Category: ಸಂಸ್ಕ್ರುತಿ
ಐದು ದಿನಗಳ ಕಾಲ ನಡೆದ ಬಣ್ಣದ ಮಾಂತ್ರಿಕ ಬಿ.ಎಂ.ರಾಮಚ0ದ್ರ ವಿದ್ಯಾರ್ಥಿ ನಾಟಕೋತ್ಸವ
ಮೈಸೂರು; ರಂಗಯಾನಟ್ರಸ್ಟ್ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ಒಂದು ತಿಂಗಳ ರಂಗ ಕಾರ್ಯಾಗಾರವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಆಯೋಜಿಸಿ, ಅದರಲ್ಲಿ ಸಿದ್ದಗೊಂಡ ನಾಟಕಗಳನ್ನು ಮೈಸೂರಿನ ಹಿರಿಯರಂಗಕರ್ಮಿ ಬಿ.ಎಂ ರಾಮಚಂದ್ರಅವರ ಹೆಸರಿನಲ್ಲಿ“ಬಣ್ಣದ ಮಾಂತ್ರಿಕ ಬಿ.ಎಂ.ರಾಮಚ0ದ್ರ ವಿದ್ಯಾರ್ಥಿ ನಾಟಕೋತ್ಸವವನ್ನು ನಗರದ ಕಲಾಮಂದಿರದಲ್ಲಿರುವ ಕಿರುರಂಗಮ0ದಿರದಲ್ಲಿ ಆಯೋಜಿಸಲಾಗಿತ್ತು.ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳಿಗೋಸ್ಕರ ಎಂಬ ಶೀರ್ಷಿಕೆಯಡಿಆಯೋಜನೆಗೊಂಡಿದ್ದ ಈ ನಾಟಕೋತ್ಸವದಲ್ಲಿ ಮೈಸೂರಿನ ಸರ್ಕಾರಿ ಪದವಿ ಪೂರ್ವಕಾಲೇಜುಒಂಟಿಕೊಪ್ಪಲು, ಸರ್ಕಾರಿ ಪದವಿ ಪೂರ್ವಕಾಲೇಜುಮಂಚೇಗೌಡನಕೊಪ್ಪಲು, ಮಹಾರಾಜಕಾಲೇಜು, ಹಾರ್ಡ್ವಿಕ್ಪದವಿ ಪೂರ್ವಕಾಲೇಜು, ಎಂ.ಐ.ಟಿ ಪ್ರಥಮದರ್ಜೆಕಾಲೇಜು, ಎಸ್.ಡಿ.ಎಂ ಮಹಿಳಾ…