
ಮೈಸೂರು: ಭೋವಿ ಜನಾಂಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದು ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ.ಎಂ ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾಖಲಾತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟಲ್ ವ್ಯವಸ್ಥೆ ಸಿಗಲಿದೆ. ಕಾಲೇಜು, ಶಾಲೆಗಳಿಗೆ ದಾಖಲಾತಿ ಪ್ರಾರಂಭವಾಗಿದ್ದು, ಜಾತಿ ಪ್ರಮಾಣಪತ್ರವನ್ನು ವಿಳಂಭವಾಗದAತೆ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೋವಿ ಜನಾಂಗದ ಮಹಿಳೆಯರನ್ನು ಒಟ್ಟಗೂಡಿಸಿ ಸಂಘ ರಚಿಸಿ, ಅವರಿಗೆ ಸರ್ಕಾರದ ಸಾಲ ಯೋಜನೆಗಳನ್ನು ಒದಗಿಸಿಕೊಟ್ಟು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬಹುದು. ಮೈಕ್ರೋ ಕ್ರೆಡಿಟ್ ಯೋಜನೆಯಡಿ ಭೋವಿ ಜನಾಂಗದ ಕನಿಷ್ಠ ೧೦ ಮಹಿಳಾ ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಉತ್ಪದನಾ ಚಟುವಟಿಕೆಗೆ ೨.೫೦ ಲಕ್ಷ ಸಹಾಯಧನ ಮತ್ತು ೨.೫೦ ಲಕ್ಷ ಸಾಲ ಸೌಲಭ್ಯ ಸಿಗುತ್ತದೆ. ಭೋವಿ ಜನಾಂಗದ ಹೆಣ್ಣು ಮಕ್ಕಳು ಈ ಯೋಜನೆ ಪಡೆಯಲು ಮುಂದೆ ಬರಬೇಕು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಭೋವಿ ಜನಾಂಗದ ಮುಖಂಡರು ಮಹಿಳೆಯರಿಗೆ ಮಾಹಿತಿ ನೀಡಿ, ಅವರನ್ನು ಯೋಜನೆ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳ ಪಟ್ಟ ಬ್ಯಾಂಕ್ ವರು ಲೀಡ್ ಬ್ಯಂಕ್ ವ್ಯವಸ್ಥಾಪಕರಿಗೆ ನೀಡಿದರೆ, ಸಾಲ ನೀಡಲು ಬ್ಯಾಂಕ್ ನಿರಾಕರಿಸಿದರೆ, ನಿರಾಕರಿಸಿದಕ್ಕೆ ನಿಖರ ಮಾಹಿತಿ ದೊರಕುತ್ತದೆ ಎಂದರು.
ಭೋವಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆಯ್ಕೆ ಮಾಡಲಾಗುವುದು. ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಶೇ ೧೦೦ ರಷ್ಟು ಸಾಧನೆ ಮಾಡಬೇಕು. ಭೋವಿ ಜನಾಂಗದ ಮುಖಂಡರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಹೆಚ್ಚು ಜನರು ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳಿ ಎಂದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರ ನಾಯಕ್ ಮಾತನಾಡಿ,
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸ್ವಯಂ ಉದ್ಯೋಗ ನೇರಸಾಲ ಯೋಜನೆ,ಕುರಿ/ ಮೇಕೆ ಸಾಕಾಣಿಕೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜಬೆ, ಹೈನುಗಾರಿಕೆ, ಸ್ವಾವಲಂಭಿ ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯ ಉಪಯುಕ್ತತೆಯ ಬಗ್ಗೆ ವಿವರಿಸಿದರು.
ಭೋವಿ ಜನಾಂಗದವರು ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಮಾತನಾಡಿ, ಈವರೆಗೆ ಬ್ಯಾಂಕನಿAದ ಸಾಲ ಪಡೆಯದೇ ಇರುವ ಫಲಾನುಭವಿಗಳ ಸಿಬಿಲ್ ಸ್ಕೋರ್ ಶೂನ್ಯ ಇರುತ್ತದೆ. ಇದು ಸಾಲ ಪಡೆಯಲು ಸಮಸ್ಯೆಯಾಗುವುದಿಲ್ಲ. ಭೋವಿ ನಿಗಮದವರು ಯೋಜನೆವಾರು ನೋಡಲ್ ಅಧಿಕಾರಿ ನೇಮಕ ಮಾಡಿ, ಫಲಾನುಭವಿಗಳು ಹಾಗೂ ಬ್ಯಾಂಕ್ ನೊಂದಿಗೆ ಸಮನ್ವಯ ಕೆಲಸ ನಿರ್ವಹಿಸಬೇಕು. ಬ್ಯಾಂಕ್ ನಿಂದ ಸಾಲ ನೀಡಲು ನಿರಾಕರಣೆಯಾದರೆ ನಿಖರವಾದ ಕಾರಣ ಸಿಗುತ್ತದೆ ಹಾಗೂ ಸಮಸ್ಯೆ ಇದ್ದಲಿ ಸರಿಪಡಿಸಬಹುದು, ಶೇ ೧೦೦ ರಷ್ಟು ಗುರಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಭೋವಿ ಸಮುದಾಯದ ಮುಖಂಡರು ಯೋಜನೆಗಳ ಕುರಿತು ಜನರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಬ್ಯಾಂಕ್ ನಿಂದ ಸಾಲ ಪಡೆಯುವ ಯೋಜನೆಗಳನ್ನು ಸರಳ ಪಡಿಸಬೇಕು. ಯೋಜನೆಗಳನ್ನು ಬಡ ಅರ್ಹ ಫಲಾನುಭವಿಗಳಿಗೆ ಒದಗಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್, ಉಪ ಪೊಲೀಸ್ ಆಯುಕ್ತೆ ಕರ್ನಾಟಕ ಕಾನೂನು ಸುವ್ಯವಸ್ಥೆ ಡಿಸಿಪಿ ಹರ್ಷ ಪ್ರಿಯಂವದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಪ್ಪ ಕೆ ಲಾಳಿ, ಚೆಸ್ಕಾಂ ಚೀಫ್ ಇಂಜಿನಿಯರ್ ಸುನೀಲ್ ಭೋವಿ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು