ಪತ್ರೆಯ ದೇವರಾಜ ಪೊಲೀಸ್ ಠಾಣೆಯ ಉಪ ಠಾಣಾ ಸರಹದ್ದಿನಲ್ಲಿ ಬೋಗಾದಿ ರಿಂಗ್ ರಸ್ತೆಯ ದೇಶಿಲಿಂಗೇಶ್ವರ ದೇವಸ್ಥಾನದ ಮುಂಬಾಗದ ಫುಟ್ಬಾತ್ ರಸ್ತೆಯಲ್ಲಿ ನಿತ್ರಾಣನಾಗಿದ್ದ ಸುಮಾರು 40-45 ವರ್ಷದ ಅಪರಿಚಿತ ವ್ಯಕ್ತಿಯನ್ನು ಆಂಬುಲೆನ್ಸ್ನಲ್ಲಿ ಕರೆತಂದು ಚಿಕಿತ್ಸೆಗೆಂದು ದಾಖಲಿಸಿದ್ದು, ಸದರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮೃತ ವ್ಯಕ್ತಿ 5.0 ಅಡಿ ಎತ್ತರ, ಬಿಳಿ ಹಾಗೂ ಕಪ್ಪು ಬಣ್ಣದ ತಲೆ ಕೂದಲು, ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾರೆ. ಕಪ್ಪು ಮೈಬಣ್ಣ,…

Read More

ಸೆ. 5 ರಂದು ಹುಣಸೂರಿನಲ್ಲಿ ಪ್ರಜಾಸೇವೆ ಅಭಿಯಾನಮೈಸೂರು: ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಪ್ರಜಾಸೇವಾ ಅಭಿಯಾನದಡಿ ಮೈಸೂರು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 05 ರಿಂದ ಸಭೆಗಳು ಪ್ರಾರಂಭವಾಗಲಿವೆ. ಸಾರ್ವಜನಿಕ ಕುಂದು-ಕೊರತೆಗಳನ್ನು ಆಲಿಸಿ ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಸಭೆಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ್ ರೆಡ್ಡಿ.ಜಿ ತಿಳಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಹುಣಸೂರು ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಪ್ರಜಾಸೇವ ಅಭಿಯಾನ ಕಾರ್ಯಕ್ರಮವನ್ನು ಸೆಪ್ಟೆಂಬರ್ 05 ರಂದು ಬೆಳಿಗ್ಗೆ 11 ಗಂಟೆಗೆ ಹುಣಸೂರು ಟೌನ್‌ನ ಡಾ. ಬಿ.ಆರ್. ಅಂಬೇಡ್ಕರ್…

Read More

ಎನ್‌ಆರ್ ಕ್ಷೇತ್ರದಲ್ಲಿ ತಲಾ 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 3 ನೀರಿನ ಟ್ಯಾಂಕ್‌ಗಳ ಉದ್ಘಾಟನೆ

ಮೈಸೂರು : ನಗರದ ಎನ್‌ಆರ್ ಕ್ಷೇತ್ರದ ಕೆಸರೆ ಬಡಾವಣೆಯ ಹೈದರ್ ಅಲೀ ಉದ್ಯಾನವನ, ನಾಯ್ಡು ನಗರದ ಮುಖ್ಯರಸ್ತೆ ಮತ್ತು ಶಿವಾಜಿ ರಸ್ತೆಯಲ್ಲಿರುವ ಶಿವಾಜಿ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಬೃಹತ್ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡುವ ಮೂರು ಟ್ಯಾಂಕ್‌ಗಳನ್ನು ಶಾಸಕ ತನ್ವೀರ್ ಸೇಠ್ ಸೋಮವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು , ಮೈಸೂರು ಮಹಾನಗರ ಪಾಲಿಕೆವತಿಯಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಐದು ಲಕ್ಷ ಲೀಟರ್ ನೀರು ಸಂಗ್ರಹಣೆ ಮಾಡಬಹುದಾಗಿದೆ. 1.30 ಕೋಟಿ ರೂ…

Read More

ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳ ಪುನರ್ವಸತಿಗೆ ಆಗ್ರಹಿಸಿ ಸಫಾಯಿ ಕರ್ಮಾಚಾರಿ ಕಾವಲು ಸಮಿತಿಯಿಂದ ಜಾಗೃತಿ ಜಾಥಾ

ಮೈಸೂರು : ಸರ್ಕಾರ ರಾಜ್ಯದಲ್ಲಿ ಮಲಹೊರುವ ಪದ್ದತಿಯನ್ನು ನಿಷೇಧಿಸಿದ್ದು, ಪುನರ್ವಸತಿ ಕಾಯ್ದೆ 2013ರ ಸಮಗ್ರ ಅನೂಷ್ಠಾನಕ್ಕಾಗಿಸಪಾಯಿ ಕರ್ಮಾಚಾರಿ ಕಾವಲು ಸಮಿತಿಯಿಂದ ನಡೆಸುತ್ತಿರುವ ರಾಜ್ಯ ಮಟ್ಟದ ಜನ ಜಾಗೃತಿ ಅಭಿಯಾನ-2026 ಸೋಮವಾರ ಮೈಸೂರಿನಲ್ಲಿ ನಡೆಯಿತು.ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಪಾಯಿ ಕರ್ಮಾಚಾರಿ ಕಾವಲು ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಸಂಚಾಲಕ ಡಾ.ಕೆ.ಬಿ.ಓಬಳೇಶ್ ಮಾತನಾಡಿ, ಮನುಷ್ಯರನ್ನು ಮಲ, ಮಲಮಿಶ್ರಿತ ತ್ಯಾಜ್ಯ ಅಥವಾ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಅಪಾಯಕಾರಿ ಹಾಗೂ ಅಮಾನವೀಯ ಕೃತ್ಯಗಳಲ್ಲಿ ನಿಯೋಜಿಸುವುದು ಮನುಷ್ಯರ ಘನತೆಗೆ…

Read More