ನಾಗೇಂದ್ರ ಆರೋಪಿ ಅಷ್ಟೇ, ಅಪರಾಧಿ ಅಲ್ಲ;ಸಚಿವ ಬಾಲಕೃಷ್ಣ
*ಬಿಜೆಪಿಯವರಿಗೆ ನಮ್ಮನ್ನು ಬೈದುಕೊಂಡು ಓಡಾಡುವುದೇ ಕೆಲಸ ಮೈಸೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿರೂಗಳ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಆರೋಪಿ ಅಷ್ಟೇ, ಅಪರಾಧಿ ಅಲ್ಲ; ಪ್ರಕರಣ ಕೋರ್ಟ್ನಲ್ಲಿದೆ, ತೀರ್ಪು ಏನಾಗುತ್ತೋ ನೋಡೋಣ ಎಂದು ಸಚಿವ ಬಾಲಕೃಷ್ಣ ಹೇಳಿದರು. ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದವರು ನಮ್ಮನ್ನು ಹೊಗಳುತ್ತಾರೆಯೇ? ನಮ್ಮನ್ನು ತೆಗಳುವುದು, ಬೈದುಕೊಂಡು ಓಡಾಡುವುದೇ ಅವರ ಕೆಲಸ ಎಂದು…