Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೆಸ್ಕ್ ಜೂನಿಯರ್ ಪವರ್‌ಮ್ಯಾನ್‌ಗಳಿಗೆ ಪ್ರವೇಶಾತಿ ತರಬೇತಿ


ಮೈಸೂರು; ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ನೂತನವಾಗಿ ನೇಮಕಗೊಂಡಿರುವ ಜೂನಿಯರ್ ಪವರ್‌ಮ್ಯಾನ್‌ಗಳ 4ನೇ ತಂಡದವರಿಗೆ ಆರು ದಿನಗಳ ಪ್ರವೇಶಾತಿ ತರಬೇತಿಗೆ ಸೋಮವಾರ ಚಾಲನೆ ನೀಡಲಾಯಿತು.
ಮೈಸೂರಿನ ಕಡಕೊಳದಲ್ಲಿರುವ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಕ್ರಮದ ಮೊದಲ ದಿನದಂದು, ವಿದ್ಯುತ್ ವಿತರಣಾ ವ್ಯವಸ್ಥೆ, ಟ್ರಾನ್ಸ್ಫಾರ್ಮರ್ ನಿರ್ವಹಣೆ, ಸುರಕ್ಷತಾ ಕ್ರಮಗಳು ಹಾಗೂ ವಿದ್ಯುತ್ ಕಳ್ಳತನ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಸೇರಿದಂತೆ ಇತರೆ ಪ್ರಮುಖ ವಿಷಯಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಹಾಗೂ ವಿಡಿಯೋಗಳ ಮೂಲಕ ಸಂಬAಧಿಸಿದ ಅಧಿಕಾರಿಗಳು ತರಬೇತಿ ನೀಡಿದರು.
ಮೊದಲ ದಿನದಂದು ನಡೆದ ತರಬೇತಿಯ ಮೊದಲ ಅವಧಿಯಲ್ಲಿ ಮಾತನಾಡಿದ ಸೆಸ್ಕ್ ತರಬೇತಿ ಶಾಖೆ ಉಪ ಪ್ರಧಾನ ವ್ಯವಸ್ಥಾಪಕಿ ಎಂ.ವೈ.ಹೇಮಾ, “ಪವರ್‌ಮ್ಯಾನ್‌ಗಳು ಗ್ರಾಹಕರು ಹಾಗೂ ಸೆಸ್ಕ್ ನಡುವಿನ ಸಂಪರ್ಕದ ಸೇತುವೆಯಾಗಿರುತ್ತಾರೆ. ಹೀಗಾಗಿ ಅವರುಗಳು ಗ್ರಾಹಕರೊಂದಿಗೆ ಸಂಯಮ, ಸಹನೆ, ಸೌಹಾರ್ದತೆಯಿಂದ ನಡೆದುಕೊಂಡು, ಅಡಚಣೆರಹಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಆದ್ದರಿಂದ ಕರ್ತವ್ಯದಲ್ಲಿ ಯಾವುದೇ ತಪುö್ಪಗಳು ಸಂಭವಿಸಿದಾಗ ಅದನ್ನು ಸರಿಪಡಿಸಲು ವಿಳಂಬ ಮಾಡಬಾರದು. ಅದರಲ್ಲೂ ಜೀವಕ್ಕೆ ಹಾನಿಯಾಗುವಂತಹ ತಪುö್ಪಗಳನ್ನು ಮಾಡದಂತೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ತಡೆರಹಿತ ವಿದ್ಯುತ್ ಒದಗಿಸುವುದು ಸೆಸ್ಕ್ನ ಪ್ರಮುಖ ಧ್ಯೇಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ವಿವಿಧ ಸಂಸ್ಥೆಗಳು ಹಾಗೂ ಮುಖ್ಯವಾಗಿ ಗ್ರಾಹಕರ ಸಹಕಾರದೊಂದಿಗೆ ಈ ಗುರಿ ಸಾಧಿಸಲು ನಿರಂತರವಾಗಿ ಕಾರ್ಯನಿರ್ವಹಿಸಬೇಕಿದೆ,” ಎಂದು ಹೇಳಿದರು.
ನಂತರದ ಅವಧಿಗಳಲ್ಲಿ ಜೂನಿಯರ್ ಪವರ್ ಮ್ಯಾನ್ ಗಳ ಕರ್ತವ್ಯ ಹಾಗೂ ಲೈನ್ ಗಳ ಸಂರಕ್ಷಣೆ ಮಾಡುವ ಕುರಿತು ನಿವೃತ್ತ ಅಧೀಕ್ಷಕ ಇಂಜಿನಿಯರ್ ವೈರಮುಡಿ, ಟ್ರಾನ್ಸ್ಫಾರ್ಮರ್ ನಿರ್ವಹಣೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಸಿ. ಮೋಹನ್ ಶಂಕರ್ ಹಾಗೂ ವಿದ್ಯುತ್ ಸುರಕ್ಷತೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಸ್. ವಿಶ್ವನಾಥ್ ಸೂಕ್ತ ಮಾಹಿತಿಯೊಂದಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಸೆಸ್ಕ್ ತರಬೇತಿ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎನ್. ಜ್ಯೋತಿ, ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ನಿವೃತ್ತ ಅಧೀಕ್ಷಕ ಇಂಜಿನಿಯರ್ ಜೆ.ಬಿ. ಯೋಗೇಗೌಡ ಇತರರಿದ್ದರು.