Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

9 ಆನೆಗಳಲ್ಲಿನ ತೂಕದಲ್ಲಿ ಶ್ರೀಕಂಠ ಆನೆಯೇ ಬಲ ಭೀಮ !

ಮೈಸೂರು: ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸಲೆಂದು ಕಾಡಿನಿಂದ ಅರಮನೆ ನಗರಿ ಮೈsಸೂಗೆ ಬಂದು ಅಂಬಾವಿಲಾಸ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಯ ಮೊದಲ ತಂಡದ 9 ಆನೆಗಳ ತೂಕ ಪರಿಶೀಲನೆಯನ್ನು ಭಾನುವಾರ ನಡೆಸಲಾಯಿತು. ಅಂಬಾವಿಲಾಸ ಅರಮನೆಯ ಶೆಡ್‌ಗಳಿಂದ ಎಲ್ಲಾ 9 ಆನೆಗಳನ್ನು ಧನ್ವಂತರಿ ರಸ್ತೆಯಲ್ಲಿರುವ ತೂಕ ಮಾಪನ ಕೇಂದ್ರ ಸಾಯಿರಾಂ ಅಂಡ್ ಕಂಪನಿ ಕೇಂದ್ರಕ್ಕೆ ಕರೆತರಲಾಯಿತು. ದಾರಿಯುದ್ದಕ್ಕೂ ಜನರು ತಮ್ಮ ಕಣ್ಣ ಮುಂದೆ ಸಾಲಾಗಿ ಹಾದು ಹೋಗುತ್ತಿದ್ದ ಆನೆಗಳನ್ನು ನೋಡಿ ಖುಷಿಗೊಂಡರು. ತಮ್ಮ ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಂಡರು. ಕೆಲವರು ಆನೆಗಳು ಗಣಪತಿ ದೇವರ ಸ್ವರೂಪ ಎಂದು ಭಾವಿಸಿ, ಭಕ್ತಿಯಿಂದ ನಮಿಸಿದರು, ಅವುಗಳಿಗೆ ಹಾಕಲೆಂದು ಹೂವುಗಳನ್ನು ನೀಡಿದರು. ತೂಕ ಮಾಪನ ಕೇಂದ್ರಕ್ಕೆ ಬಂದ ಆನೆಗಳಲ್ಲಿ ಒಂದೊAದೆ ಆನೆಗಳನ್ನು ತೂಕ ಹಾಕಲಾಯಿತು.
ಇದರಲ್ಲಿ ಶ್ರೀಕಂಠ ಆನೆ ಬಲ ಭೀಮನಾಗಿದ್ದು, ಆನಂತರದ ಸ್ಥಾನವನ್ನು ಏಕಲವ್ಯ ಪಡೆದಿದ್ದಾನೆ.
ಯಾವ ಆನೆ ಎಷ್ಟು ತೂಕವಿದೆ :

ಶ್ರೀಕಂಠ -5,770 ಕೆ.ಜಿ.
ಮಹೇಂದ್ರ -5,490 ಕೆಜಿ
ಧನಂಜಯ -5,480 ಕೆಜಿ
ಪ್ರಶಾಂತ -5,19 ಕೆಜಿ
ಏಕಲವ್ಯ -5,610 ಕೆಜಿ
ಗೋಪಿ -5,170 ಕೆಜಿ
ಶ್ರೀರಾಮ -4,820 ಕೆಜಿ
ಕಾವೇರಿ -3,075 ಕೆ.ಜಿ
ಲಕ್ಷಿ÷್ಮÃ -3,920 ಕೆಜಿ ತೂಕವಿದೆ. ತೂಕ ಹಾಕಿದ ನಂತರ ಆನೆಗಳನ್ನು ಮತ್ತೆ ಸ್ವಸ್ಥಾನಕ್ಕೆ ಕರೆದುಕೊಂಡು ಹೋಗುವ ಮೂಲಕ ರಾಜರೂರಿನ ರಾಜಬೀದಿಗಳಲ್ಲಿ ಗಜಪಡೆಯ ತಾಲೀಮು ಆರಂಭಿಸಲಾಯಿತು. 

ರೀಲ್ಸ್ ಮಾಡುವಂತಿಲ್ಲ;
“ದಸರಾ ಗಜಪಡೆ ತಾಲೀಮು ಹಾಗೂ ಶಿಬಿರಗಳ ಸ್ಥಳದಲ್ಲಿ ಗಜಪಡೆಗಳೊಂದಿಗೆ ರೀಲ್ಸ್ ಮಾಡುವುದು, ಜಾಲತಾಣಗಳಲ್ಲಿ ಸುಳ್ಳು ವಿಡಿಯೋಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅರಮನೆ ಆವರಣದಲ್ಲಿ ಗಜಪಡೆ ನೋಡಲು ವಿಧಿಸಿದ್ಧ ಶುಲ್ಕವನ್ನು ವಾಪಸ್ ಪಡೆಯಲಾಯಿತು. ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ಹಲವು ಆನೆಗಳು ಸದೃಢವಾಗಿವೆ. ತಾಲೀಮಿನ ನಂತರ ಜಂಬೂಸವಾರಿ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲಾಗುವುದು” ಎಂದು ಡಿಸಿಎಫ್ ಪ್ರಭುಗೌಡ ಸುದ್ದಿಗಾರರಿಗೆ ತಿಳಿಸಿದರು.
ಈ ಬಾರಿ ನಾಡಹಬ್ಬ ದಸರಾವನ್ನು ವಿಭಿನ್ನವಾಗಿ ಆಚರಿಸುವ ಸಿದ್ಧತೆಗಳು ಭರದಿಂದ ಸಾಗಿದೆ. ಮತ್ತೊಂದು ಕಡೆ ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆ ಗಜಪಡೆಗಳನ್ನು ಸಿದ್ಧಗೊಳಿಸುತ್ತಿರುವುದು. ಈಗಾಗಲೇ ಗಜಪಯಣದ ಮೂಲಕ ಮೈಸೂರು ಅರಮನೆಯನ್ನು ಪ್ರವೇಶ ಮಾಡಿರುವ ಮೊದಲ ಗಜಪಡೆಯ ತಂಡದ ತೂಕ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದರು.
ಡಿಸಿಎಫ್ ಪ್ರಭುಗೌಡ ಪ್ರತಿಕ್ರಿಯೆ.

———ಕೋಟ್—
ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ, ಆನೆಗಳ ಆರೋಗ್ಯವನ್ನು ನೋಡಿ ಅವುಗಳಿಗೆ ವಿಶೇಷ ಆಹಾರ ನೀಡಲು ತೂಕ ಪರೀಕ್ಷೆ ಸಹಾಯವಾಗಲಿದ್ದು, ಆನಂತರ ಬೆಳಗ್ಗೆ ಮತ್ತು ಸಂಜೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮನ್ನು ಆರಂಭಿಸುತ್ತೇವೆ.
-ಡಿಸಿಎಫ್ ಪ್ರಭುಗೌಡ